Hubli: ಹುಬ್ಬಳ್ಳಿ: ಶಾರ್ಟ್ ಮೂವಿ ಮೂಲಕ ಯೂಟ್ಯೂಬ್ ನಲ್ಲಿ ಮನರಂಜನೆ ನೀಡುತ್ತಿದ್ದ ಖಾಜಾ ಶಿರಹಟ್ಟಿ(ಮುಕಳೆಪ್ಪ) ವಿರುದ್ಧ ದೂರು ಸಲ್ಲಿಕೆಯಾಗಿರುವ ಬೆನ್ನಲ್ಲೇ ಗಾಯಿತ್ರಿ ಜಾಲಿಹಾಳ ಪಾಲಕರು ಮುಕಳೆಪ್ಪ ವಿರುದ್ಧ ಕ್ರಮ ಜರುಗಿಸಿ ನಮ್ಮ ಮಗಳಿಗೆ ಹಾಗೂ ನಮಗೆ ನ್ಯಾಯ ಕೊಡಿಸುವಂತೆ ಮನವಿ ಇಟ್ಟಿದ್ದಾರೆ.
ಗಾಯಿತ್ರಿ ಯಲ್ಲಪ್ಪ ಜಾಲಿಹಾಳ ಪಾಲಕರು ಈಗ ಖಾಜಾ ಶಿರಹಟ್ಟಿ ವಿರುದ್ಧ ಗಂಭೀರವಾಗಿ ಆರೋಪಿಸಿದ್ದು, ನಮ್ಮ ಮಗಳನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ನಮ್ಮ ಮಗಳು ಬೆಳೆಯಲಿ ಎಂಬುವಂತ ಕಾರಣಕ್ಕೆ ಖಾಜಾ ಜೊತೆಗೆ ಕಳಿಸುತ್ತಿದ್ದೆವು. ಆದರೆ ನಮ್ಮ ನಂಬಿಕೆಗೆ ಮೋಸ ಮಾಡಿ ನಮ್ಮ ಮಗಳನ್ನು ಕರೆದುಕೊಂಡು ಹೋಗಿ ನಮಗೆ ದ್ರೋಹ ಮಾಡಿದ್ದಾನೆ. ನಮಗೆ ನ್ಯಾಯ ಕೊಡಿಸಿ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.




