Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿರುವ ಎಂಎಲ್‌ಸಿ ಸಲೀಂ ಅಹ್ಮದ್, ಮುಡಾ ವಿಚಾರದಲ್ಲಿ ಇಡಿಗೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಸೇರಿ ಇಡಿಗೆ ಕಪಾಳಮೋಕ್ಷ ಮಾಡಿದೆ. ಸುಪ್ರೀಂ ಕೋರ್ಟ್ ಇಡಿ ಬಳಸಿ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಅಂತಾ ಹೇಳಿದೆ ಎಂದು ಕಿಡಿಕಾರಿದ್ದಾರೆ.
ಈ ಹಿಂದೆಯಿಂದ ನಾವು ಕೇಂದ್ರ ಬಿಜೆಪಿ ಇಡಿ ಸಿಬಿಐ ದುರ್ಬಳಕೆ ಬಗ್ಗೆ ಹೇಳುತ್ತಲೇ ಬಂದಿದ್ವಿ. ಸ್ವಾಯತ್ತ ಸಂಸ್ಥೆ ಬಳಸಿ ವಿಪಕ್ಷಗಳ ಟಾರ್ಗೆಟ್ ಮಾಡುವ ಕುರಿತು ಹೇಳಿದ್ದರೆ ಬಿಜೆಪಿಯವರ ನಮ್ಮನ ಟೀಕೆ ಮಾಡ್ತಿದ್ದರು. ಬಿಜೆಪಿ ಮುಂಡರ ಮೇಲೆ ಯಾವುದೇ ರೇಡ್ ಆಗಿಲ್ಲ. ಆದರೆ ವಿಪಕ್ಷಗಳದವರ ಮೇಲೆ ರೇಡ್‌ಗಳಾಗುತ್ತದೆ.
ಕೇಂದ್ರ ಬಿಜೆಪಿಗೆ ಈಗಲಾದ್ರೂ ನಾಚಿಕೆ ಬರಬೇಕು ಎಂದು ಸಲೀಂ ಅಹ್ಮದ್ ಹೇಳಿದ್ದಾರೆ.
ಮಾತ್ತೇದ್ರೇ ಸಬಕಾ ಸಾಥ್ ಸಬಕಾ ವಿಕಾಸ ಅಂತಾರೆ ಪ್ರಧಾನಿ ಮೋದಿಯವರು. ಕಳೆದ ಎಂಪಿ ಎಲೆಕ್ಷನ್ ವೇಳೆ ಮೋದಿಯವರು ಅಬ್ಕಿ ಬಾರ್ ಚಾರಸೋ ಬಾರ್ ಅಂದ್ರು. ಆದರೆ ಜನಾ ಅದ್ಕೆ ಮತಗಳ ಮೂಲಕ ಉತ್ತರ ನೀಡಿದ್ರು. ಚಾರ್‌ಸೌವ್ ಸೀಟ್ ಬಿಜೆಪಿ ಗೆಲ್ಲಲೇ ಇಲ್ಲ, ಕೊನೆಗೆ ಮೈತ್ರಿ ಮಾಡ್ಕೊಂಡ ಸರ್ಕಾರ ಮಾಡಿದ್ದಾರೆ. ಮೋದಿಯವರು ಸಬ್ಕಾ ಸಾಥ್ ಸಬ್ಕಾ ವಿಕಾಸ ಮಾಡ್ತಿಲ್ಲ ಸಬ್ಕಾ ವಿನಾಶ ಮಾಡ್ತಿದ್ದಾರೆ. ಮಹದಾಯಿ ಸಮಸ್ಯೆ ಪರಿಹರಿಸುವ ವಿಚಾರದಲ್ಲಿ ಜೋಶಿಯವರು ಎನ್ಮಾಡ್ತಿದ್ದಾರೆ…? ಎಂದು ಸಲೀಂ ಅಹ್ಮದ್ ಪ್ರಶ್ನಿಸಿದ್ದಾರೆ.
ಮದಾಯಿಗೆ ಕೇಂದ್ರ ಯಾವತ್ತೂ ಅನುಮತಿ ನೀಡುವುದಿಲ್ಲ ಎಂದು ಬೂಪೇಂದ್ರ ಯಾದವ ಹೇಳಿದ್ದಾರೆ ಅಂತಾ ಗೋವಾ ಸಿಎಂ ಹೇಳಿದ್ದಾರೆ. ಇಲ್ಲಿನ ನಮ್ಮ ಕೇಂದ್ರ ಸಚಿವರು ಏನ್ಮಾಡತ್ತಿದ್ದಾರೆ..? ಎರಡು ವರ್ಷದ ಹಿಂದೆ ಇಲ್ಲಿನ ಕೇಂದ್ರ ಸಚಿವರು ಸೇರಿ ಬಿಜೆಪಿಗರು ಮಹದಾಯಿ ವಿಜಯೋತ್ಸ ಮಾಡಿದ್ದರು. ಈಗ ಗೋವಾ ಸಿಎಂ ಕೇಂದ್ರ ಬೂಪೇಂದ್ರ ಅವರ ಹೆಸರು ಹೇಳಿ ಅನುಮತಿ ಇಲ್ಲ ಅಂತಾರೆ. ಇದರ ಬಗ್ಗೆ ಕೇಂದ್ರ ಸ್ಪಷ್ಟನೆ ನೀಡಬೇಕು. ರಾಜ್ಯದಲ್ಲಿ ಐದು ಕೇಂದ್ರ ಸಚಿವರಿದ್ದಾರೆ 20 ಸಂಸದರು ಇದ್ದಾರೆ. ಇದರ ಬಗ್ಗೆ ಎಲ್ಲರು ಮಾತಾಡಲಿ. ರಾಜ್ಯದ ಅಭಿವೃದ್ಧಿಗೆ ಎಂಪಿ ಹಾಗೂ ಇಲ್ಲಿನ ಕೇಂದ್ರ ಸಚಿವರುಗಳ ಕೊಡುಗೆ ಏನೂ..? ಎಂದು ಸಲೀಂ ಅಹ್ಮದ್ ಪ್ರಶ್ನಿಸಿದ್ದಾರೆ.
ಬೆಲೆ ಏರಿಕೆ ಬಗ್ಗೆ ಮಾತಾಡುವುದಿಲ್ಲ ಇವರು. ಸಿಎಂ ಅವರು ಹೋಗಿ ಕೇಂದ್ರ ಸರ್ಕಾರ ಭೇಟಿ ಮಾಡಿ ರಾಜ್ಯದ ಅಭಿವೃದ್ಧಿ ಸಹಾಕರ ಕೋರಿದ್ದಾರೆ. ಕೇಂದ್ರ ಬಿಜೆಪಿ ನಡೆದುಕೊಳ್ಳುತ್ತಿರುವುದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ಈಗಾಗಲೇ ರಾಜ್ಯದ ಜನ ಬಿಜೆಪಿ ಮೇಲೆ ಭ್ರಮ ನೀರಸರಾಗಿದ್ದಾರೆ. ಮಹದಾಯಿ ವಿಚಾರದಲ್ಲಿ ನಮ್ಮ ಹೋರಾಟ ಎಂದಿಗೂ ಇಲ್ಲದು. ಇದರ ಬಗ್ಗೆ ಪಕ್ಷಾತೀತವಾಗಿ ರಾಜ್ಯದಿಂದ ಆಯ್ಕೆಯಾಗಿರೋ ಎಂಪಿಗಳು ಕೇಂದ್ರದಲ್ಲಿ ಹೋರಾಟ ಮಾಡಬೇಕು. ರಾಜ್ಯದಲ್ಲಿ ನಮ್ಮ ಸರ್ಕಾರ ನುಡಿದಂತೆ ನಡೆದುಕೊಳ್ಳುವ ಮೂಲಕ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇವೆ. ಸಂಸತ್ತಿನಲ್ಲಿ ಪ್ರತಿ ಬಾರಿ ಪ್ರಾಧಾನಿಗಳ ರೈಟ್ ಹ್ಯಾಂಡ ಆಗಿ ಕೆಲಸ ಮಾಡೋ ಇಲ್ಲಿನ ಕೇಂದ್ರ ಸಚಿವರು ಯಾಕೆ ಮಹದಾಯಿ ಕ್ಲೇಯರೆನ್ಸ ಕೊಡಸ್ತಿಲ್ಲ..? ಗೋವಾ ಸಿಎಂ ಹೇಳಿಕೆಯನ್ನು ಇಲ್ಲಿ ಕೇಂದ್ರ ಸಚಿವರು ಸೇರಿ ಬಿಜೆಪಿ ಎಂಪಿಗಳು ಖಂಡಿಸಲಿ. ಮಹದಾಯಿ ಸೇರಿ ಹಲವು ವಿಚಾರದಲ್ಲಿ ಬಿಜೆಪಿ ಸುಳ್ಳು ಪ್ರಚಾರ ತೆದುಕೊಳ್ಳುವುದಕ್ಕೆ ಹೋಗಿ ಈಗ ಇಲ್ಲಿ ಬಿಜೆಪಿ ಮನೆಗೆ ಹೋಗಿದೆ ಎಂದು ಸಲೀಂ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಎಲೆಕ್ಷನ್ ವೇಳೆ ಕಳ್ಳ ಓಟಿಂಗ್ ಮಾಡಿಸುತ್ತೆ ಎಂಬ ರಾಹುಲ್ ಗಾಂಧಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಸಲೀಂ ಅಹ್ಮದ್, ಈ ಹಿಂದೆಯಿಂದಲ್ಲೂ ನಾವು ಕಳ್ಳ ಓಟಿಂಗ್ ಬಗ್ಗೆ ಧ್ವನಿ ಎತ್ತಿದ್ದೇವೆ. ಇತ್ತೀಚೆಗೆ ನಡೆದ ಮಹಾರಾಷ್ಟ್ರ ಸೇರಿ ಹರಿಯಾಣದಲ್ಲಿ ಹೆಚ್ಚು ಕಳ್ಳ ಓಟ್‌ಗಳನ್ನು ಬಿಜೆಪಿ ಮಾಡಿಸಿದೆ. ಮಹಾರಾಷ್ಟ್ರದಲ್ಲಿ ಓಟಗಳು ಇರುವುದಗಿಂತ ಹೆಚ್ಚು ಮತಗಳು ಬಿದ್ದಿವೆ. ಈ ಬಗ್ಗೆ ನಮ್ಮ ರಾಹುಲ್ ಗಾಂಧಿಯವರ ಧ್ವನಿ ಎತ್ತಿದ್ದಾರೆ. ರಾಜ್ಯದಲ್ಲಿ ಒಂದು ಕ್ಷೇತ್ರದಲ್ಲಿಯು ಕಳ್ಳ ಓಟ್ ನಡೆದಿರುವ ಮಾಹಿತಿ ಇದೆ, ಯಾವ ಕ್ಷೇತ್ರ ಅಂತಾ ಗೊತ್ತಿಲ್ಲ.
ಬಿಹಾರದಲ್ಲಿಯು ಕಳ್ಳ ಓಟ್ ಮಾಡಿಸಲು ಬಿಜೆಪಿ ಮುಂದಾಗಿದೆ. ಓಟ್‌ಗಳು ಲೆಕಕ್ಕೆ ಸಿಗುತ್ತಲ್ಲ ಎಂದು ಹೇಳುತ್ತಿದ್ದಾರೆ. ಅನ್ ಡೆಮಾಕ್ರಟಿಕ್ ವೇಯಲ್ಲಿ ಬಿಜೆಪಿ ಗೆಲ್ಲುತ್ತಿದೆ. ತಪ್ಪುಗಳ ಬಗ್ಗೆ ಚರ್ಚೆ ನಡೆಯಬೇಕು ಅಂದರೆ ಅದೂ ಸರಿಯಾಗುತ್ತೆದೆ. ರಾಹುಲ್ ಗಾಂಧಿಯವರ ಕಳ್ಳ ಓಟ್ ಕುರಿತು ಡಾಕ್ಯುಮೆಂಟ್ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆಂದು ಸಲೀಂ ಅಹ್ಮದ್ ಹೇಳಿದ್ದಾರೆ.




