Wednesday, January 15, 2025

Latest Posts

KIMS Hospital: ಆಸ್ಪತ್ರೆಯಲ್ಲಿ ಮಕ್ಕಳನ್ನು ಅದಲು ಬದಲು ಮಾಡಿದ ಸಿಬ್ಬಂದಿಗಳು..!

- Advertisement -

ಹುಬ್ಬಳ್ಳಿ: ವೈದ್ಯೋ ನಾರಾಯಣೋ ಹರಿ ಅನ್ನುವ ಗಾದೆಯಿಂದ ವೈದ್ಯರನ್ನು ದೇವರ ರೂಪದಲ್ಲಿ ಕಾಣುತ್ತೇವೆ. ಆದರೆ ಈ ಆಸ್ಪತ್ರೆಯಲ್ಲಿ ಮಾತ್ರ ವಿಲನ್ ಗಳಾಗಿದ್ದಾರೆ. ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳು ಆಗಾಗ ಬೇಕಂತಲೋ ಅಥವಾ ಗೊತ್ತಿಲ್ಲದೆಯೋ  ಯಡವಟ್ಟುಗಳನ್ನು ಮಾಡುತ್ತಿರುತ್ತಾರೆ. ಇಂದು ಸಹ ಆಸ್ಪತ್ರೆಯ ಸಿಬ್ಬಂದಿಗಳ ಒಂದು ಕಳ್ಳಾಟ ಬಯಲಾಗಿದೆ.

ಕಳೆದ ಹದಿನೈದು ದಿನಗಳ ಹಿಂದೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸವಣುರು ಗ್ರಾಮದ ಮತ್ತವ್ವ ಎನ್ನವ ಮಹಿಳೆ ಗಂಡು ಮಗು ಜನ್ಮ ನೀಡಿದ್ದು ಸಿಬ್ಬಂದಿಗಳು ಗಂಡು ಮಗು ಎಂದು ಪ್ರಮಾಣಪತ್ರ ನೀಡಿದ್ದರು. ಆದರೆ ಮಗುವಿನ ತೂಕ ಕಡಿಮೆ ಇದೆ ಎಂದು ಹೇಳಿ ಐಸಿಯು ನಲ್ಲಿ ಇರಿಸಿಲಾಗಿತ್ತು ಇಲ್ಲಿಯವರೆಗೂ ಗಂಡು ಮಗು ಎಂದು ನಂಬಿದ್ದ ದಂಪತಿಗೆ ವೈದ್ಯರ ತಂಡ ಹೆಣ್ಣು ಮಗುವನ್ನು ಕೊಟ್ಟು ಶಾಕ್ ನೀಡಿದ್ದಾರೆ.

ಮಕ್ಕಳನ್ನು ಅದಲು ಬದಲು  ಮಾಡಿ ಬೇರೆಯವರಿಗೆ ಹಣಕ್ಕಾಗಿ ಮಾರಾಟ ಮಾಡಿದ್ದಾರೆ ಎನ್ನುವ ಅನುಮಾನ ಪೋಷಕರಲ್ಲಿ ವ್ಯಕ್ತವಾಗಿದೆ. ಇದರಿಂದ ಗೊಂದಲಕ್ಕೆ ಒಳಗಾದ ಪೋಷಕರು ಸಿಬ್ಬಂದಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇವಲ ಇದೊಂದೇ ಅಲ್ಲ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡುವುದಿಲ್ಲ ಆಸ್ಪತ್ರೆಯಲ್ಲಿ ಜನಿಸಿದ ಮಕ್ಕಳನ್ನು ಮಾರಾಟ ಮಾಡುವುದು ವೈದ್ಯರ ನಿರ್ಲಕ್ಷತನ ತೋರುತ್ತಾರೆ  ಎಂದು ಹಲವಾರು ಆರೋಪಗಳು ಆಸ್ಪಪತ್ರೆಯ ಸಿಬ್ಬಂದಿಗಳ ಮೇಲೆ ಕೇಳಿ ಬರುತ್ತಿವೆ.

ಒಟ್ಟಾರೆ ಕಿಮ್ಸ್ ನಲ್ಲಿ ನಡೆಯುವ ಬೆಳವಣಿಗೆಗಳ ಹಿಂದೆ ಸಾಕಷ್ಟು ಅನುಮಾನ ಇದೆ. ಮಕ್ಕಳ ವಿಷಯದಲ್ಲೂ ಕಳ್ಳಾಟ ಆಡುವ ವೈದ್ಯರು, ಸಿಬ್ಬಂದಿ ವಿರುದ್ದ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

Hubli Ganesha: ಗಣೇಶ ವಿಸರ್ಜನೆ ಹಿನ್ನೆಲೆ ಈದ್ ಮಿಲಾದ್ ಮೆರವಣಿಗೆ ಮುಂದೂಡಿದ ಅಂಜುಮನ್ ಸಮಿತಿ..!

Press Meet; ಹುಬ್ಬಳ್ಳಿಯಲ್ಲಿ ಶಾಸಕ ಅರವಿಂದ್ ಬೆಲ್ಲದ, ಮಹೇಶ್ ಟೆಂಗಿನಕಾಯಿ ಜಂಟಿ ಸುದ್ದಿಗೋಷ್ಠಿ

Special Pooja: ಲೋಕ ಕಲ್ಯಾಣಕ್ಕಾಗಿ ಗಣೇಶನ ಮುಂದೆ ಹೋಮ: ವಿಶೇಷ ಪೂಜೆ ಸಲ್ಲಿಕೆ..!

- Advertisement -

Latest Posts

Don't Miss