Hubli News: ಪ್ರಬಂಧ ಸ್ಪರ್ಧೆಯಲ್ಲಿ ಶಿರಗುಪ್ಪಿ ಪಂಡಿತ ನೆಹರು ಪ್ರೌಢ ಶಾಲೆಯ ವಿದ್ಯಾರ್ಥಿ ಸಾಧನೆ

Hubli News: ಹುಬ್ಬಳ್ಳಿ: ತಾಲೂಕಿನ ಶಿರಗುಪ್ಪಿ ಗ್ರಾಮದ ಪಂಡಿತ ನೆಹರು ಪ್ರೌಢ ಶಾಲೆಯ ವಿದ್ಯಾರ್ಥಿನೀ ಶಕುಂತಲಾ ಚಂದ್ರಶೇಖರ ಹಸಬಿ ಶನಿವಾರ ನಡೆದಿದೆ. ಹುಬ್ಬಳ್ಳಿ ತಾಲೂಕ ಮದ್ಯಾಮಿಕ್ ಶಾಲಾ ನೌಕರರ ಸಹಕಾರಿ ಪತ್ತಿನ ಸಂಘ 50 ನೇ ವರ್ಷದ ಸುವರ್ಣ ಮಹೋತ್ಸವ ಅಂಗವಾಗಿ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಆಯ್ಕೆಯಾಗಿದ್ದಾರೆ.

ಈ ಮೂಲಕ ಶಾಲೆಗೆ ಕೀರ್ತಿ ತಂದಿದ್ದು, ವಿಜೇತ ವಿದ್ಯಾರ್ಥಿನೀಗೇ ವಿಧಾನ ಪರಿಷತ್ ಸಭಾಪತಿಗಳು ಶ್ರೀ ಬಸವರಾಜ್ ಹೊರಟ್ಟಿ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಅಭಿನಂದನೆ ಸಲ್ಲಿಸಿದ್ದಾರೆ ಹಾಗೂ ಶಾಲೆಯ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ, ಪೋಷಕರು, ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದು ಅಭಿನಂದಿಸಿದ್ದಾರೆ.

About The Author