Hubli News: ಹುಬ್ಬಳ್ಳಿ: ಧಾರವಾಡದಲ್ಲಿ ನರೇಂದ್ರ ಗ್ರಾಮದಲ್ಲಿ ಗಣಪತಿ ವಿಸರ್ಜನೆ ವೇಳೆ, ಸಾರ್ವಜನಿಕರ ಮೇಲೆ ಲಾಠಿ ಚಾರ್ಜ್ ಮಾಡಿದ್ದರ ಬಗ್ಗೆ ಶಾಸಕ ಮಹೇಶ್ ಟೆಂಗಿನಕಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಲಾಠಿ ಚಾರ್ಜ್ ಖಂಡನೀಯ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂ ವಿರೋಧಿ ನೀತಿ ಅನುಸರಿಸುತ್ತದೆ. ಇದಕ್ಕೆ ತಾಜಾ ಉದಾಹರಣೆ ಧಾರವಾಡ ನರೇಂದ್ರ ಗ್ರಾಮದ ಲಾಠಿ ಚಾರ್ಜ್. ಗಣಪತಿ ಮೆರವಣಿಗೆಯಲ್ಲಿ ಡಿಜೆಗಳು ಎದುರು ಬದುರು ಆಗುವುದು ಸಾಮಾನ್ಯ. ಅದನ್ನೇ ದೊಡ್ಡ ಕಾರಣವಾಗಿಟ್ಟಕೊಂಡು ಪೊಲೀಸರು ಸಾರ್ವಜನಿಕರ ಮೇಲೆ ಲಾಠಿ ಬೀಸುವುದು ಎಷ್ಟ ಸರಿ..? ಎಂದು ಮಹೇಶ್ ಪ್ರಶ್ನಿಸಿದ್ದಾರೆ.
ಲಾಠಿ ಬೀಸುವ ಮುನ್ನ ಡಿಜೆ ಬಂದ್ ಮಾಡಿಸಿದ್ದರೆ ಮುಗಿತಿತ್ತು. ಅದನ್ನು ಬಿಟ್ಟು ಗಣೇಶ ಮೆರವಣಿಗೆ ನೋಡಲು ಬಂದವರ ಮೇಲೆ ಲಾಠಿ ಚಾರ್ಜ್ ಏನೀದು..? ಈಗಾಗಲೇ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣವನ್ನು ಪರಮೋಚ್ಚೆಗೆ ತೆಗರದುಕೊಂಡು ಹೋಗಿದೆ. ಈ ಲಾಠಿ ಚಾರ್ಜ್ ಕುರಿತು ಸಿಎಂ ಮತ್ತು ಗೃಹ ಸಚಿವರು ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.




