Hubli: ಗಣೇಶ ವಿಸರ್ಜನೆ ವೇಳೆ ಚಾಕು ಇರಿತ ಕೇಸ್: ಗಾಯಾಳು ಪ್ರಾಣಾಪಾಯದಿಂದ ಪಾರು: ಕಮಿಷನರ್ ಶಶಿಕುಮಾರ್

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ 11ನೇ ದಿನದ ಗಣೇಶ ವಿಸರ್ಜನೆ ವೇಳೆ ಗಲಾಟೆ ನಡೆದಿದ್ದು, ಚಾಕು ಇರಿಯಲಾಗಿದೆ. ಶ್ರೀ ಎಂಬಾತ ಚೇತನ್ ಎಂಬಾತನ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ.

ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿ, ದಾಖಲೆ ಸಂಗ್ರಹಿಸಿ, ಈ ಬಗ್ಗೆ ಮಾತನಾಡಿರುವ ಹು-ಧಾ ಪೋಲೀಸ್ ಕಮಿಷನರ್ ಎನ್.ಶಶಿಕುಮಾರ್, ಚೇತನ ಯುವಕನಿಗೆ ಚಾಕು ಇರಿತವಾಗಿದೆ. ಎರಡು ಕಾಲು ಸೇರಿ ಎದೆಯ ಭಾಗಕ್ಕೆ ಗಾಯಗಳಾಗಿವೆ. ಸದ್ಯ ಗಾಯಾಳು ಚೇತನ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದೂ ಶಹರ ಪೊಲೀಸ್ ಠಾಣರ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣದ ಕುರಿತು ಠಾಣಾ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಚಾಕು ಇರಿದ ಆರೋಪಿಗಲಕ ಕುರಿತು ಕುಟುಂಬಸ್ಥರಿಂದ ಮತ್ತು ಸ್ನೇಹಿತರಿಂದ ಮಾಹಿತಿ ತಿಳಿದುಕೊಳ್ಳಲಾಗುತ್ತದೆ.

ಆದಷ್ಡು ಬೇಗ ಈ ಪ್ರಕರಣದ ಆರೋಪಿಗಳನ್ನು ಹಿಡಿಯಲಾಗುವುದು. ಗಾಯಾಳು ಮತ್ತು ಆರೋಪಿಗಳು ಒಂದೇ ಸಮಯದಾಯದವರು. ಗಾಯಾಳು ಮೂತ್ರ ಮಾಡಲು ಹೋದ ವೇಳೆ ಘಟನೆ ನಡೆದಿದೆ. ಈಗಾಗಲೇ ಎರಡು ತಂಡ ರಚನೆ ಮಾಡಲಾಗಿದೆ. ಪ್ರಾಥಮಿಕ ತನಿಖೆಯ ನಂತರ ಎಲ್ಲ ಮಾಹಿತಿ ನೀಡಲಾಗುವುದು ಎಂದು ಶಶಿಕುಮಾರ್ ಹೇಳಿದ್ದಾರೆ.

About The Author