Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಓರ್ವ ಮಹಿಳೆ ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮತ್ತು ತಾಯಿ ಮಕ್ಕಳು ಇಬ್ಬರೂ ಆರೋಗ್ಯವಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯ ನಿವಾಸಿ ಪಂಚಾಕ್ಷರಿ ಮತ್ತು ವರ್ಷಿಣಿ ಎಂಬುವವರಿಗೆ ತ್ರಿವಳಿ ಮಕ್ಕಳು ಜನಿಸಿರೋದು. ಇವರಿಬ್ಬರು ಈ ಮುಂಚೆಯೇ 6 ವರ್ಷದ ಮಗಳಿದ್ದಾರೆ. ಆದರೆ ಬಳಿಕ ಗರ್ಭಿಣಿಯಾದಾಗ, ಇವರಿಗೆ ಮೂವರು ಮಕ್ಕಳು ಜನಿಸಿದ್ದಾರೆ. ವರ್ಷಿಣಿಯವರು 2 ಹೆಣ್ಣು ಮತ್ತು 1 ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಈ ಡಿಲೆವರಿಯಾಗಿದ್ದು, ಆಶ್ಪತ್ರೆ ವೈದ್ಯರಾದ ಡಾ. ಸುಧಾ ಹಳೇಮಣಿ ಹಾಗೂ ತಂಡ ಡೆಲಿವರಿ ಮಾಡಿದೆ. ಹಾಗಾಗಿ ವೈದ್ಯರು ಮತ್ತು ತಂಡದವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ. ಯಾಕಂದ್ರೆ ತ್ರಿವಳಿ ಮಕ್ಕಳನ್ನು ಸೇಫ್ ಆಗಿ ಡಿಲೆವರಿ ಮಾಡೋದು ಸಾಮಾನ್ಯ ವಿಷಯವೇ ಅಲ್ಲ. ಇನ್ನು ವರ್ಷಿಣಿ ಮತ್ತು ಪಂಚಾಕ್ಷರಿ ಅವರ ಮನೆಯವರೂ ಫುಲ್ ಹ್ಯಾಪಿಯಾಗಿದ್ದಾರೆ.