- Advertisement -
Hubli News: ಹುಬ್ಬಳ್ಳಿ: ಸಾಯಂಕಾಲ ವಾಕಿಂಗ್ ಹೋಗಿದ್ದ ಮಹಿಳೆಯ ಕೊರಳಲಿದ್ದ ಮಂಗಳಸೂತ್ರವನ್ನು ಕಳ್ಳರು ಕಿತ್ತೊಯ್ದ ಘಟನೆ ಹುಬ್ಬಳ್ಳಿಯ ಕೇಶ್ವಾಪುರದ ಅಂಬಿಕಾ ನಗರದಲ್ಲಿರುವ ಪ್ರಸನ್ನ ಗಣಪತಿ ಗುಡಿ ಹತ್ತಿರ ನಡೆದಿದೆ.
ಅಂಬಿಕಾನಗರದ ರೇವತಿ ಶಿಂಧೆ(63) ಎಂಬುವರ ಮಂಗಳಸೂತ್ರ ದೋಚಲಾಗಿದೆ. ಬೈಕ್‌ನಲ್ಲಿ ಬಂದ ಇಬ್ಬರು ಕೊರಳಿಗೆ ಕೈ ಹಾಕಿ 24 ಗ್ರಾಂ ತೂಕದ ಮಂಗಳಸೂತ್ರ ಕಿತ್ತು ಪರಾರಿಯಾಗಿದ್ದಾರೆ. ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -