- Advertisement -
Hubli News: ಹುಬ್ಬಳ್ಳಿ: ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿ, ಆತನಿಂದ ಮಾರಕಾಸ್ತ್ರ ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿಯ ದಿವಟಗಿ ಓಣಿಯ ಇಮ್ರಾನ್ ಮನಿಯಾರ್ ಎಂಬಾತ ಕೈಯಲ್ಲಿ ಮಾರಕಾಸ್ತ್ರ ಹಿಡಿದು ಕಾನೂನು ಬಾಹಿರ ಚಟುವಟಿಕೆ ಮಾಡುತ್ತಾ ಜನರನ್ನು ಭಯ ಪಡಿಸುತ್ತಿದ್ದ. ಆತ ಮಾರಕಾಸ್ತ್ರವನ್ನು ಅಪರಾಧ ಮಾಡುವ ಉದ್ದೇಶದಿಂದ ತೆಗೆದುಕೊಂಡು ಹೋಗುವಾಗ ಹಳೇ ಹುಬ್ಬಳ್ಳಿ ಚಿಕನ್ ಮಾರುಕಟ್ಟೆ ಹತ್ತಿರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -