Saturday, July 12, 2025

Latest Posts

Hubli News: ಹು-ಧಾ ಪೊಲೀಸ್ ಕಮಿಷನರೇಟ್ ಸಿಬ್ಬದಿ ಫಿಟ್ನೆಸಗೆ ಕಮಿಷನರ್ ಪ್ಲ್ಯಾನ್

- Advertisement -

Hubli News: ಪೊಲೀಸ್ ಇಲಾಖೆ ಅಂದ್ರೆ ಅದು ಶಿಸ್ತಿನ ಇಲಾಖೆ.‌ ಹೀಗಾಗಿ ಪೊಲೀಸರಿಗೆ ಶಿಸ್ತು ಮುಖ್ಯ ಅದರಲ್ಲೂ ಮುಖ್ಯವಾಗಿ ಪೊಲೀಸರಿಗೆ ದೈಹಿಕ ಸಾಮರ್ಥ್ಯ ಮುಖ್ಯವಾಗುತ್ತದೆ. ಹೀಗಾಗಿ ಪೊಲೀಸ್ ಸೆಲೆಕ್ಷನ್ ವೇಳೆಯಲ್ಲಿ ಸಾಕಷ್ಟು ದೈಹಿಕ ಪರೀಕ್ಷೆ ನಡೆಸಿದ ಬಳಿಕ ಇಲಾಖೆಯಲ್ಲಿ ಸೆಲೆಕ್ಟ್ ಆಗ್ತಾರೇ. ಆದ್ರೆ ಇಲಾಖೆಗೆ ಸೇರಿದ ನಂತರ ಕೆಲಸದ ಒತ್ತಡ ಹಾಗೂ ಇನ್ನಿತರ ಕಾರಣಗಳಿಂದ ದೈಹಿಕ ಸಾಮರ್ಥ್ಯದ ಬಗ್ಗೆ ತಲೆಕೆಡಿಸಿಕೊಳ್ಳದ ಹಿನ್ನೆಲೆ ದಪ್ಪಗಾಗಿ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೊಲ್ ಆಗೋದನ್ನಾ ಕೂಡ ನಾವು ನೋಡಿದ್ದೇವೆ ಹೀಗಾಗಿ ಹು-ಧಾ ಪೊಲೀಸ್ ಕಮಿಷನರ ಶಶಿಕುಮಾರ್ ದಪ್ಪಗಾದ ಸಿಬ್ಬಂದಿಗಳಿಗೆ ತೂಕ ಕಡಿಮೆ ಮಾಡುವ ಸಲುವಾಗಿ ಹೊಸ ಪ್ರಯೋಗ ಮಾಡಲು ಮುಂದಾಗಿದ್ದರೆ.

ಹು-ಧಾ ಪೊಲೀಸ್ ಕಮಿಷನರೇಟ್’ನಲ್ಲಿ ಕೆಲ್ಸ ಮಾಡುತ್ತಿರೋ ಪೊಲೀಸ್ ಸಿಬ್ಬಂದಿ ಕೆಲಸದ ಒತ್ತಡದ ನಡುವೆ ಗಮನ ಹರಿಸದ ಕಾರಣ ವಿಪರೀತ ದೇಹ ತೂಕವನ್ನು ಹೊಂದಿದ್ದರು. ಹೀಗಾಗಿ ಇವರ ತೂಕವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಮಿಷನರ್ ಶಶಿಕುಮಾರ್ ಅವರು ಒಂದು ತಿಂಗಳ ಕಾಲ ಅಧಿಕ ತೂಕ ಹೊಂದಿದ ಸಿಬ್ಬಂದಿಗೆ ತೂಕ ಕಡಿಮೆ ಮಾಡಿಕೊಳ್ಳುವ ಜೊತೆಗೆ ದೈಹಿಕ ಸಾಮರ್ಥ್ಯ ವೃದ್ಧಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಗೋಕುಲ್ ರಸ್ತೆಯಲ್ಲಿನ ಹೊಸ ಸಿ ಆರ್ ದಲ್ಲಿ ಶಿಬಿರ ಏರ್ಪಡಿಸಿದ್ದರು.

ಈ ಶಿಬಿರದಲ್ಲಿ ಭಾಗಿಯಾದ ಸಿಬ್ಬಂದಿ ಈಗಾಗಲೇ ಒಂದು ತಿಂಗಳ ಅವಧಿಯಲ್ಲಿ 10 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ ಅಂತಾ ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ. ಜೆತೆಗೆ ಸದ್ಯ ಅವಳಿ ನಗರದಲ್ಲಿನ ಪೊಲೀಸರ ಆರೋಗ್ಯದ ಹಿತದ್ರಷ್ಟಿ ಹಾಗೂ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಯ ಶಿಸ್ತಿನ ವಿಚಾರಕ್ಕೇ ಸಂಬಂಧಿಸಿದಂತೆ ಇಂತಹ ಶಿಬಿರವನ್ನು ಆಯೋಜನೆ ಮಾಡಿರುವ ಕಮಿಷನರ್ ಶಶಿಕುಮಾರ್ ಕಾರ್ಯಕ್ಕೆ ಪೊಲೀಸ್ ಸಿಬ್ಬಂದಿ ಮೆಚ್ಚುಗೆ ವ್ಯಕ್ತಡಿಸಿದ್ದು. ಈ ರೀತಿಯ ಶಿಬಿರಗಳು ನಿರಂತರವಾಗಿ ನಡೆಯಲಿ ಎಂದು ಆಶಯ ವ್ಯಕ್ತಡಿಸಿದ್ದಾರೆ.

- Advertisement -

Latest Posts

Don't Miss