Hubli news: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಟೆರಿರಸ್ಟ್ ನಂತಹ ಕೆಟ್ಟ ಹುಳುಗಳು ಹೊರಬರುತ್ತವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಉಗ್ರರನ್ನೆ ಪೋಷಣೆ ಮಾಡುತ್ತ ಬಂದಿದ್ದಾರೆ ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನ ವಿಚಾರ ಅತ್ಯಂತ ಕೆಟ್ಟ ವಿಚಾರವಾಗಿದ್ದುಇವತ್ತು ಸಿಸಿಬಿ ಪೊಲೀಸರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.
ನಾನು ಈ ಬಗ್ಗೆ ಮಾಹಿತಿ ಪಡೆದುಕೊಂಡೇ .ಅವರ ಬಳಿ ಜೀವಂತ ಬಾಂಬ್ ಸೇರಿ ಅನೇಕ ವಸ್ತುಗಳು ಸಿಕ್ಕಿವೆ, ಸುಲ್ತಾನಪಾಳ್ಯದಲ್ಲಿ ಇವರು ವಾಸವಾಗಿದ್ದರು ಎನ್ನಲಾಗಿದೆ. ಇವರ ಜೊತೆಗೆಇಬ್ಬರು ಮಹಿಳೆಯರ ಉಲ್ಲೇಖವೂ ಆಗಿದೆ.ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಈ ರೀತಿ ಕೆಟ್ಟ ಹುಳ ಹೊರ ಬರುತ್ತಿವೆ. ಹಾವು, ಚೇಳುಗಳು ಇವೆಲ್ಲವೂ ಹೊರಗೆ ಬರ್ತಾವೆ ಈಗಇವರಿಗೆಲ್ಲ ಪೋಷಣೆ ಕಾಂಗ್ರೆಸ್ ಸರ್ಕಾರ ಆಗಿದೆ ಎಂದು ಗಂಭೀರ ಸ್ವರೂಪದ ಅರೋಪ ಮಾಡಿದರು.ಇಂತಹ ಉಗ್ರರನ್ನೆ ಪೋಷಣೆ ಮಾಡುತ್ತ ಬಂದಿದ್ದಾರೆ.
ಈ ಮೂಲಕ ಲಕ್ಷಾಂತರ ಜನರನ್ನು ಕೊಂದು ಹಾಕಿದ್ದಾರೆ. ಈಗ ಕಾಂಗ್ರೆಸ್ ಬಂದಿದ್ದರಿಂದ ಇಂತಹವುಗಳು ಇನ್ನೂ ಆಗುತ್ತವೆ.ಭಾರತೀಯ ಜನತಾ ಪಕ್ಷದ ಸರ್ಕಾರದ ಅವಧಿಯಲ್ಲಿ ಹರ್ಷ ಕೊಲೆ ಆಯ್ತು ಕೊಲೆ ಆರೋಪಿಗಳು ಜೈಲಿನಲ್ಲಿ ಫೋನ್ ನಲ್ಲಿ ಮಾತನಾಡುತ್ತ ಆನಂದವಾಗಿದ್ದರು ಇವತ್ತು ಸಿಕ್ಕ ಶಂಕಿತರು ಅವರೊಂದಿಗೆ ಸಂಪರ್ಕದಲ್ಲಿದ್ದರೆಂಬ ಮಾಹಿತಿ ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜೈಲ್ ನಲ್ಲಿ ಉಗ್ರರು, ಪಾಕಿಸ್ತಾನಿಗಳು, ಕೊಲೆಗಡುಕರು ಇದಾರೆ.
ಮುಸ್ಲಿಂ ಭೂಗತ ವ್ಯಕ್ತಿಗಳಿದ್ದಾರೆ ಸರ್ಕಾರದ ನಿರ್ಲಕ್ಷ್ಯದಿಂದ ಈ ಎಲ್ಲ ಕೃತ್ಯ ಆಗುತ್ತಿವೆ ಇದಕ್ಕೆ ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿ ಸಹ ಕಾರಣ ಎಂದ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರದಲ್ಲಿ ಹಿಂದಿನ ದಾಖಲೆ ಹೊರತೆಗೆಯಲಿ. ಮಲೆನಾಡಿನಲ್ಲಿ ವ್ಯವಸ್ಥಿತವಾಗಿ ಪ್ಲಾನಿಂಗ್‌ಗಳು ನಡೆಯುತ್ತಿವೆ ಇದರ ಜೊತೆಗೆ ಚಾಮರಾಜಪೇಟೆ ಕ್ಷೇತ್ರದಲ್ಲಿ ಉಗ್ರವಾದಿಗಳಿದ್ದಾರೆ ಬಾಂಗ್ಲಾ, ಅಪಘಾನಿಸ್ತಾನಗಳಿದ್ದಾರೆ ಇದೇ ಕಾರಣಕ್ಕೆ ಕೋವಿಡ್ ಸಮಯದಲ್ಲಿ ಸರ್ವೆಗೆ ಬಿಡಲಿಲ್ಲ.
ಕೆಜಿ ಹಳ್ಳಿ, ಡಿಜೆ ಹಳ್ಳಿ, ಹಳೆ ಹುಬ್ಬಳ್ಳಿ, ಮೈಸೂರ ಘಟನೆಗಳೆಲ್ಲ ಉಗ್ರ ಕೃತ್ಯಗಳೆ ಇನ್ನು ರಾಜಕಾರಣಿಗಳು ಕೇವಲ ಅಧಿಕಾರ ದಾಹದಲ್ಲಿದ್ದಾರೆ ಆ ಮೂಲಕ ಜನರ ಬಲಿ ತೆಗೆದುಕೊಳ್ಳುತ್ತಿದ್ದಾರೆ ಎಂದ ಅವರು ಈಗ ಮಾಡಿರುವ ಸಿಸಿಬಿ ಪೊಲೀಸರ ಕಾರ್ಯ ಶ್ಲಾಘನೀಯ ಅಲ್ಲಿ ಸಿಕ್ಕಿ ಮಹಿಳೆಯರನ್ನು ಬಂಧಿಸಿ ವಿಚಾರಣೆ ಮಾಡಬೇಕುಪಬ್ ಜಿ ಆಟದ ಪ್ರೀತಿ ಹೆಸರಿನಲ್ಲಿ ಪಾಕ್ ಮಹಿಳೆ ದೇಶಕ್ಕೆ ಬಂದಿದ್ದಾಳೆ ಈಗ ಬೆಂಗಳೂರಿನಲ್ಲಿ ಸಿಕ್ಕವರು ಈಗ ಐದು ಜನ ಮಾತ್ರ ಎಲ್‌ಇಟಿ ಸಂಘಟನೆ ಮಾತ್ರವಲ್ಲ ಎಲ್ಲ ಸಂಘಟನೆ ಸಕ್ರಿಯ ಆಗುತ್ತವೆ ಎಂದರು. ಇನ್ನು ರಾಜ್ಯದಲ್ಲಿ
ಗೋ ಹತ್ಯೆ ನಿರಂತರವಾಗಿ ನಡೆಯುತ್ತಿದೆ ಇದರ ಹಣವೇ ಉಗ್ರ ಕೃತ್ಯಕ್ಕೆ ಹೊರಟಿದೆ ಎಂದರು.
Narendra Modi : ಮೋದಿ ಜೊತೆಗಿನ ಸೆಲ್ಫಿ ಹಂಚಿಕೊಂಡ ಎಮ್ಯಾನುಯೆಲ್ ಮ್ಯಾಕ್ರೋನ್