Hubli News: ಹುಬ್ಬಳ್ಳಿ: ಹುಬ್ಬಳ್ಳಿ ಪೋಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆದಿದ್ದು, ನಕಲಿ ಖೋಟಾ ನೋಟು ಜಾಲವನ್ನು ಬೇಧಿಸಲಾಗಿದೆ.
ಸುಧೀರ್ ಮೆಹ್ತಾ ಎಂದು ಹೆಸರು ಬದಲಿಸಿಕ“ಂಡಿದ್ದ ಮಹಮ್ಮದ್ ಆಸೀಫ್ ಬಂಧಿತ ಆರೋಪಿಯಾಗಿದ್ದು, ಈತ ಮೂಲತಃ ಮೈಸೂರಿನವನಾಗಿದ್ದಾನೆ. ಈತನಿಂದ 1,87,45,000 ನಕಲಿ ನೋಟುಗಳ ಜಪ್ತಿ ಮಾಡಿಕ“ಳ್ಳಲಾಗಿದೆ. 500 ಮುಖ ಬೆಲೆಯ ನಕಲಿ ನೋಟುಗಳಾಗಿದ್ದು, ಅದರಲ್ಲಿ 5 ಸಾವಿರ ಮಾತ್ರ ಅಸಲಿ ನೋಟುಗಳಾಗಿದೆ.
ಈತ ಕನಸ್ಟ್ರಕ್ಷನ್ ವ್ಯವಹಾರಕ್ಕೆ ಕಡಿಮೆ ಬಡ್ಡಿದರದಲ್ಲಿ ಹಣ ಕೊಡಿಸುವುದಾಗಿ, ಪುಣೆ ಮೂಲದ ಅಶ್ವಿನಿ ಪೆದ್ದವಾಡ ಹಾಗು ಆಕೆಯ ಪುತ್ರಿ ಪೃಥಾಳಿಗೆ ವಂಚಿಸಿದ್ದ. ಪೃಥಾಳ ತಾಯಿ ಅಶ್ವಿನಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು. ಮೈಸೂರಿನಲ್ಲಿ ಮದುವೆಯಲ್ಲಿ ಆಸೀಫ್ ಅಶ್ವಿನಿಯನ್ನು ಭೇಟಿಯಾಗಿದ್ದ.
ಪ್ರೊಸೆಸಿಂಗ್ ಫೀಸ್ 60 ಲಕ್ಷ ನೀಡಿಬೇಕು, 50 ಕೋಟಿ ಸಾಲ ಕೋಡಿಸುವುದಾಗಿ ನಂಬಿಸಿದ್ದ. 60 ಲಕ್ಷ ಅಸಲಿ ಹಣ ಕೊಟ್ಟು ಎರಡು ಕೋಟಿ ನಕಲಿ ನೋಟು ನೀಡಿದ್ದ . ಅಲ್ಲದೇ, ಪೃಥಾಳನ್ನು ಸಂಪರ್ಕಿಸಲು ಪ್ರತ್ಯೇಕವಾದ ಮೊಬೈಲ್, ಪ್ರತ್ಯೇಕ ನಂಬರ್ ಬಳಕೆ ತೆಗೆದುಕೊಂಡಿದ್ದ. ಇದೀಗ ದೂರು ದಾಖಲಿಸಿಕ“ಂಡ ಪೋಲೀಸರು ಆರೋಪಿಯನ್ನು ಬಂಧಿಸಿ, ಹಣವನ್ನು ಜಪ್ತಿ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮದ ಜತೆ ಮಾತನಾಡಿರುವ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಒಂದುವರೆ ಕೋಟಿಗೂ ಅಧಿಕ ಮೊತ್ತ ನಕಲಿ ನೋಟು ಜಪ್ತಿ ಮಾಡಲಾಗಿದೆ. ಕುಖ್ಯಾತ ವಂಚಕನ ಬಂಧನ ವೇಳೆ ನಕಲಿ ನೋಟು ಜಾಲ ಪತ್ತೆ ಮಾಡಲಾಗಿದೆ. ಬಂಧಿತ ಆರೋಪಿಯಿಂದ ಒಂದು ಫೋರ್ಡ್ ಇಕೋ ಸ್ಪೋರ್ಟ್ಸ್ ಕಾರು ಜಪ್ತಿ ಮಾಡಲಾಗಿದೆ ಎಂದಿದ್ದಾರೆ.