Hubli News: ಹುಬ್ಬಳ್ಳಿ: ಸಿನಿಮೀಯ ಶೈಲಿಯಲ್ಲಿ ಹುಬ್ಬಳ್ಳಿ ಉದ್ಯಮಿ ಮನೆ ಮೇಲೆ ಇಡಿ ದಾಳಿ ಮಾಡಿದೆ. ಅಧಿಕಾರಿಗಳು ಬೆಲ್ ಮಾಡಿದರೂ ಉದ್ಯಮಿ ಡೋರ್ ಓಪನ್ ಮಾಡದಿದ್ದಾಗ, ಅಧಿಕಾರಿಗಳು ಬಾಗಿಲು ಮುರಿದು ಮನೆಯ“ಳಗೆ ಹೋಗಿದ್ದಾರೆ.
ಹವಾಲಾ ಕಿಂಗ್ ಪಿನ್ ಸಮುಂದರ್ ಸಿಂಗ್ ಮನೆ ಮೇಲೆಯೇ ದಾಳಿ ನಡೆದಿದೆ. ದೇಶಪಾಂಡೆ ನಗರದ ಕಾಮಾಕ್ಷಿ ಅಪಾರ್ಟ್ಮೆಂಟ್ ನಲ್ಲಿ ಸಿಂಗ್ ವಾಸವಾಗಿದ್ದು, ಈತನ ಮನೆಗೆ ಮೂರು ಜನ ಅಧಿಕಾರಿಗಳು ಹಾಗೂ 4 ಜನ ಸಿ ಆರ್ ಪಿ ಎಫ್ ಅಧಿಕಾರಿಗಳು ಕಾರ್ಯಾಚರಣೆಗೆಂದು ಬಂದಿದ್ದಾರೆ. ಸುದ್ದಿ ತಿಳಿದ ಈತ, ಬಾಗಿಲು ತೆರೆಯದೇ, ತಾನು ಮನೆಯಲ್ಲೇ ಇಲ್ಲವೆನ್ನುವಂತೆ ಡ್ರಾಮಾ ಮಾಡಿದ್ದಾನೆ.
ಆದರೆ ಇಡಿ ಅಧಿಕಾರಿಗಳು ಮಾತ್ರ ಇವರ ಡ್ರಾಮಾ ಬಗ್ಗೆ ತಲೆಕೆಡಿಸಿಕ“ಳ್ಳದೇ, ಬಾಗಿಲು ಮುರಿದು ನುಗ್ಗಿದ್ದಾರೆ. ಅಪಾರ್ಟ್‌ಮೆಂಟ್ನ ಐದನೇ ಮಹಡಿಯಲ್ಲಿರು ಸಮುಂದರ್ ಸಿಂಗ್ ಹಾಗು ಆತನ ಸಹೋದರ ಮನೆ ದಾಳಿ ನಡೆದಿದೆ. ಈತ ಗೋವಾ, ಶ್ರೀಲಂಂಕಾ, ದುಬೈನಲ್ಲಿ ಮೆಜೆಸ್ಟಿಕ್ ಫ್ರೈಡ್ ಕ್ಯಾಸಿನೊ ನಡೆಸುತ್ತಿದ್ದು, ಕೋಟ್ಯಾಂತರ ರೂಪಾಯಿ ಗೇಮ್ ಆಫ್ ಹಾಗು ಕ್ಯಾಸಿನೊ ವ್ಯವಹಾರ ನಡೆಸುತ್ತಿದ್ದಾನೆ. ಅಲ್ಲದೇ ಇತ್ತೀಚೆಗೆ, ಕೋಟಿ ಕೋಟಿ ಖರ್ಚು ಮಾಡಿ, ಪುತ್ರನ ವಿವಾಹ ಕೂಡ ಅದ್ಧೂರಿಯಾಗಿಯೇ ಮಾಡಿದ್ದ.