Thursday, September 25, 2025

Latest Posts

Police-ಪುಡಿರೌಡಿಗಳಿಂದ ಯುವಕನ ಹತ್ಯೆ

- Advertisement -

ಹುಬ್ಬಳ್ಳಿ: ಪುಡಿ ರೌಡಿಗಳ ಗುಂಪೊಂದು ವ್ಯಕ್ತಿ ಓರ್ವನಿಗೆ ಚಾಕುವಿನಿಂದ ಮನಬಂದಂತೆ ಹಲ್ಲೆ ಮಾಡಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ನಗರದ ಇಸ್ಲಾಂಪೂರ ರಸ್ತೆಯ ಮಸೀದಿ ಹತ್ತಿರದ ಸಿದೀಕ್ ಕಿನಾಲ್ ಬಳಿ ನಡೆದಿದೆ.

ಚಾಕು ಇರಿತಕೊಳಗಾದ ವ್ಯಕ್ತಿ ಖಾದರ ಭಾಷಾ ಔದರಿ (26) ಎಂಬಾತನೇ ಸಾವನ್ನಪ್ಪಿದ್ದಾನೆ.‌ಹಳೇ ದ್ವೇಷದ ಹಿನ್ನಲೆಯಲ್ಲಿ ಉಮರೆಜ್ ಹಾಗೂ ಅವೇಜುಲ್ಲಾ ಎಂಬ ಆರೋಪಿಗಳ ಗುಂಪೊಂದು ಬರ್ಬರವಾಗಿ ಚಾಕು ಇರಿತ ಮಾಡಿ ಪರಾರಿಯಾಗಿದ್ದಾರೆ.

ತೀವ್ರವಾಗಿ ಗಾಯಗೊಂಡ ಖಾದರಸಾಬ ಔದರಿಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೇ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.ಈ ಘಟನೆ ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ

ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರದ ಮಹಾತ್ಮೆ..

ಸೂರ್ಯನಾರಾಯಣ ದೇವಸ್ಥಾನದ ಮಣ್ಣಿನ ಹರಕೆಯ ಪ್ರಾಮುಖ್ಯತೆ ಏನು..?

ಈ 5 ಗುಣಗಳು ನಿಮ್ಮಲ್ಲಿದ್ದರೆ ನಿಮ್ಮ ಆರೋಗ್ಯ ಬೇಗ ಹಾಳಾಗುತ್ತದೆ..

- Advertisement -

Latest Posts

Don't Miss