Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಿನ್ನೆ ಮಧ್ಯಾಹ್ನ ನಡೆಯಬೇಕಿದ್ದ ಕೇಂದ್ರ ಎಸ್ಎಸ್‌ಸಿ ಪರೀಕ್ಷೆ ರಾಾತ್ರಿ 10 ಆದರೂ ನಡೆಯದೇ, ಎಡವಟ್ಟು ನಡೆದಿದೆ.
ಭವಿಷ್ಯದ ಕೇಂದ್ರ ಸರ್ಕಾರಿ ನೌಕರರ ಜೊತೆಗೆ ಪರೀಕ್ಷಾ ಕೇಂದ್ರ ಸಿಬ್ಬಂದಿ ಹುಡುಗಾಟವಾಡಿದ್ದು, ಹುಬ್ಬಳ್ಳಿ ಕೇಶ್ವಾಪುರದಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಕಾಲೇಜಿಗೆ ಬಂದು ಪರೀಕ್ಷೆ ಬರೆಯಬೇಕಿದ್ದು, ಆನ್‌ಲೈನ್ ಪರೀಕ್ಷೆ ಬರೆಯುವ ವ್ಯವಸ್ಥೆಯೂ ಇಲ್ಲ.
ಇನ್ನು ಕಾಲೇಜಿನಲ್ಲಿ ವಿದ್ಯುತ್ ಮತ್ತು ಸರ್ವರ್ ವ್ಯವಸ್ಥೆ ಕೂಡ ಸರಿಯಾಗಿಲ್ಲ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸಹ ಸರಿಯಾಗಿಲ್ಲವೆಂದು ಪರೀಕ್ಷೆಗಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇನ್ನು ತಮ್ಮ ಸಮಸ್ಯೆ ಆಲಿಸಲು ಯಾವ ಅಧಿಕಾರಿಗಳು ಸಹ ಇಲ್ಲವೆಂದು ಅಭ್ಯರ್ಥಿಗಳು ಕೇಂದ್ರದ ಎದುರು ಪ್ರತಿಭಟಿಸಿದ್ದಾರೆ.




