Hubli News: ಬಾಲಕದ ಜೀವ ತೆಗೆದ ರೀಲ್ಸ್ ಹುಚ್ಚು: ಬಿಜೆಪಿ ಮುಖಂಡ ವೀರೇಶ್ ಸಂಗಳದ ಪುತ್ರ ನಮೀಷ್ ಸಾ*

Hubli News: ಹುಬ್ಬಳ್ಳಿ: ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕ“ಂಡಿರುವ ಸುದ್ದಿ ಪ್ರತಿದಿನ ನಾವು ಕೇಳುತ್ತೇವೆ. ಆದರೆ ಕೆಲವರು ಈ ಮಾತನ್ನು ಸಿರಿಯಸ್‌ಯಾಗಿ ತೆಗೆದುಕ“ಳ್ಳುವ ಮನಸ್ಸೇ ಮಾಡುವುದಿಲ್ಲ. ಕೆಲ ದಿನಗಳ ಹಿಂದೆ ಮನೆಯ ಹಿರಿಯ ವ್ಯಕ್ತಿಯನ್ನು ಗಂಟುಮೂಟೆ ಕಟ್ಟಿ, ಪಾರ್ಸೆಲ್ ಕಳುಹಿಸುವ ರೀಲ್ಸ್ ಮಾಡಲಾಗಿತ್ತು.

ಬಸ್ ಟಿಕೇಟ್ ಹೆಚ್ಚಾಗಿದ್ದು, ಅದನ್ನು ಖರೀದಿಸಲು ಎಷ್ಟು ಸಮಸ್ಯೆಯಾಗುತ್ತಿದೆ ಎಂಬ ಸಂದೇಶ ನೀಡಲು ಆ ರೀತಿ ರೀಲ್ಸ್ ಮಾಡಲಾಗಿತ್ತು ಅಂತಾ ಆ ಮನೆಯವರು ಹೇಳಿದ್ದರು. ಇದೀಗ ಓರ್ವ ಬಾಲಕ ರೀಲ್ಸ್ ಮಾಡಲು ಹೋಗಿ ತನ್ನ ಪ್ರಾಣವನ್ನೇ ಕಳ್ಕೋಂಡಿದ್ದಾನೆ.

ಹುಬ್ಬಳ್ಳಿಯ ಲಕ್ಷ್ಮೀ ನಗರದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ನಿವಾಸಿಯಾಗಿರುವ 15 ವರ್ಷ ನಮೀಷ್ ಸಂಗಳದ ಸಾವನ್ನಪ್ಪಿರುವ ಬಾಲಕನಾಗಿದ್ದಾನೆ. ಈತ ಬಿಜೆಪಿ ಮುಖಂಡ ವೀರೇಶ್ ಸಂಗಳದ ಅವರ ಮಗನಾಗಿದ್ದು, ಸ್ಟಂಟ್ ಮತ್ತು ಕ್ರ್ಯಾಶ್ ರೀಲ್ಸ್ ಮಾಡುತ್ತಿದ್ದಾರೆ ಈ ಅವಘಡ ಸಂಭವಿಸಿದೆ.

ಈತನ ಜತೆ ಕೆಲವು ಬಾಲಕರು ಸೇರಿ ಆಡಿ ಕಾರು ಮತ್ತು ಬೈಕ್‌ನಲ್ಲಿ ಸ್ಟಂಟ್ ಮಾಡಲು ಹೋಗಿ, ಆ್ಯಕ್ಸಿಡೆಂಟ್ ಆಗಿದೆ.  ಈತ ಮೈಸೂರಿನಲ್ಲಿ 9ನೇ ತರಗತಿ ಓದುತ್ತಿದ್ದ. ಯುಗಾದಿ ಹಬ್ಬಕ್ಕೆಂದು ಊರಿಗೆ ಬಂದಿದ್ದ.

ಈ ವೇಳೆ ರೀಲ್ಸ್ ಮಾಡಲು ಸೇಜ್ವಾಡ್ಕರ್ ಪ್ಲಾಟ್‌ಗೆ ತೆರಳಿದ್ದರು. ಈ ಅಪ್ರಾಪ್ತನಿಗೆ ಆಡಿ ಕಾರ್ ಓಡಿಸಲು ತಿಳಿದಿದ್ದ ಕಾರಣ, ಈ ವೇಗವಾಗಿ ಕಾರ್ ಚಲಾಯಿಸಿ, ಅದನ್ನು ವೀಡಿಯೋ ಮಾಡಲು ಹೋಗಿದ್ದಾನೆ. ಆದರೆ ಅಪಘಾತ ಸಂಭವಿಸಿ, ಬೈಕ್‌ಗೆ ಗುದ್ದಿದ್ದಾನೆ. ಘಟನೆಯಲ್ಲಿ ಬಿಜೆಪಿ ಮುಖಂಡನ ಪುತ್ರ ಸ್ಥಳದಲ್ಲಿಯೇ ಸಾವನ್ನಪ್ಪಿದ್ರೆ, ಜತೆಗಿದ್ದವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತ ಮಾಡಿರೋ ಅಪ್ತಾಪ್ತ‌ ಬಾಲಕನನ್ನು‌ ವಿಚಾರಣೆ ನಡೆಸಿದ್ದಾರೆ.

About The Author