Hubli News: ಧರ್ಮಸ್ಥಳ ಎಸ್ಐಟಿ ತನಿಖೆ: ಲೆಪ್ಟಿಸ್ಟ್ ಗಳ ವ್ಯವಸ್ಥಿತ ಷಡ್ಯಂತ್ರವೆಂದ ಜೋಶಿ..!

Hubli News: ಹುಬ್ಬಳ್ಳಿ: ಎಸ್ಐಟಿ ಹೆಸರಲ್ಲಿ ಧರ್ಮಸ್ಥಳ ಹಾಗೂ ಹಿಂದೂ ಧಾರ್ಮಿಕ ಶ್ರದ್ಧೆಯ ಮೇಲೆ ಮತ್ತು ನಂಬಿಕೆಯ ಮೇಲೆ ಆಘಾತವನ್ನುಂಟು ಮಾಡುತ್ತಿವೆ. ಲೆಫ್ಟಿಸ್ಟ್ ಗಳ ವ್ಯವಸ್ಥಿತ ಷಡ್ಯಂತ್ರವಾಗಿದ್ದು, ಈ ವ್ಯವಸ್ಥೆ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.

ಧರ್ಮಸ್ಥಳದ ಪ್ರಕರಣದ ಕುರಿತು ಮಾತನಾಡಿದ ಅವರು, ಲೆಪ್ಟಿಸ್ಟ್ ಗಳು ಹಿಂದೂತ್ವದ, ಹಿಂದೂ ಧಾರ್ಮಿಕತೆಗೆ ದಕ್ಕೆಯನ್ನುಂಟು ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಸರ್ಕಾರ ಎಸ್ಐಟಿ ರಚನೆ ಮಾಡಿದಾಗ, ವ್ಯವಸ್ಥಿತ ರೀತಿಯಲ್ಲಿ ತನಿಖೆ ಮಾಡುವಂತೆ ಹೇಳಿದ್ದೇವು. ಆದರೆ ಈಗ ಎಸ್ಐಟಿ ತನಿಖೆಯನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ. ಮಾಸ್ಕ್ ಧರಿಸಿದ ವ್ಯಕ್ತಿ ರಾತ್ರಿ ಎಲ್ಲಿ ಹೋಗ್ತಾನೆ. ಏನು ಮಾಡ್ತಾನೆ ಎಂಬುವುದು ಗೊತ್ತಿಲ್ಲ. ಎಸ್ಐಟಿ ಹಾಗೂ ಪೊಲೀಸ್ ಕಸ್ಟಡಿಯಲ್ಲಿ ಇರಲ್ಲ. ಇದೆಲ್ಲವನ್ನೂ ನೋಡಿದರೇ ಷಡ್ಯಂತ್ರದಿಂದ ಹಿಂದುತ್ವದ ನಂಬಿಕೆಗೆ ದಕ್ಕೆ ಉಂಟು ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.

ಇನ್ನೂ ಅನ್ಯಧರ್ಮದ ಜಾಗೆಯಲ್ಲಿ ಶವ ಹೂತಿದ್ದೇವೆ ಎಂದು ಯಾರಾದರೂ ದೂರು ಕೊಟ್ಟರೇ, ಒಡೆಯುವ ತಾಕತ್ತು ಇದೆಯಾ..? ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.

About The Author