ಹುಬ್ಬಳ್ಳಿ :ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಕೋರಿ ಹಿಂದೂ ಸಂಘಟನೆಗಳು ಅರ್ಜಿ ಹಾಕಿದ್ದರು ನಿನ್ನೆ ನ್ಯಾಯಾಲಯದಿಂದ ಅನುಮತಿ ನೀಡಿದ ನಂತರ ಶಾಸಕ ಅರವಿಂದ್ ಬೆಲ್ಲದ್ ಮಾಧ್ಯಮದವರೊಂದಿಗೆ ಮಾತನಾಡಿದರು.
ದೇವರು ವರ ಕೊಟ್ಟರು ಪೂಜಾರಿ ವರ ಕೊಡಲಿಲ್ಲ ಅನ್ನುವಂತಾಗಿದೆ ಹುಬ್ಬಳ್ಳಿಯ ವಿವಾದ ಯಾಕೆಂದರೆ ಗಣೇಶ ಪ್ರತಿಷ್ಠಾಪನೆಗೆ ನ್ಯಾಯಾಲಯದಲ್ಲಿ ಅನುಮತಿ ಸಿಕ್ಕರೂ ಸರ್ಕಾರ ಅನುಮತಿ ಕೊಡುತ್ತಿಲ್ಲ ಕಾಂಗ್ರೆಸ್ ಮತಬ್ಯಾಂಕ್ ಗಾಗಿ ತಿಚ್ಚಿಕರಣ ರಾಜಕಾರಣ ಮಾಡುತ್ತಿದೆ, ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿಯೂ ಠರಾವು ಮಾಡಲಾಗಿತ್ತು
ಅಂಜುಮನ್ ಸಂಸ್ಥೆ ಮೇಲಿಂದ ಮೇಲೆ ಕೋರ್ಟಿಗೆ ಹೋಗುವ ಮೂಲಕ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಯತ್ನ ಮಾಡಿದೆ ಹಾಗೂ ಸಮಾಜದಲ್ಲಿರುವ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ ಕೊನೆಗೂ ನ್ಯಾಯಾಲಯದಿಂದಾಗಿ ನಮಗೆ ಅನುಮತಿ ಸಿಕ್ಕಿದೆ ಇದು ಗಣಪತಿ ಭಕ್ತರ ಗೆಲುವು
ಸಿದ್ದರಾಮಯ್ಯ ಸರ್ಕಾರ ಎಲ್ಲರ ಮತಗಳನ್ನು ತೆಗೆದುಕೊಂಡು ಅಧಿಕಾರಕ್ಕೆ ಬಂದಿದೆ ಅದನ್ನು ಗಮನದಲ್ಲಿಟ್ಟುಕೊಂಡು ಅವರು ಕೆಲಸ ಮಾಡಬೇಕಿತ್ತು ಆದರೆ ಅಲ್ಪಸಂಖ್ಯಾತರ ಓಲೈಕೆಗೆ ಅದು ಮುಂದಾಗಿತ್ತು ಈಗಲಾದರೂ ಸರ್ಕಾರ ಯಾವುದೇ ರೀತಿ ಆಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡಬಾರದು.
Edga Ground : ಗಣೇಶ ಪ್ರತಿಷ್ಠಾಪನೆಗೆ ಅನುಮತಿಗೆ ಆಯುಕ್ತರ ವಿಳಂಬ : ಬೀದಿಗಿಳಿದ ಪ್ರತಿಭಟನಾಕಾರರು
Ganesha Fest : ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಕೂಡುವ ಧಾರವಾಡ ಗಣಪ ಇದುವೆ ನೋಡಿ…!