Hubli News: ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಮುಖ ಕಿಂಗ್ ಪಿನ್ ಹಾವೇರಿ ಮೂಲದ ಸಚಿನ್ ಕಬ್ಪೂರ್ ಬಂಧಿಸಿ ಜೈಲಿಗೆ ಕಳುಹಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜುಲೈ 30 ರಂದು ಹಾವೇರಿಯಿಂದ ಹುಬ್ಬಳ್ಳಿ ಮಾರ್ಗವಾಗಿ ಗುಜರಾತಕ್ಕೆ ಎರಡು ಲಾರಿಯಲ್ಲಿ 48 ಟನ್ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಬೆಂಡಿಗೇರಿ ಪೊಲೀಸರು, ಲಾರಿ ಮೇಲೆ ದಾಳಿ ಮಾಡಿ ಅಕ್ಕಿ ಮತ್ತು ಲಾರಿಯನ್ನು ಜಪ್ತಿ ಮಾಡಿ ಕೆಲ ಆರೋಪಿಗಳನ್ನು ಬಂಧಿಸಿದ್ದರು. ಆದರೆ ಇದರ ಮೂಲ ಆರೋಪಿ ಸಚಿನ್ ಕಬ್ಬೂರ್ ತಲೆ ಮರೆಯಿಸಿಕೊಂಡಿದ್ದ. ಇತನ ಪತ್ತೆಗಾಗಿ ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ಈ ಬಗ್ಗೆ ಮಾತನಾಡಿದ ಕಮಿಷನರ್ ಎನ್ ಶಶಿಕುಮಾರ್, ಕೆಲವು ದಿನಗಳ ಹಿಂದೆ 49 ಟನ್ ನಷ್ಟು ಅನ್ನಭಾಗ್ಯದ ಅಕ್ಕಿಯನ್ನ ಸೀಜ್ ಮಾಡಲಾಗಿತ್ತು.ಎರಡು ಲಾರಿ ಸೇರಿ ಹಲವು ವಾಹನಗಳನ್ನು ಮತ್ತು 9 ಜನರನ್ನ ವಶಕ್ಕೆ ಪಡೆಯಲಾಗಿತ್ತು.ಆದರೆ ಪ್ರಮುಖ ಆರೋಪಿ ಸಚಿನ ಕಬ್ಬೂರ ತಲೆ ಮರೆಸಿಕೊಂಡಿದ್ದ.
ಆತ ಮೂಲತಃ ಹಾವೇರಿಯಾವನು, ಇಂತಹ ದೊಡ್ಡ ಅಪರಾಧ ಕೃತ್ಯದಲ್ಲಿ ತೊಡಗಿಸಿಕೊಂಡ ಹಿನ್ನೆಲೆ ಅರೆಸ್ಟ್ ಮಾಡಲಾಗಿದೆ. ಆತನ ಲೊಕೇಶನ್ ಇಂಡಿಯಾದಲ್ಲೇ ಕಂಡು ಬಂತು.ಆದ್ರೆ ಆತ ದುಬೈ ನಲ್ಲಿ ಇರ್ತಿದ್ದಿದ್ದ.
ಆತನ ಶೋಧಕ್ಕೆ ಮೂರು ತಂಡಗಳನ್ನ ರಚನೆ ಮಾಡಿದ್ವಿ,ಆತನ ಮೇಲೆ ಈ ಹಿಂದೆ ಹಲವಾರು ಪ್ರಕರಣಗಳು ಇವೆ,ಅಂಕಿ ಅಂಶದ ಬಗ್ಗೆ ಮಾಹಿತಿ ತಗೊಳ್ತಾ ಇದ್ದೇವೆ,ಅವನ ಸಹಚರರು ತಲೆ ಮರೆಸಿಕೊಂಡಿದ್ದಾರೆ.ಆತನ ಹಿಂದಿನ ವ್ಯವಸ್ಥಿತ ಜಾಲದಲ್ಲಿರುವ ಪ್ರತ್ಯಕ್ಷ-ಪರೋಕ್ಷ ವ್ಯಕ್ತಿಗಳನ್ನು ವಶಕ್ಕೆ ಪಡೆಯುವ ಕೆಲಸ ಮಾಡ್ತೆವೆಂದರು..
ಸಂಗಮೇಶ್ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ



