ಹುಬ್ಬಳ್ಳಿ: ಸಾಧಕರನ್ನು ಗುರುತಿಸಿ ಕೊಡುವ ಪ್ರಶಸ್ತಿಗಳಿಗಿಂತ ಲಾಬಿಗಳಿಗೆ ನೀಡುವ ಪ್ರಶಸ್ತಿಗಳೇ ಪ್ರಸ್ತುತ ದಿನಮಾನಗಳಲ್ಲಿ ಹೆಚ್ಚಾಗಿವೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ನೀಡಲಾಗುತ್ತಿರುವ ಪ್ರಶಸ್ತಿಗೂ ದೊಡ್ಡಮಟ್ಟದ ಲಾಬಿ ನಡೆಯುತ್ತಿರುವುದು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದೆ.
ಹೌದು..ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಅವಳಿನಗರದ ಸಾಧಕರಿಗೆ ‘ಧೀಮಂತ’ ಪ್ರಶಸ್ತಿ ಪ್ರದಾನ ಮಾಡಲಿದ್ದು, ಈ ವರ್ಷ ಆನ್‌ಲೈನ್ (ಜಿ-ಮೇಲ್ ಮತ್ತು ವಾಟ್ಸ್‌ಆ್ಯಪ್)ನಲ್ಲಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 30 ಕೊನೆಯ ದಿನವಾಗಿದ್ದು, ಜೋರಾಗಿ ಲಾಬಿ ನಡೆದಿದೆ. ಪ್ರಸ್ತುತ ವರ್ಷ 68 ಮಂದಿಗೆ ಧೀಮಂತ ಪ್ರಶಸ್ತಿ ನೀಡಲು ನಿಶ್ಚಯಿಸಲಾಗಿದ್ದು, ಅಕ್ಟೋಬರ್ 22ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಪ್ರಶಸ್ತಿಗೆ ಆಯ್ಕೆ ಬಯಸಿ 100ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಶಾಸಕರ ಮೂಲಕವೂ ಅಯ್ಕೆ ಸಮಿತಿ ಮೇಲೆ ಒತ್ತಡವಿದೆ. ಕೆಲವರು ಪಾಲಿಕೆ ಸದಸ್ಯರ ಹಾಗೂ ಅಧಿಕಾರಿಗಳ ಮೂಲಕ ತಮ್ಮನ್ನೇ ಪ್ರಶಸ್ತಿಗೆ ಆಯ್ಕೆ ಮಾಡಲು ಕೋರಿದ್ದಾರೆ. ಇದರಿಂದ ಒತ್ತಡಕ್ಕೆ ಒಳಗಾಗಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆಯೇ ಎಂಬುವಂತ ಅನುಮಾನ ದಟ್ಟವಾಗಿದೆ.
ಇನ್ನೂ ಅತ್ಮೀಯತೆಗೆ, ಸ್ನೇಹಕ್ಕೆ ಕಟ್ಟು ಬಿದ್ದು ಅವರು ಸಮಿತಿ ಸದಸ್ಯರನ್ನು ಸಂಪರ್ಕಿಸಿ, ಹೆಸರು ಪರಿಶೀಲಿಸಲು ಕೋರಿದ್ದಾರೆ. ಅದು ಏನೇ ಇರಲಿ ಪಾರದರ್ಶಕವಾಗಿ ಹಾಗೂ ಸಾಧಕರಿಗೆ ಧೀಮಂತ ಪ್ರಶಸ್ತಿ ನೀಡಬೇಕು ವಿನಃ ಯಾರದೋ ಮುಲಾಜಿಗೆ ಒಳಗಾಗಿ ಪ್ರಶಸ್ತಿ ನೀಡುವಂತ ಕಾರ್ಯಕ್ಕೆ ಮುಂದಾಗಬಾರದು ಎಂಬುವುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.
ಅತ್ಯಾಚಾರ, ದರೋಡೆ ಮಾಡುವುದರಲ್ಲಿ ಮುಸ್ಲಿಮರೇ ನಂ.1 ಎಂದ ರಾಜಕಾರಣಿ ಅಜ್ಮಲ್; ಭಾರಿ ವಿವಾದ
ಬರಕ್ಕೆ ಈರುಳ್ಳಿ ಬೆಳೆ ಕುಂಠಿತ; ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ, ರೈತನ ಪಾಲಿಗೂ ಕಣ್ಣೀರುಳ್ಳಿ