Hubli News: ಹುಬ್ಬಳ್ಳಿಯಲ್ಲಿ ಮಾತನಾಡಿರುವ ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್, ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಅನ್ಯಾಯ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಅನ್ಯಾಯ ಆಗ್ತಿದೆ. ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ಸಹ ಆಗಿದೆ. ಅದಕ್ಕೆ ಆಗಿನ ಬಿಜೆಪಿ ಸರ್ಕಾರ ಸ್ಪಂದಿಸಿ, ಒಳ ಪಂಗಡಗಳಿಗೂ ಅನುಕೂಲ ಮಾಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಕಾರ್ಯ ರೂಪಕ್ಕೆ ತರುವ ಕೆಲಸ ಮಾಡ್ತಿಲ್ಲ. ಸಿದ್ದರಾಮಯ್ಯ ಬಿಜೆಪಿ ನಿರ್ಧಾರ ಜಾರಿಗೆ ತರಬಾರದು ಅಂತ ಕೋರ್ಟ್ ಗೆ ಹೋಗಿದ್ರು. ಚುನಾವಣೆ ಹಿನ್ನೆಲೆ ಮುಂದಿನ ಹಿಯರಿಂಗ್ ವರೆಗೂ ಅದನ್ನ ತರುವುದಿಲ್ಲ ಅಂತ ಮುಚ್ಚಳಿಕೆ ಕೊಟ್ಟಿತ್ತು. ಆದ್ರೆ ಎರಡು ವರ್ಷ ಆದರೂ ಸಹ ಇದುವರೆಗೂ ಏನು ಮಾಡಿಲ್ಲ ಎಂದು ಬೆಲ್ಲದ್ ಹೇಳಿದ್ದಾರೆ.
ಡಿಸೇಂಬರ್ 10ರಂದು ಬೆಳಗಾವಿಯಲ್ಲಿ ದೊಡ್ಡ ಪ್ರಮಾಣದ ಸಮಾವೇಶ ನಡೆಯಿತು. ಮುಖ್ಯಮಂತ್ರಿಗಳು ನಮ್ಮ ಸಮಸ್ಯೆ ಆಲಿಸ್ತಾರೆ ಅಂತ ಇತ್ತು. ಆದರೆ ಅವರು ಬಾರದೆ ಹೋದಾಗ ನಾವೇ ಹೋಗಲು ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋಗಿದ್ವಿ. ಆ ವೇಳೆ ನಮ ಸಮಾಜದ ಮೇಲೆ ಹಲ್ಲೆ ಮಾಡಲಾಯಿತು. ನಮ್ಮನ್ನ ರಸ್ತೆ ಮೇಲೆ ಬೀಳಿಸಿ ಹೊಡೆಯಲಾಯಿತು. ಈ ಬಗ್ಗೆ ತನಿಖೆ ಮಾಡಲಿಲ್ಲ, ನ್ಯಾಯ ಸಹ ಕೊಡಿಸಲು ಮುಂದಾಗಲಿಲ್ಲ. ಹೈಕೋರ್ಟ್ ಗೆ ಜಯಮೃತ್ಯುಂಜಯ ಸ್ವಾಮೀಜಿಗಳು ಹೋಗಿದ್ರು.
ಸರ್ಕಾರಕ್ಕೆ ನ್ಯಾಯಾಧೀಷರು 3 ತಿಂಗಳಲ್ಲಿ ತನಿಖೆ ಮಾಡಲು ಸೂಚನೆ ನೀಡಿದ್ರು. 3 ತಿಂಗಳಾದ್ರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ನಾವು ಇವತ್ತು ಮುಖ್ಯಮಂತ್ರಿಗಳಿಗೆ ಹಾಗೂ ಸರ್ಕಾರಕ್ಕೆ ಒತ್ತಾಯ ಮಾಡ್ತೇವೆ. ಸಮಾಜದ ಸಮಸ್ಯೆಗೆ ಸ್ಪಂದನೆ ಮಾಡಿರಿ. ನಿಮ್ಮ ಡೋಂಗಿ ಗಣತಿ ನಿಲ್ಲಿಸಿ ಇತ್ತ ಗಮನ ಹರಿಸಿ. ಸ್ವಾಮೀಜಿಗೆ ಸಮಾಜದ ಮೇಲಿರುವ ಗೌರವ ಯಾರು ಹಾಳು ಮಾಡಲು ಸಾಧ್ಯವಿಲ್ಲ ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ.
ಯತ್ನಾಳ ಪರವಾಗಿ ಮಾತನಾಡಿದ್ದ ಜಯಮೃತ್ಯುಂಜ ಸ್ವಾಮೀಜಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಬೆಲ್ಲದ್, ಸ್ವಾಮೀಜಿ ವ್ಯಕ್ತಿ ಪರವಾಗಿ ಅಂತೇನು ಇಲ್ಲಾ. ಸಮಾಜದಲ್ಲಿರುವವರ ಪರವಾಗಿ ಮಾತಾಡಿಲ್ಲ ಅಂದ್ರೆ ಸಮಾಜದವರ ಬಗ್ಗೆ ಕಾಳಜಿ ಇಲ್ಲಾ ಅನ್ನೋ ಹಾಗೆ ಆಗುತ್ತೆ. ಇದು ಯಾವುದೋ ಟ್ರಸ್ಟ್ ಗೆ ಸೀಮಿತ ಅಲ್ಲಾ, ಸಮಾಜದ್ದಾಗಿದೆ. ಎಲ್ಲವನ್ನು ಮೀರಿ ನಿಂತು ಸ್ವಾಮೀಜಿ ಕೆಲಸ ಮಾಡ್ತಾರೆ. ಸ್ವಾಮೀಜಿ ಪಾದರಸ ಇದ್ದಂತೆ, ಅವರೇ ದೊಡ್ಡ ಶಕ್ತಿ ಇದ್ದಂತೆ ಎಂದು ಬೆಲ್ಲದ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಯಲ್ಲಿ ನಾಲ್ಕುವರೇ ಇ ಬಸ್ ಬೆಂಗಳೂರಿಗೆ ತಲುಪಿಸುವ ಕೆಲಸ ಹೆಚ್ ಡಿ ಕುಮಾರಸ್ವಾಮಿ ಮಾಡಿದ್ದಾರೆ. ನಾನು ಅವರ ನಿರ್ಧಾರವನ್ನ ನಾನು ಸ್ವಾಗತ ಮಾಡ್ತೇನೆ. ನಾನು ಕೂಡ ಪತ್ರ ಬರೆದಿದ್ದೇನೆ. ಹುಬ್ಬಳ್ಳಿ ಧಾರವಾಡ ಸೇರಿ ಉತ್ತರ ಕರ್ನಾಟಕದ ನಗರಗಳಿಗೂ ಬಸ್ ವಿಸ್ತರಿಸಲು ಪತ್ರ ಬರೆದಿದ್ದೇನೆ. ಕುಮಾರಸ್ವಾಮಿ ಅವರು ಭರವಸೆ ಸಹ ಕೊಟ್ಟಿದ್ದಾರೆ ಎಂದು ಹೆಚ್ಡಿಕೆ ಪರ ಬೆಲ್ಲದ್ ಬ್ಯಾಟ್ ಬೀಸಿದ್ದಾರೆ.
ಸಿದ್ದರಾಮಯ್ಯ ಅವರನ್ನ ಕೇಂದ್ರ ಅಹಿಂದ ಅಧ್ಯಕ್ಷರಾಗಿ ನೇಮಕ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಬೆಲ್ಲದ್, ರಾಜಕಾರಣ ಮಾಡ್ತಾ ಇದ್ದಾರೆ. ಇಲ್ಲಿದ್ದ ಅಹಿಂಸಾ ಸಂಘಟನೆಯನ್ನ ದೇಶಕ್ಕೆ ಒಯ್ತಾ ಇರಬೇಕು. ಅವರಿಗೆ ಪ್ರಮೋಷನ್ ಮಾಡಿ, ಡಿಮೋಷನ್ ಮಾಡಬಹುದು. ಅಲ್ಲಿ ನಾಯಕರನ್ನ ಮಾಡಿ ಇಲ್ಲಿ ಖುರ್ಚಿಯಿಂದ ಕೆಳಗೆ ಇಳಿಸಬಹುದು ಎಂದು ಬೆಲ್ಲದ್ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಬೆಲ್ಲದ್, 9 ರಾಜ್ಯಗಳಲ್ಲಿ ಹೊಸ ಅಧ್ಯಕ್ಷರನ್ನ ಮಾಡಲಾಗುತ್ತೆ. ಎಲ್ಲಾ ನಮ್ಮ ನಾಯಕರು ನಿರ್ಧಾರ ಕೈಗೊಳ್ತಾರೆ. ಮಹಿಳೆಯರನ್ನ ಮಾಡ್ತಾರೋ ಏನೋ ಯಾರಿಗೆ ಗೊತ್ತು. ನಮ್ಮ ಪಕ್ಷದಲ್ಲಿ ಸಮಾಜ, ಕುಟುಂಬ ಅಧ್ಯಕ್ಷರನ್ನ ಮಾಡೋದಿಲ್ಲ. ಗಾಂಧೀ ಕುಟುಂಬದಲ್ಲಿ ಕುಟುಂಬ ರಾಜಕಾರಣ ಇದೆ. ನಮ್ಮಲ್ಲಿ ಕುಟುಂಬ ರಾಜಕಾರಣದ ಮೇಲೆ ಅಧ್ಯಕ್ಷರನ್ನ ಮಾಡೋದಿಲ್ಲ ಎಂದು ಬೆಲ್ಲದ್ ಹೇಳಿದ್ದಾರೆ.
ರಾಯರಡ್ಡಿ ಸಿಎಂ ಸಿದ್ದರಾಮಯ್ಯಗೆ ಗೃಹಲಕ್ಷ್ಮೀ ಯೋಜನೆ ನಿಲ್ಲಿಸುವಂತೆ ಸಲಹೆ ನೀಡಿದ್ದು, ಈ ಬಗ್ಗೆ ಪ್ರತಿಕ್ರಿಯಿಸರುವ ಬೆಲ್ಲದ್, ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರರು, ಅನುಭವಿ ರಾಜಕಾರಣಿ. ಸರ್ಕಾರದಲ್ಲಿ ಅಭಿವೃದ್ಧಿ ಕೆಲಸ ಇಲ್ಲಾ ಅನ್ನೋದಕ್ಕೆ ಹೀಗೆ ಹೇಳಿದ್ದಾರೆ. ಬಡವರಿಗೆ ಗ್ಯಾರೆಂಟಿ ಹೋಗ್ತಾ ಇದೆ ಹೋಗ್ಲಿ. ಆದರೆ ಇವರು ಲೂಟಿ ಹೊಡೀತಾ ಇದ್ದಾರೆ. ಅದನ್ನ ನಿಲ್ಲಿಸಿ ತಾನಾಗಿಯೇ ಅಭಿವೃದ್ಧಿ ಆಗುತ್ತೆ ಎಂದು ಬೆಲ್ಲದ್ ಹೇಳಿದ್ದಾರೆ.