Hubli News: ಹುಬ್ಬಳ್ಳಿ: ಅವಳಿ ನಗರವಾಗಿರುವ ಹುಬ್ಬಳ್ಳಿ- ಧಾರವಾಡದಲ್ಲಿ ಜೋರಾಗಿ ಮಳೆ ಸುರಿಯುತ್ತಿದ್ದು, ರಭಸವಾದ ಮಳೆಗೆ ರಸ್ತೆ ಕೊಚ್ಚಿಹೋಗಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬಿದರಗಡ್ಡಿ ಗ್ರಾಮದ ಬಳಿ ರಸ್ತೆ ಕೊಚ್ಚಿಹೋಗಿದ್ದು, ಜನ 10ಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕಡಿದುಕ“ಂಡಿದ್ದಾರೆ. ಹಾಗಾಗಿ ಕಲಘಟಗಿಯಿಂದ ತಡಸ ಗ್ರಾಮಕ್ಕೆ ಸಂಚಾರ ಸ್ಥಗಿತವಾಗಿದೆ. ಇನ್ನು ಹೀಗಾಗಿರುವುದರಿಂದ ಬಸ್ ಬಾರದೇ ಮತ್ತು ಶಾಲೆಗೆ ಹೋಗದೇ ಮನೆಯಲ್ಲೇ ಇರುವಂತಾಗಿದೆ.
ಇನ್ನು ಇದು ನಿನ್ನೆ ಮ“ನ್ನೆ ನಡೆದಿರುವ ಘಟನೆ ಅಲ್ಲ. ಬದಲಾಗಿ ತಿಂಗಳಾಗಿದೆ. ಮೂರು ತಿಂಗಳಿನಿಂದ ರಸ್ತೆ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದರೂ ಕೂಡ, ಅಧಿಕಾರಿಗಳು- ಜನಪ್ರತಿನಿಧಿಗಳು ತಲೆ ಕೆಡಿಸಿಕ“ಳ್ಳಲಿಲ್ಲ. ಹಾಗಾಗಿ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಗ್ರಾಮಸ್ಥರು ಹಿಡಿಶಾಪ ಹಾಕಿದ್ದಾರೆ.




