Hubli: ಅವಕಾಶ ಸಿಕ್ಕರೆ ನಾನೂ ಸುರ್ಜೇವಾಲಾರನ್ನು ಭೇಟಿಯಾಗುವೆ: ಸಚಿವ ಆರ್.ಬಿ.ತಿಮ್ಮಾಪುರ

Hubli: ಹುಬ್ಬಳ್ಳಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾಧ್ಯಮದ ಜತೆ ಮಾತನಾಡಿದ್ದು, ಮತ್ತೇ ರಾಜ್ಯಕ್ಕೆ ಸುರ್ಜೇವಾಲಾ ಬಂದಿದ್ದಾರೆ ಶಾಸಕರು, ಸಚಿವರ ಜೊತೆಗೆ ಸಭೆ ಮೇಲೆ‌ ಸಭೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.

ಕೆಲ ಶಾಸಕರು ದೂರು ಕೊಟ್ಟಿರಬಹುದು. ಕೆಲ ಅಭಿವೃದ್ಧಿ ಬಗ್ಗೆ ,ಸಂಘಟನೆ ಹಾಗೂ ಪಕ್ಷದ ಆಂತರಿಕ ವಿಚಾರಗಳು ಇರಬಹುದು. ನನಗೆ ಇನ್ನು ಮಾತ್ರ ಸುರ್ಜೇವಾಲಾ ಅವರಿಂದ ಆಹ್ವಾನ ಬಂದಿಲ್ಲ. ಕರೆದರೆ ಖಂಡಿತವಾಗಿಯೂ ಸುರ್ಜೇವಾಲಾ ಅವರನ್ನ ಭೇಟಿ ಮಾಡುವೆ. ಸುರ್ಜೇವಾಲಾ ಏನು ಕೇಳುತ್ತಾರೆ ಹೇಳುವೆ. ಇನ್ನು ಈಗಾಗಲೇ ನಾವು ಒಳಮೀಸಲಾತಿ ಸಮೀಕ್ಷೆ ಆಗಿದೆ. ಅದು ಜಾರಿ ಆಗಬೇಕು, ಇನ್ನು ಜಾತಿಗಣತಿ ಸರ್ವೇ ನಡೆಸಲು ತೀರ್ಮಾನ ಆಗಿದೆ ಎಂದು ತಿಮ್ಮಾಪುರ ಹೇಳಿದ್ದಾರೆ.

ಎಐಸಿಸಿ ಹಿಂದುಳಿದ ವರ್ಗಗಳ ಸಭೆ ಆಗಿದ್ದು, ರಾಹುಲ್ ಗಾಂಧಿ ಅವರಿಗೆ ನ್ಯಾಯ ಯೋಧ ಎಂಬ ಬಿರುದು ಕೊಟ್ಟ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ತಿಮ್ಮಾಪುರ, ರಾಹುಲ್ ಗಾಂಧಿ ಅವರಿಗೆ ನ್ಯಾಯ ಯೋಧ ಬಿರುದು ಕೊಟ್ಟಿದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.

About The Author