Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿದ್ದು, ಇವಿಎಂ ಬಿಟ್ಟು ಬ್ಯಾಲೇಟ್ ಪೇಪರ್ ಬಳಕೆ ವಿಚಾರದ ಬಗ್ಗೆ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡ ಚುನಾವಣೆಯಲ್ಲಿ ಸೋಲುತ್ತಿದೆ. ರಾಹುಲ್ ಗಾಂಧಿ ಇಟ್ಟುಕೊಂಡು ಕಾಂಗ್ರೆಸ್ ಉದ್ದಾರ ಆಗಲ್ಲಾ. ಕಾಂಗ್ರೆಸ್ ಸೋಲಲು ಅದಕ್ಕೆ ರಾಹುಲ್ ಗಾಂಧಿ ಕಾರಣ. ಆದ್ರೆ ಅದನ್ನು ಮರೆಮಾಚಲು ಇವಿಎಂ ಕಾರಣ ಅಂತ ಹೇಳುತ್ತಿದ್ದಾರೆ. ಕರ್ನಾಟಕದಲ್ಲಿ ಇ ವಿಎಂ ಇದ್ರು ಹೇಗೆ 136 ಸ್ಥಾನ ಗೆದ್ದರು? ಎಂದು ಶೆಟ್ಟರ್ ಪ್ರಶ್ನಿಸಿದ್ದಾರೆ.
ಬ್ಯಾಲೇಟ್ ಮತದಾನ ಇದು ಮೂರ್ಖತನದ ಪರಮಾವಧಿ. ಹಿಂದೆ ಬ್ಯಾಲೆಟ್ ಬಾಕ್ಸ್ ಗಳನ್ನೇ ಹೊತ್ತುಕೊಂಡು ಹೋಗಿರೋ ಅನೇಕ ಉದಾಹರಣೆಗಳು ಇವೆ. ಜಿಪಂ ಮತ್ತು ತಾಪಂ ಗೆಲ್ಲಲು ಸಾಧ್ಯವಿಲ್ಲಾ ಅಂತ ಅವರಿಗೆ ಗೊತ್ತಾಗಿದೆ. ಗುಂಡಾಗಿರಿ ಮಾಡಿ ಗೆಲಲು ಹವನಿಕೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಅಜೆಂಡಾ ಹೈಕಮಾಂಡ್ ಮೆಚ್ಚಿಸೋದು. ಅದಕ್ಕಾಗಿ ಕೈ ನಾಯಕರು ಕಸರತ್ತು ನಡೆಸುತ್ತಿದ್ದಾರೆ ಎಂದು ಶೆಟ್ಟರ್ ಹೇಳಿದ್ದಾರೆ.
ಜಿಎಸ್‌ಟಿ ಬಗ್ಗೆ ಮಾತನಾಡಿರುವ ಸಂಸದರು ಜಿಎಸ್ ಟಿ ಇಳಿಕೆಯನ್ನು ಅರ್ದ ಮನಸ್ಸಿನಿಂದ ಕಾಂಗ್ರೆಸ್ ಸ್ವಾಗತ ಮಾಡಿದೆ. ಜಿಎಸ್ ಟಿ ತಂದಾಗಲೂ ಕಾಂಗ್ರೆಸ್ ವಿರೋಧ ಮಾಡಿತ್ತು. ಜನರ ಮೇಲೆ ತೆರಿಗೆ ಹೊರೆ ಎಷ್ಟು ಕಡಿಮೆಯಾಗುತ್ತೆ ಅನ್ನೋದನ್ನು ನೋಡಬೇಕು ಕಾಂಗ್ರೆಸ್ ಮೊದಲು. ಪೂರ್ಣ ಹೃದಯದಿಂದ ಮೊದಲು ಸ್ವಾಗತ ಮಾಡಲಿ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ರಿಗೆ ಮೂಡಾ ಪ್ರಕರಣದಲ್ಲಿ ಕ್ಲೀನ್ ಚಿಟ್ ವಿಚಾರದ ಬಗ್ಗೆ ಮಾತನಾಡಿರುವ ಅವರು, ತಾವೇ ಆಯೋಗ ರಚನೆ ಮಾಡೋದು. ಅದರಿಂದ ಕ್ಲೀನ್ ಚಿಟ್ ಪಡೆಯೋದು. ಸಿದ್ದರಾಮಯ್ಯ ಹವ್ಯಾಸವಾಗಿದೆ. ಎಸ್ ಐ ಟಿ ರಚನೆ ಮಾಡಿರೋದು ರಾಜ್ಯ ಸರ್ಕಾರ. ಹೆಗಡೆ ಅವರ ಮೇಲಿನ ಅಪಪ್ರಚಾರಕ್ಕೆ ಕಡಿವಾಣ ಹಾಕೋ ಕೆಲಸ ಯಾಕೆ ಮಾಡಲಿಲ್ಲಾ?
ಎಸ್ ಐ ಟಿ ಯ ಮಧ್ಯಂತರ ವರದಿಯನ್ನು ಯಾಕೆ ಇನ್ನು ನೀಡಿಲ್ಲಾ? ವಿದೇಶದಿಂದ ಪಂಡಿಂಗ್ ಆಗ್ತಿದೆ ಅಂತ ಹೇಳಲಾಗಿದೆ. ಹೀಗಾಗಿ ಎನ್ ಐ ಎ ತನಿಖೆ ಆಗಬೇಕಿದೆ. ಕಾಂಗ್ರೆಸ್ ದೇಶವನ್ನು ಉದ್ದಾರ ಮಾಡಲಿಲ್ಲಾ. ಆದ್ರೆ ಬಿಜೆಪಿ ಜನಪ್ರಿಯ ಯೋಜನಗೆ ಅಡ್ಡಗಾಲು ಹಾಕ್ತಾರೆ. ಎಥೆನಾಲ್ ಬಳಕೆಯಿಂದೆ ದೇಶಕ್ಕೆ ಉತ್ತಮವಾಗುತ್ತದೆ. ರಾಜಕಾರಣಿಗಳ ಮಕ್ಕಳು ವ್ಯಾಪಾರ ವಹಿವಾಟು ಮಾಡಬಾರದಾ? ಈ ಆರೋಪದ ಹಿಂದೆ ವಿದೇಶಿಯರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಡಿ.ಕೆ ವಿರುದ್ಧ ಸೋನಿಯಾಂದಿಗೆ ಪತ್ರ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಶೆಟ್ಟರ್, ದೂರು ಕೊಟ್ಟುವರು ಕಾಂಗ್ರೆಸ್ ನ ಮತ್ತೊಂದು ಗುಂಪು. ಅವರ ಪ್ರಚೋದನೆಯಿಂದಲೇ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ನಲ್ಲಿ ಪಕ್ಷ ನಿಷ್ಟೆಯಿಲ್ಲಾ. ಅಧಿಕಾರಕ್ಕಾಗಿ ನಡೆಯುತ್ತಿರೋ ಹೋರಾಟದ ಮತ್ತೊಂದು ತಂತ್ರವಿದು ಎಂದು ಶೆಟ್ಟರ್ ಆರೋಪಿಸಿದ್ದಾರೆ.

