Friday, August 29, 2025

Latest Posts

Hubli News: ಸಾಮಾನ್ಯ ಸಭೆಯಲ್ಲಿ ಧರ್ಮಸ್ಥಳ ಪ್ರಕರಣ: ಗಮನ ಸೆಳೆದ ಬುರುಡೆ ಸತ್ಯ..!

- Advertisement -

Hubli News: ಹುಬ್ಬಳ್ಳಿ: ಧರ್ಮಸ್ಥಳದ ಪ್ರಕರಣ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸುದ್ಧಿಯಾಗಿದ್ದು, ಧರ್ಮಸ್ಥಳದ ಎಸ್.ಐ.ಟಿ ತನಿಖೆಯ ವಿಷಯ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಗಮನ ಸೂಚಕ ವಿಷಯವಾಗಿ ಚರ್ಚೆಗೆ ಬಂದಿದೆ.

ಧರ್ಮಸ್ಥಳದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಹೆಸರು ಹಾಳು ಮಾಡುವವರ ವಿರುದ್ಧ ಕಾನೂನು ರೀತಿಯಲ್ಲಿ ಸೂಕ್ತ ಕ್ರಮಗಳನ್ನು ಜರುಗಿಸುವಂತೆ, ಸರ್ಕಾರದ ಗಮನಕ್ಕೆ ತರಬೇಕೆಂದು ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಆಗ್ರಹಿಸಿದ್ದು, ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗಮನ ಸೂಚಕ ವಿಷಯದಲ್ಲಿ ಪ್ರಸ್ತಾಪಿಸಿದರು.

ಇನ್ನೂ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಕಾರ್ಯವನ್ನು ಹಾಗೂ ಎಸ್.ಕೆ.ಡಿ.ಆರ್.ಡಿ.ಪಿ ಯೋಜನೆ ಅಡಿಯಲ್ಲಿ ಮಾಡಿರುವ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಅನನ್ಯ ಭಟ್, ಸುಜಾತ ಭಟ್, ಮಾಸ್ಕ್ ಮ್ಯಾನ್ ಬಗ್ಗೆ ಎಸ್.ಐ.ಟಿ ಅಧಿಕಾರಿಗಳು ವರದಿ ಬಿಡುಗಡೆ ಮಾಡಬೇಕು, ಷಡ್ಯಂತ್ರ ಮಾಡಿದವರ ವಿರುದ್ಧ ಸೂಕ್ತ ಕ್ರಮಗಳನ್ನು ಜರುಗಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

- Advertisement -

Latest Posts

Don't Miss