Hubli News: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಅಂತರ ರಾಜ್ಯದ ಐವರು ಮಹಿಳೆಯರು ಸೇರಿ ಏಳು ಜನ ಪುರುಷರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೈಸೂರಿನ ಒಡನಾಡಿ ಸಂಸ್ಥೆಯ ಮಾಹಿತಿ ಮೇರೆಗೆ ಹುಬ್ಬಳ್ಳಿ ನಗರದ ಹೊಸೂರಿನ ಪಾರಿಜಾತ ಲಾಡ್ಜ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಲಾಡ್ಜ್ ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು, ಪಶ್ಚಿಮ ಬಂಗಾಳದ ಓರ್ವ ಯುವತಿ ಸೇರಿದಂತೆ ಐದು ಜನ ಯುವತಿಯರು, ಏಳು ಜನ ಪುರುಷರನ್ನು ಬಂಧಿಸಲಾಗಿದೆ. ಇನ್ನೂ ದಾಳಿಯ ವೇಳೆ ಶೌಚಾಲಯದಲ್ಲಿ ಗುಪ್ತ ಬಾಗಿಲು ಪತ್ತೆಯಾಗಿದ್ದು, ಯಾರಾದರೂ ಬಂದರೆ ತಪ್ಪಿಸಿಕೊಳ್ಳಲು ಪತ್ತೆಯಾದ ಗುಪ್ತ ಸ್ಥಳ ಕೂಡ ನಿರ್ಮಾಣ ಮಾಡಲಾಗಿದೆ. ಒಡನಾಡಿ ಸಂಸ್ಥೆಯ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದು, ಹುಬ್ಬಳ್ಳಿಯ ಹೊಸೂರಿನಲ್ಲಿರುವ ಪಾರಿಜಾತ ಲಾಡ್ಜ್ ಗೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಸಿಸಿಬಿ ಪೊಲೀಸರಿಂದ ಮಾಹಿತಿ ಪಡೆದುಕೊಂಡಿದ್ದಾರೆ.