Friday, July 11, 2025

Latest Posts

Hubli News: ಹುಬ್ಬಳ್ಳಿಯಲ್ಲಿ ಗ್ಯಾಂಗ್‌ವಾರ್: ಗುರಾಯಿಸಿದ್ದಕ್ಕೆ ಗಲಾಟೆ

- Advertisement -

Hubli News: ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಗ್ಯಾಂಗ್ ವಾರ್ ನಡೆದಿದ್ದು, ಕೈ ಕೈ ಮಿಲಾಯಿಸಿ ಹಲ್ಲೆ ಮಾಡಲಾಗಿದೆ. ಗುರಾಯಿಸಿದ್ದಕ್ಕೆ ಈ ಹಲ್ಲೆ ನಡೆದಿದೆ ಎನ್ನಲಾಗಿದೆ.

ಶ್ಯಾಮ್ ಜಾಧವ್ ಮತ್ತು ದಾವುದ್ ಬ್ರದರ್ಸ್ ನಡುವೆ ಬಡಿದಾಟ ನಡೆದಿದ್ದು, ಶ್ಯಾಮ್ ಜಾಧವ್ ಸಹಚರರು ಮಂಟೂರ್ ರೋಡ್‌ಗೆ ಶವ ಸಂಸ್ಕಾರಕ್ಕೆಂದು ತೆರಳಿದ್ದರು. ಈ ವೇಳೆ ಶವಸಂಸ್ಕಾರ ಮುಗಿಸಿ ಬರುವಾಗ, ದಾವುದ್ ಸಹೋದರ ಜಿಲಾನಿ ನದಾಫ್ ಅಲ್ಲೋ ನಿಂತಿದ್ದ. ಈ ವೇಳೆ ಆತನ ಬಳಿ ನೋಡಿದ್ದಕ್ಕೆ, ನನ್ನನ್ನು ಏಕೆ ಗುರಾಯಿಸಿದ್ದಿ ಎಂದು, ಮಾತಿಗೆ ಮಾತು ಬೆಳೆದು ಬಡಿದಾಟ ನಡೆದಿದೆ.

ಎರಡೂ ಗ್ಯಾಂಗ್‌ ಕಡೆಯವರು ಬಾಟಲ್, ತಲ್ವಾರ್‌ನಿಂದ ಬಡಿದಾಡಿಕ“ಂಡಿದ್ದಾರೆ. ಈ ಗಲಾಟೆಯಲ್ಲಿ ಹಲವರಿಗೆ ಗಾಯವಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಹರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

- Advertisement -

Latest Posts

Don't Miss