ಹುಬ್ಬಳ್ಳಿ: ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸಕ್ಕೆ ಕೊನೆ ಇಲ್ಲದಂತಾಗಿದೆ. ರೌಡಿಗಳ ಕಾಟದಿಂದಾಗಿ ನಗರದ ಜನತೆ ತತ್ತರಿಸಿ ಹೋಗಿದ್ದಾರೆ. ನಿನ್ನೆ ಸಾಯಂಕಾಲ ನಗರದ ಗಬ್ಬೂರಿನ ಆರ್ಟಿಒ ಕಛೇರಿ ಬಳಿ ಅಣ್ಣಿಗೆರೆ ಯುವಕನನ್ನು ಪುಡಿರೌಡಿಗಳು ಮನಬಂದಂತೆ ಥಳಿಸಿ ಚಾಕು ಇರಿದಿದ್ದಾರೆ.
ಪ್ರೇಮಿಗಳಿಗೆ ಸಹಾಯ ಮಾಡಿದ್ದಾನೆ ಎನ್ನುವ ಕಾರಣಕ್ಕೆ ನಿನ್ನೆ ಮಧ್ಯಾಹ್ನ 4.00 ಗಂಟೆ ಸುಮಾರಿಗೆ ಹೊನ್ನಪ್ಪ ಸೇರಿದಂತೆ ಐದು ಜನರು ರೌಡಿಗಳು ಸೋಮನಗೌಡನನ್ನು ಹುಡುಕಿಕೊಂಡು ಹೋಗಿ ಹಲ್ಲೆ ನಡೆಸಿ ಚಾಕು ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ವಿಚಾರ ತಿಳಿದ ನಗರದ ಜನತೆ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಜೀವನ ನಡೆಸುತ್ತಿದ್ದಾರೆ. ಚಾಕು ಇರಿತ ಪ್ರಕರಣ ಕುರಿತಂತೆ ಬೆಂಡಿಗೆರೆ ಠಾಣೆಯಲ್ಲಿ ಎರಡು ಕಡೆಯಿಂದ ದೂರು ಹಾಗೂ ಪ್ರತಿದೂರುಗಳು ದಾಖಲಾಗಿವೆ.
2A Reservation: ಮೀಸಲಾತಿಗಾಗಿ ಇಷ್ಟಲಿಂಗ ಪೂಜೆ ಮಾಡಿ ಪ್ರತಿಭಟನೆ ಕೈಗೊಳ್ಳುತ್ತೇವೆ. ಜಯಮೃತ್ಯುಂಜಯ ಸ್ವಾಮಿಜಿ..!
ರಸ್ತೆಯ ಮಧ್ಯೆ ಎತ್ತಿನಗಾಡಿ ನಿಲ್ಲಿಸಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಕೈಗೊಂಡ ರೈತರು..!
ಸಿದ್ದರಾಮಯ್ಯ ಸರ್ಕಾರದಲ್ಲಿ ರೈತರಿಗೆ ರಕ್ಷಣೆ ಇಲ್ಲ; ಅಡಿಕೆ ಬೆಳೆಗಾರರ ಅಳಲು