Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಫ್ಲೈ ಓವರ್ ಕಾಮಗಾರಿ ಆರಂಭವಾಗಿದೆ. ಅದು ಆಮೇಗತಿಯಲ್ಲಿ ನಡೆಯುತ್ತಿದೆ. ಕಾಮಗಾರಿಗಾಗಿ ಚನ್ನಮ್ಮ ಸರ್ಕಲ್ ಕೂಡ ಬಂದ್ ಮಾಡಿದ್ದಾರೆ. ಇದರಿಂದ ಹುಬ್ಬಳ್ಳಿಯಲ್ಲಿ ಎಲ್ಲೆ ನೋಡಿದ್ರೂ ಟ್ರಾಫಿಕ್ ಟ್ರಾಫಿಕ್.. ಇಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿದರು.
ಈಗಾಗಲೇ ಹುಬ್ಬಳ್ಳಿಯ ಹೊಸೂರ, ಹಖೇ ಕೋರ್ಟ್ ಸರ್ಕಲ್, ಐಟಿ ಪಾರ್ಕ್ ಬಳಿ ಫ್ಲೈ ಓವರ್ ಕಾಮಗಾರಿ ಅಲ್ಪಮಟ್ಟಿಗೆ ಮುಗುದಿದೆ. ಸಧ್ಯ ಅದೇ ಫ್ಲೈ ಓವರ್ ಕಾಮಗಾರಿಗಾಗಿ ಚನ್ನಮ್ಮ ಸರ್ಕಲ್ ಬಂದ್ ಮಾಡಿದ್ದಾರೆ. ಈ ಕಾಮಗಾರಿಯನ್ನು ಮುಗಿಸಲು ನಾಲ್ಕು ತಿಂಗಳುಗಳ ಕಾಲ ಅವದಿ ಕೊಟ್ಟಿದ್ದರು. ಈಗಾಗಲೇ ಒಂದು ತಿಂಗಳು ಕಳೆದಿದೆ. ಇನ್ನೂ ಮೂರು ತಿಂಗಳು ಕಾಲ ಸಮಯವಿದೆ.
ಸಧ್ಯ ಈ ಕಾಮಗಾರಿಯಲ್ಲಿ ಏನೆಲ್ಲಾ ಕೆಲಸವಾಗಿವೆ. ಎಷ್ಟು ಜನಾ ಕಾಮಗಾರಿ ಮಾಡುತ್ತಿದ್ದಾರೆ. ಎಂಬುದರ ಬಗ್ಗೆ ಫ್ಲೈ ಓವರ್ ಕಾಮಗಾರಿ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ವೀಕ್ಷಣೆ ಮಾಡಿ ಮಾಹಿತಿ ಪಡೆದಿದ್ದಾರೆ.
ಒಟ್ನಲ್ಲಿ ಹೇಳುವುದಾದರೆ ಸಾರ್ವಜನಿಕರಿಗೆ ಮಾತುಕೊಟ್ಟಂತೆ ಜಿಲ್ಲಾಡಳಿ ನಡೆದುಕೊಳ್ಳುತ್ತದೆಯಾ..? ಆಗಷ್ಟ್ ತಿಂಗಳಲ್ಲಿ ಫ್ಲೈ ಓವರ ಕಾಮಗಾರಿ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತಾರಾ..? ಎಂಬುದನ್ನು ಕಾಯ್ದು ನೋಡಬೇಕಿದೆ.