Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ಧರ್ಮಸ್ಥಳದ ವಿಚಾರದಲ್ಲಿ ಸರ್ಕಾರದ ವಿರುದ್ಧ ಜೋಶಿ ಕಿಡಿಕಾರಿದ್ದಾರೆ. ಸರ್ಕಾರದ ವಿಚಾರದಲ್ಲಿ ಏನು ನಡೆದಿದೆ, 13 ಜಾಗವನ್ನು ಅನಾಮಿಕ ತೋರಿಸಿದ್ದ. ಆದ್ರೆ ಇಲ್ಲಿವರಗೆ ಏನು ಸಿಕ್ಕಿಲ್ಲಾ. ಯಾವ ಆಧಾರದ ಮೇಲೆ ಇನ್ನು ತನಿಖೆ ಮುಂದುವರಿಸುತ್ತಿದ್ದೀರಿ? ಮೊದಲು ಮಾಹಿತಿ ನೀಡಿದ ನಂತರ ಆತನನ್ನು ಏಕೆ ಬಂಧನ ಮಾಡಲಿಲ್ಲಾ? ಬುರುಡೆಯನ್ನು ಆತ ಹೇಗೆ ತೆಗೆದುಕೊಂಡು ಬಂದಾ? ನೂರಾರು ಹೆಣ ಹುಗಿದಿದ್ದೇನೆ ಅಂತ ಮೊದಲೇ ಆತ ಏಕೆ ಹೇಳಲಿಲ್ಲಾ? ನೂರಾರು ಹೆಣ ಹುಗಿದವನನ್ನು ಬಂಧನ ಏಕೆ ಮಾಡಲಿಲ್ಲಾ? ಎಂದು ಜೋಶಿ ಪ್ರಶ್ನಿಸಿದ್ದಾರೆ.
ತರಾತುರಿಯಲ್ಲಿ ಎಸ್ ಐ ಟಿ ಮಾಡಿದ್ರಿ. ಹುಬ್ಬಳ್ಳಿ ಗಲಭೆಯಲ್ಲಿ ಅವರ ಭಾವನೆಗೆ ಧಕ್ಕೆ ಆಗುತ್ತೆ ಅಂತ ಹೇಳಿದ್ರಿ. ಡಿಜೆ ಹಳ್ಳಿ ಕೆಜೆ ಹಳ್ಳಿ ಗಲಬೆ ಸಮಯದಲ್ಲಿ ಸಿದ್ದರಾಮಯ್ಯ ರಿಯಾಕ್ಷನ್ ಏನಿತ್ತು. ಧರ್ಮಸ್ಥಳ ವಿಚಾರದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ಆಗ್ತಿಲ್ಲವೇ. ಹಿಂದೂಗಳ ಭಾವನೆ ಬಗ್ಗೆ ಕಿಮ್ಮತ್ತು ಇಲ್ವಾ ನಿಮಗೆ ಆತನಿಗೆ ಯಾರು ರಕ್ಷಣೆ ನೀಡಿದ್ದಾರೆ. ಡಿ.ಕೆ ಶಿವಕುಮಾರ್ ಷಂಡ್ಯಂತ್ರ ಅಂತ ಹೇಳ್ತಾರೆ.
ಗೃಹ ಇಲಾಖೆ ವಿಫಲವಾಗಿದೆಯಾ. ಸಿಎಂ ಇದನ್ನು ಮಾಡಿಸ್ತಿದ್ದಾರೆ ಅಂತ ಡಿ.ಕೆ ಹೇಳ್ತಿದ್ದಾರೆಯೇ? ಅನಾಮಿಕ ಯಾರು, ಆತನ ಹಿನ್ನೆಲೆ ಏನು? ಸಾಕ್ಷಿ ನಾಶ ಮಾಡಿದ ಆರೋಪದ ಮೇಲೆ ಆತನನ್ನೇ ಮೊದಲು ಬಂಧನ ಮಾಡಬೇಕಾಗಿತ್ತು. ಆತನ ಬಂಧನ ಮಾಡೋದು ನಿಮ್ಮ ಕೆಲಸವಲ್ವಾ..? ಎಂದು ಜೋಶಿ ಸರ್ಕಾರಕ್ಕೆ ತರಾಟೆ ತೆಗೆದುಕ“ಂಡಿದ್ದಾರೆ.
ಓಟ್ ಬ್ಯಾಂಕ್ ಪಾಲಿಟಿಕ್ಸ್ ಗೆ ನಿಂತರೆ ಏನು ಮಾಡುತ್ತದೆ ಅನ್ನೋದಕ್ಕೆ ಇದು ಉದಾಹರಣೆ. ಡೆತ್ ಸರ್ಟಿಫಿಕೇಟ್ ಇಲ್ಲದೇ ಆತ ಹೇಗೆ ಹೆಣಗಳನ್ನು ಹುಗಿದಆತನ ಜಾತಿ, ಕುಲ ಯಾವದು. ಬೇರೆ ಧರ್ಮದವನಾಗಿದ್ದರೆ ಧರ್ಮಕ್ಕೆ ಧಕ್ಕೆ ತಂದಾಗುವದಿಲ್ಲವೇ? ಎಲ್ಲಾ ಮುಗಿದ ಮೇಲೆ ಆತನ ಮೇಲೆ ಕೇಸ್. ಹಾಕಿದ್ರೆ ಆತನಿಗೆ ಮೂರ್ನಾಲ್ಕು ತಿಂಗಳು ಸಜಾ ಆಗಬಹುದು. ಸರ್ಕಾರ ಈ ಪ್ರಕರಣದಲ್ಲಿ ಮೋಜು ಮಾಡ್ತಿದೆಯಾ? ಇದೀಗ ತಮಗೆ ಸಂಬಂಧ ಇಲ್ಲಾ ಅಂತ ನಾಟಕ ಮಾಡ್ತಿದ್ದಾರೆ. ಅನಾಮಿಕನ ಮೇಲೆ ಇಲ್ಲಿವರಗೆ ಯಾಕೆ ಎಫ್ ಐ ಆರ್ ಹಾಕಿಲ್ಲಾ? ಎಂದು ಜೋಶಿ ಪ್ರಶ್ನಿಸಿದ್ದಾರೆ.
ಬಹುಸಂಖ್ಯಾತ ಹಿಂದೂಗಳ ಭಾವನೆ ಘಾಸಿ ಗೊಳಿಸಲಾಗುತ್ತದೆ. ನಂಬಿಕೆ ಕಡಿಮೆ ಮಾಡಲು ಇದೊಂದು ಷಂಡ್ಯಂತ್ರ. ಇಂತಹ ಷಂಡ್ಯಂತ್ರ ಕ್ಕೆ ಸರ್ಕಾಕದಲ್ಲಿರೋರು ಸಹಾಯ ಮಾಡ್ತಿದ್ದಾರೆ. ತನಿಖೆ ನಡೆಯುವಾಗಲೇ ಆತ ಮೀಡಿಯಾಗಳಿಗೆ ಬೈಟ್ ನೀಡಲು ಹೇಗೆ ಅವಕಾಶ ನೀಡಿದ್ರಿ? ಹಿಂದೂ ಸಮಾಜಕ್ಕೆ ಸುಣ್ಣ, ಇನ್ನೊಂದು ಸಮಾಜಕ್ಕೆ ಬೆಣ್ಣೆ ಹಚ್ಚೋದನ್ನು ಸರ್ಕಾರ ಬಿಡಬೇಕು. ಮೊದಲು ಆತನನ್ನು ಹಿಡಿದು ಒದಿಬೇಕಿತ್ತು. ಇಷ್ಟು ದಿನ ಕತ್ತೆ ಕಾಯ್ತಿದ್ದೀಯಾ ಅಂತ ಕೇಳಬೇಕು.
ಸರ್ಕಾರ ಅಧಿವೇಶನ ದಲ್ಲಿ ಮಧ್ಯಂತರ ವರದಿ ನೀಡಬೇಕು. ಎಲ್ಲಾ ಕಡೆ ಅಸಹಜ ಸಾವುಗಳು ಆಗ್ತವೆ. ಸೋ ಕಾಲ್ಡ್ ಯೂಟ್ಯೂಬ್ ಗಳಿಗೆ ಅಧಿಕಾರ ಕೊಟ್ಟವರು ಯಾರು. ಬೇರೆ ಸಮಾಜದ ವಿಚಾರದಲ್ಲಿ ಈ ರೀತಿ ಮಾಡಿದ್ರೆ ಹತ್ತಾರು ಎಪ್ ಐ ಆರ್ ಆಗ್ತಿದ್ದವು. ಧರ್ಮಸ್ಥಳ ಕ್ಕೆ ಜೆಸಿಬಿ ನುಗ್ಗಿಸ್ತೇನೆ ಅಂತ ಕೆಲವರು ಹೇಳಿದ್ದಾರೆ. ನಾವು ಬೇರೆ ಸಮಾಜದ ಈ ರೀತಿ ಹೇಳಿದ್ರೆ ಏನಾಗ್ತಿತ್ತು. ಸರ್ಕಾರದಲ್ಲಿ ಎಡಪಂಥೀಯರ ಪ್ರಭಾವ ಹೆಚ್ಚಾಗಿದೆ ಅನ್ನೋದನ್ನು ತೋರಿಸುತ್ತಿದೆ ಎಂದು ಜೋಶಿ ಹೇಳಿದ್ದಾರೆ.
ರಾಜಣ್ಣ ರಾಜಿನಾಮೆ ವಿಚಾರವಾಗಿ ಮಾತನಾಡಿರುವ ಜೋಶಿ, ಕಾಂಗ್ರೆಸ್ ನ ದ್ವಿಮುಖ ನೀತಿ ಇದರಿಂದ ಗೊತ್ತಾಗುತ್ತದೆ. ಇಲ್ಲಿವರಗೆ ಮತಗಳ್ಳತನ ಬಗ್ಗೆ ಯಾರೊಬ್ಪರು ದೂರು ನೀಡ್ತಿಲ್ಲಾ. ಅವರ ಸಲಹೆಗಾರರೇ ರಾಹುಲ್ ಗಾಂಧಿಯನ್ನು ಮೂರ್ಖನನ್ನಾಗಿ ಮಾಡ್ತಿದ್ದಾರೆ. ಓಟರ್ ಲಿಸ್ಟ್ ನಲ್ಲಿ ತಪ್ಪು ಹೆಸರು ನಮೂದಾಗೋದು. ವಯಸ್ಸು ಹೆಚ್ಚಾಗೋದು ಕೆಲವು ಕಡೆ ಆಗ್ತಾವೆ. ನನ್ನ ಹೆಸರು ಕೂಡಾ ತಪ್ಪಾಗಿತ್ತು, ನಾನು ಸರಿ ಮಾಡಿಸಿದೆ. ಈ ಹಿಂದೆ ರಾಹುಲ್ ಗಾಂಧಿಯೇ ಪತ್ರ ಬರೆದಿದ್ದರು. ಅನರ್ಹ ಮತದಾರರು ಇದ್ದಾರೆ ಅವರನ್ನು ತಗೆಯಬೇಕು ಅಂತ. ಆದ್ರೆ ಇದೀಗ ಅವರೇ ಮಾತನಾಡುತ್ತಿದ್ದಾರೆ. ಕಾಪಿ ಮಾಡೋರು ಪಸ್ಟ್ ರ್ಯಾಂಕ್ ಪಡೆಯಲು ಸಾಧ್ಯವಿಲ್ಲಾ. ಫೇಕ್ ಮತದಾರರಿಂದ ಯಾರು ಚುನಾವಣೆಯಲ್ಲಿ ಗೆದ್ದು ಬರಲು ಸಾಧ್ಯವಿಲ್ಲಾ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.