Wednesday, August 20, 2025

Latest Posts

Hubli News: ಚಲಿಸುತ್ತಿದ್ದ ಬಸ್ ನಿಲ್ಲಿಸಿ ಪುಂಡಾಟ ಮೆರೆದ ಪುಡಿ ರೌಡಿಗಳು..!

- Advertisement -

Hubli News: ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಚಲಿಸುತ್ತಿದ್ದ ಬಸ್ ನಿಲ್ಲಿಸಿ ಪುಡಿ ರೌಡಿಗಳು ಪುಂಡಾಟ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹೌದು ವಾಹನ ಚಲಾವಣೆ ವಿಚಾರಕ್ಕೆ ಗದಗ ರೋಡ್ ಸೇಂಟ್ ಜಾನ್ಸ್ ಚರ್ಚ್‌ ಮುಂದೆ ಇಬ್ಬರು ಯುವಕರು ಚಲಿಸುತ್ತಿದ್ದ ಬಸ್ ನಿಲ್ಲಿಸಿ ಗ್ಲಾಸ್ ಒಡೆದು ಬಸ್ಸಿನಲ್ಲಿ ಹತ್ತಿ ಅವಾಚ್ಯ ಶಬ್ದಗಳಿಂದ ಡ್ರೈವರ್ ನನ್ನು ನಿಂದಿಸಿ ಚಾಲಕನಿಗೆ ಧಮ್ಕಿ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಘಟನೆ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಷ್ಟಕ್ಕೂ ಈ ಘಟನೆ ಆಗಿದ್ದಾದ್ರೂ ಏಕೆ..? ಬಸ್ ಚಾಲಕನ ತಪ್ಪಾ ಅಥವಾ ಈ ಯುವಕರ ತಪ್ಪಾ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.

- Advertisement -

Latest Posts

Don't Miss