Thursday, May 30, 2024

Latest Posts

ಹುಬ್ಬಳ್ಳಿ ಅಂಜಲಿ ಹಂತಕನ ಪತ್ತೆಗೆ ಎರಡು ವಿಶೇಷ ತಂಡ ರಚನೆ, ಪೊಲೀಸ್ ಆಯುಕ್ತೆ ಹೇಳಿದ್ದೇನು?

- Advertisement -

Hubli News: ನೇಹಾ ಭೀಕರ ಹತ್ಯೆ ಪ್ರಕರಣ ಮಾಸುವ ಮುನ್ನವೇ ಇಂದು(ಮೇ.15) ಬೆಳಿಗ್ಗೆ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ ಎಂಬ 21 ವರ್ಷದ ಯುವತಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಕುರಿತು ಮಾತನಾಡಿದ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರು ಅಂಜಲಿ ಪ್ರೀತಿ ನಿರಾಕರಣೆ ಮಾಡಿದ್ದಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿ ಪತ್ತೆಗಾಗಿ ಎರಡು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ ಎಂದಿದ್ದಾರೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆಯ ಕಹಿ ನೆನಪು ಇನ್ನೂ ಹಸಿಯಾಗಿರುವಾಗಲೇ ಅದೇ ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯನ್ನ ಹತ್ಯೆಗೈಯಲಾಗಿದೆ. ಯುವತಿಯನ್ನು ಪಾಗಲ್ ಪ್ರೇಮಯೊಬ್ಬನು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಸದ್ಯ ಆರೋಪಿಯ ಬಂಧನಕ್ಕೆ ಪೊಲೀಸರು ತಂಡ ಸಿದ್ಧಪಸಿಡಿದ್ದಾರೆ. ಕಳೆದ 3 ದಿನಗಳಿಂದ ರಜೆ ಮೇಲೆ ತೆರಳಿದ್ದ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅಂಜಲಿ ಕೊಲೆ ಹಿನ್ನೆಲೆ ರಜೆ ರದ್ದುಗೊಳಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಪ್ರತಿಭಟನಾಕಾರರ ಮನವೊಲಿಸಿದ್ದಾರೆ.

ಮನವೊಲಿಕೆ ನಂತರ ಪ್ರತಿಭಟನೆ ಕೈ ಬಿಟ್ಟ ಪ್ರತಿಭಟನಾಕಾರರು ಶವ ಸಂಸ್ಕಾರಕ್ಕೆ ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಅಂತ್ಯಸಂಸ್ಕಾರ ಸ್ಥಳದತ್ತ ಅಂಜಲಿ ಮೃತದೇಹ ತೆಗೆದುಕೊಂಡು ಹೋಗಲಾಗಿದೆ.

ಪೊಲೀಸ್ ಆಯುಕ್ತೆ ರೇಣುಕಾ ಹೇಳಿದ್ದಿಷ್ಟು
ಬಳಿಕ ಮಾತನಾಡಿದ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತೆ ರೇಣುಕಾ, ಅಂಜಲಿ ಅಂಬಿಗೇರಗೆ 4 ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾನೆ. ಅಂಜಲಿ ಕೊಲೆ ಮಾಡಿದ ವಿಶ್ವ ಅಲಿಯಾಸ್ ಗಿರೀಶ್ ಪರಿಚಯಸ್ಥ. ಇಂದು ಮುಂಜಾನೆ ಅಂಜಲಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಅವರ ಮನೆಯವರ ದೂರಿನ ಪ್ರಕಾರ ಪ್ರೀತಿಸುವಂತೆ ಪೀಡಿಸುತ್ತಿದ್ದ. ಅಂಜಲಿ ಪ್ರೀತಿ ನಿರಾಕರಣೆ ಮಾಡಿದ್ದಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದಿದ್ದಾರೆ.

ಆರೋಪಿ ಪತ್ತೆಗಾಗಿ ಎರಡು ವಿಶೇಷ ತಂಡ ರಚನೆ ಮಾಡಲಾಗಿದೆ. ಆರೋಪಿ ವಿಶ್ವ ಅಲಿಯಾಸ್ ಗಿರೀಶ್ ವಿರುದ್ಧ ಪ್ರಕರಣಗಳಿವೆ. ವಿಶ್ವನ ವಿರುದ್ಧ ಕಳ್ಳತನ ಸೇರಿದಂತೆ ಹಲವು ಕೇಸ್ ದಾಖಲಾಗಿವೆ. ಎಲ್ಲಾ ಆಯಾಮದಲ್ಲಿ‌ ತನಿಖೆ ಮಾಡ್ತೇವೆ. ಅಂಜಲಿ ಕುಟುಂಬ ಬೆಂಡಿಗೇರಿ‌ ಠಾಣೆಗೆ ಬಂದಿರುವುದು ನಿಜ. ಈ ಕುರಿತು ಪೊಲೀಸ್ ಠಾಣೆಯ ಸಿಸಿಕ್ಯಾಮರಾ ದೃಶ್ಯಗಳಿವೆ. ಆದರೆ ಯಾವ ಕಾರಣಕ್ಕೆ ಬಂದಿದ್ದಾರೆ ಅನ್ನೋದು ಸ್ಪಷ್ಟತೆ ಇಲ್ಲ. ಆದ್ರೆ ಸಿಬ್ಬಂದಿ ಬೇರೆ ಪ್ರಕರಣಕ್ಕೆ ಬಂದಿದ್ದರು ಅಂತಾ ಹೇಳ್ತಿದ್ದಾರೆ. ಈ ಬಗ್ಗೆಯೂ ತನಿಖೆ ಆರಂಭಿಸಿದ್ದೇವೆ. ಬೆಂಡಿಗೇರಿ ಠಾಣೆ ಸಿಬ್ಬಂದಿ ಲೋಪದೋಷವಿದ್ರೆ ಕ್ರಮ ಕೈಗೊಳ್ತೇವೆ ಎಂದು ಹೇಳಿದ್ದಾರೆ.

ವಿವಿಧ ಕಡೆ ಪೊಲೀಸ್ ಇಲಾಖೆಯಿಂದ ಶಾಲಾ-ಕಾಲೇಜು, ಮಹಿಳೆಯರು ಸೇರುವ ಸ್ಥಳಗಳಲ್ಲಿ, ಕಾರ್ಯ ಸ್ಥಳಗಳಲ್ಲಿ ಪೊಲೀಸರಿಂದ ಜಾಗೃತಿ ಮೂಡಿಸಲಾಗ್ತಿದೆ. ಹಲವಾರು ಮುಖ್ಯಸ್ಥರ ಜೊತೆಗೆ ಸಭೆ ನಡೆಸಲಾಗುತ್ತದೆ. ಮಕ್ಕಳ ಪಾಲಕರ ಜೊತೆಗೂ ಚರ್ಚಿಸಿ ಅರಿವು ಮೂಡಿಸಲಾಗುತ್ತಿದೆ. ನಗರದಲ್ಲಿ ಮಹಿಳೆಯರ‌ ಸುರಕ್ಷತೆಗೆ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.

ಅಂಜಲಿ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡಬೇಕು
ಅಂಜಲಿ ಕುಟುಂಬಕ್ಕೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿಗೂ ಸ್ಥಳೀಯರಿಂದ ಮನವಿ ಮಾಡಲಾಗಿದೆ. ಅಂಜಲಿ ಹತ್ಯೆ ಮಾಡಿದವನನ್ನು ಎನ್ಕೌಂಟರ್ ಮಾಡಬೇಕು. ಅಂಜಲಿ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡಬೇಕು. ಅಂಜಲಿ ಸಹೋದರಿಗೆ ಸರ್ಕಾರಿ ಕೆಲಸ ನೀಡಬೇಕೆಂದು ಮನವಿ ಮಾಡಲಾಗಿದೆ.

ನೀವು ಪಾಕಿಸ್ತಾನದಲ್ಲಿದ್ದರೆ ನಾನು ನಿಮ್ಮನ್ನು ಕಿಡ್ನ್ಯಾಪ್ ಮಾಡುತ್ತಿದ್ದೆ: ಪಾಕ್ ಕ್ಯಾಬ್ ಡ್ರೈವರ್ ಮಾತು ವೈರಲ್

ರಾಜ ಕಾಲುವೆ ಸಮಸ್ಯೆ ಇತ್ಯರ್ಥಕ್ಕೆ ಶೀಘ್ರದಲ್ಲೇ ಕ್ರಮ: ತುರ್ತು ಸ್ಪಂದನಾ ತಂಡ ರಚನೆ: ಡಿಸಿ ದಿವ್ಯಪ್ರಭು

ಹುಬ್ಬಳ್ಳಿ ಅಂಜಲಿ ಹ*ಗೆ ನೇರವಾಗಿ ಸರ್ಕಾರ ವೈಫಲ್ಯವೇ ಕಾರಣ- ಮಹೇಶ ಟೆಂಗಿನಕಾಯಿ…

- Advertisement -

Latest Posts

Don't Miss