Friday, August 29, 2025

Latest Posts

Hubli News: ಧಾರವಾಡದ ಹೆಬ್ಬಳ್ಳಿ ಗ್ರಾಮದಲ್ಲಿ 91 ಪಿಓಪಿ ಗಣಪತಿ ಮೂರ್ತಿ ಸೀಜ್…ಪಿಓಪಿ ವಿಶೇಷ ಕಾರ್ಯಪಡೆ ಕಾರ್ಯಚರಣೆ.

- Advertisement -

Hubli News: ಪರಿಸರ ಹಾನಿಕಾರಕ ಪಿಓಪಿ ಗಣೇಶ ಮೂರ್ತಿಗಳಿಗೆ ನಿಷೇಧ ಹೇರಿದರು ಕೂಡಾ ಕೆಲವು ಮೂರ್ತಿಕಾರರು, ಜಿಲ್ಲಾಡಳಿತ ಕಣ್ಣು ತಪ್ಪಿಸಿ ವಿಗ್ರಹಗಳ ತಯಾರು ಮಾಡಿದ್ದಾರೆ. ಇಂತಹ ಮೂರ್ತಿಗಳ ಖಚಿತ ಮಾಹಿತಿ ಮೇರೆಗೆ ಧಾರವಾಡದಲ್ಲಿ ಕಾರ್ಯಾಚರಣೆ ನಡೆಸಿ ಪಿಓಪಿ ವಿಶೇಷ ಕಾರ್ಯಪಡೆ ಹೆಬ್ಬಳ್ಳಿಯಲ್ಲಿ 91 ಮೂರ್ತಿಗಳನ್ನು ಸೀಜ್ ಮಾಡಿದ್ದಾರೆ.

ಹೌದು ಧಾರವಾಡ ಜಿಲ್ಲಾಧಿಕಾರಿ ದಿವ್ಯಫ್ರಭು ಆದೇಶದಂತೆ ರಚಿಸಿದ ಕಾರ್ಯ ಪಡೆಯ ಸದಸ್ಯರಾದ ಪರಿಸರ ಇಲಾಖೆಯ ಪ್ರಾದೇಶಿಕ ಅಧಿಕಾರಿ ಜಗದೀಶ್ ಐ.ಎಚ್. ಹಾಗೂ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ್ ಕಂದಕೂರ ಅವರ ನೇತೃತ್ವದಲ್ಲಿ, ಹೆಬ್ಬಳ್ಳಿ ಗ್ರಾಮದ ಶಂಕರ ಕಂಬಾರ, ಬಸವರಾಜ ಗೂಳಪ್ಪ ಕಮ್ಮಾರ, ಬಸವರಾಜ ವಿರೂಪಾಕ್ಷಪ್ಪ ಕಮ್ಮಾರ, ಕರಿಯಪ್ಪ ಕಮ್ಮಾರ ಅವರ ಮನೆ ಮತ್ತು ದಾಸ್ತಾನದಲ್ಲಿರುವ 91 ಪಿಓಪಿ ಗಣಪತಿಗಳನ್ನು ತಪಾಸಣೆ ಮಾಡಿ, ವಶಪಡಿಸಿಕೊಂಡ ವಿಗ್ರಹಗಳನ್ನು ಗ್ರಾಮ ಪಂಚಾಯಿತಿಯ ವಶಕ್ಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಅಮ್ಮಿನಭಾವಿ ವಲಯದ ಕಂದಾಯ ನಿರೀಕ್ಷಕ ಸಂಪತಕುಮಾರ ಒಡೆಯರ್ ಮತ್ತು ಗ್ರಾಮ ಆಡಳಿತ ಅಧಿಕಾರಿ ರಾಮಚಂದ್ರ ನಾಯಕ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಮದನಬಾವಿ, ಹೆಬ್ಬಳ್ಳಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಜಿ.ಎಸ್ ಬಡಿಗೇರ ಮತ್ತು ಪೊಲೀಸ್ ಇಲಾಖೆಯ ಇ.ಎಸ್.ಐ ಮಂಜುನಾಥ ತಡಹಾಳ ಹಾಗೂ ತಂಡದವರಿದ್ದರು.

- Advertisement -

Latest Posts

Don't Miss