Hubli News: ಬೇಲ್ ಚಿತ್ರದ ಪ್ರಮೋಷನ್‌ಗಾಗಿ ಹುಬ್ಬಳ್ಳಿಗೆ ನಟ ಶಿವಣ್ಣ ಆ್ಯಂಡ್ ಟೀಂ ಭೇಟಿ

Hubli News: ವಾಣಿಜ್ಯ ನಗರಿ ಹುಬ್ಬಳ್ಳಿಗೆ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಭೇಟಿ. ತಮ್ಮ ಅಭಿನಯದ ಬೇಲ್ ಚಿತ್ರದ ಪ್ರಮೋಷನ್‌ಗಾಗಿ ಹುಬ್ಬಳ್ಳಿಗೆ ಆಗಮಿಸಿದ ನಟ ಶಿವಣ್ಣ ಹಾಗೂ ಚಿತ್ರತಂಡ, ನಗರದ ಅಪ್ಸರಾ ಚಿತ್ರಮಂದಿರಕ್ಕೆ ಭೇಟಿ ನೀಡಿದೆ.

ಚಿತ್ರಮಂದಿರದ ಭೇಟಿ ನಂತರ ನಟ ಶಿವರಾಜಕುಮಾರ್ ಹೇಳಿಕೆ ನೀಡಿದ್ದು, ಇಡೀ ರಾಜ್ಯದಾದ್ಯಂತ ಬೇಲ್ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಡೀ ಕುಟುಂಬ ಸಮೇತರಾಗಿ ಜನ ಚಿತ್ರವನ್ನು ವೀಕ್ಷಣೆ ಮಾಡುತ್ತಿದ್ದಾರೆ. ಕಥೆ ಬಗ್ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜ್ಯದ ಜನ ಚಿತ್ರವನ್ನು ಅತ್ಯಂತ ಸಂತಸದಿಂದ ವೀಕ್ಷಿಸುತ್ತಿದ್ದಾರೆ. ಚಿತ್ರದಲ್ಲಿ ವಿಭಿನ್ನ ಪಾತ್ರಕ್ಕೆ ಜನ ಖುಷ್ ಆಗಿದ್ದಾರೆ. ಎಲ್ಲೆಡೆ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ ಎಂದು ಹೇಳಿದ್ದಾರೆ.

ಮಹದಾಯಿ ವಿಚಾರದಲ್ಲಿ ಕನ್ನಡ ಚಿತ್ರರಂಗ ದೂರ ಉಳಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಶಿವರಾಜಕುಮಾರ್, ಮಹದಾಯಿ ವಿಚಾರದಲ್ಲಿ ಮತ್ತೆ ಕನ್ನಡ ಚಿತ್ರರಂಗ ಹುಬ್ಬಳ್ಳಿಗೆ ಆಗಮಿಸಲಿದೆ. ಆದಷ್ಟು ಶೀಘ್ರವೇ ಹುಬ್ಬಳ್ಳಿಗೆ ಚಿತ್ರರಂಗ ಬರುವ ಬಗ್ಗೆ ಚರ್ಚೆ ಮಾಡಲಿದ್ದೇವೆ. ಈ ಭಾಗದ ಜ್ವಲಂತ ಸಮಸ್ಯೆಗೆ ಹಾಗೂ ಹೋರಾಟಕ್ಕೆ ಕನ್ನಡ ಚಿತ್ರರಂಗ ಸದಾ ಕೈಜೋಡಿಸುತ್ತೆ. ಅತೀ ಶೀಘ್ರವೇ ಈ ಹೋರಾಟದ ಬಗ್ಗೆ ಚರ್ಚೆ ನಡೆಸಲಾಗುವುದು. ಮತ್ತೆ ಕನ್ನಡ ಚಿತ್ರರಂಗ ಮಹದಾಯಿ ಹೋರಾಟಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ ಎಂದು ತಿಳಿಸಿದ್ದಾರೆ.

About The Author