ಹುಬ್ಬಳ್ಳಿಯಲ್ಲಿ ಗಣೇಶ ಪ್ರತಿಷ್ಠಾಪನೆಗೆ ಹಿಂದೂ ಸಂಘಟನೆಯ ಹೋರಾಟಗಾರರು ನಗರ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು, ಅರ್ಜಿಯನ್ನು ತಿರಸ್ಕರಿಸಿದಕ್ಕಾಗಿ ಕಳೆದ ನಾಲ್ಕು ದಿನದಿಂದ ನಗರ ಪಾಲಿಕೆ ಮುಂದೆ ಅಹೋರಾತ್ರಿ ಪ್ರತಿಭಟನೆ ಕೈಗೊಂಡಿದ್ದರು ಆದರೆ ಈಗ ನ್ಯಾಯಲಯ ಇದಕ್ಕೆ ಪರಿಹಾರ ಸೂಚಿಸಿದೆ ಈ ವಿಷಯ ಕುರಿತು ಶಾಸಕ ಮಹೇಶ್ ಟೆಂಗಿನಕಾಯಿ ಮಾತನಾಡಿದರು.
ಈದ್ಗಾ ಮೈದಾನದ ವಿವಾದ ಬಹು ದಿನಗಳಿಂದ ಕೋರ್ಟನಲ್ಲಿ ವಾದ ನಡೆಯುತ್ತಿತ್ತು, ಬಹುಕಾಲದ ವಾದ ವಿವಾದ ಆಲಿಸಿದ ಕೋರ್ಟ್ ಈ ಮೈದಾನದ ಮಾಲೀಕರು ಯಾರು ಎಂಬುದನ್ನು ಸ್ಪಷ್ಟಪಡಿಸಿದೆ.ಈ ಮೈದಾನ ಮಹಾನಗರ ಪಾಲಿಕೆಗೆ ಸೇರಿದ್ದು ಎಂದು ಹೇಳಿದೆ. ಅಂಜುಮನ್ ಸಂಸ್ಥೆಯವರು ಈ ಜಾಗದ ಮಾಲೀಕರು ನಾವು ಎಂದು ವಿವಾದ ಸೃಷ್ಠಿಸಿ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು ಆದರೆ ಕೋರ್ಟ್ ಅಂಜುಮನ್ ಸಂಸ್ಥೆಯವರು ಕೇವಲ ಜಾಗದ ಪರವಾನಿಗೆ ಹೋಲ್ಡರ್ ಮಾತ್ರ ವರ್ಷಕ್ಕೆ ಎರಡು ಬಾರಿ ನಮಾಜ್ ಮಾಡಲು ಅವಕಾಶ ಕೊಡಬಹುದು ಮಹಾನಗರ ಪಾಲಿಕೆಯ ಕೆಲಸಕ್ಕೆ ಅಂಜುಮನ್ ಸಂಸ್ಥೆಯವರು ಅಡ್ಡಪಡಿಸಬಾರದು ಎಂದು ಅಂಜುಮನ್ ಸಂಸ್ಥೆಯವರು ಸಲ್ಲಿಸಿದ ಅರ್ಜಿಯನ್ನು ಪರೀಶಿಲಿಸಿ ಅಂಜುಮನ್ ಸಂಸ್ಥೆಯವರು ಪಾಲಿಕೆಯ ಮೇಲೆ ಯಾವುದೇ ರೀತಿಯ ಹಕ್ಕು ಇರುವುದಿಲ್ಲ ಎಂದು ನ್ಯಾಯಲಯ ಅರ್ಜಿಯನ್ನು ವಜಾ ಮಾಡಿದೆ.
ಹಿಂದೂಗಳ ಭಾವನೆಗೆ ಹಾಗೂ ಕರ್ನಾಟಕದ ಜನತೆಗೆ ಕೋರ್ಟ್ ತೀರ್ಪಿನಿಂದ ಜಯವಾಗಿದೆ. ಈ ಮೂಲಕ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕೆಂದು ಸಿಎಂ ಸಿದ್ದರಾಮಯ್ಯನವರಿಗೆ ಒತ್ತಡ ಹೇರುತ್ತೇವೆ ಸರ್ಕಾರ ಯಾವುದೇ ರೀತಿಯಾಗಿ ತಡ ಮಾಡದೇ ಗಣೇಶೋತ್ಸವ ಆಚರಣೆ ಬೇಗ ಪರವಾನಗಿ ನೀಡಬೇಕು ಎಂದು ಆಗ್ರಹಿಸಿದರು.
Edga Ground : ಅನುಮತಿ ಕೊಡದಿದ್ದರೂ ಈದ್ಗಾದಲ್ಲಿ ಗಣಪತಿ ಪ್ರತಿಷ್ಟಾಪನೆ ಮಾಡ್ತೀವಿ : ಶಾಸಕ ಬೆಲ್ಲದ ಎಚ್ಚರಿಕೆ..!
Corporation : ಹುಬ್ಬಳ್ಳಿ : ಪಾಲಿಕೆ ಆಯುಕ್ತರ ಕಛೇರಿಗೆ ಪ್ರತಿಭಟನಾಕಾರರಿಂದ ಮುತ್ತಿಗೆ
Sports : ಕ್ರೀಡೆಯಲ್ಲಿ ಯಶಸ್ಸು ಪಡೆದು ದೇಶಕ್ಕೆ ಪ್ರತಿಭೆ ಪಸರಿಸುವ ಕಾರ್ಯ ಕೈಗೊಳ್ಳಬೇಕು : ಶಾಸಕ ಟಿ ರಘುಮೂರ್ತಿ