Saturday, July 5, 2025

Latest Posts

Hubli News: 2 ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಆರೋಪಿಗಳ ಬಂಧನ

- Advertisement -

Hubli News: ಹುಬ್ಬಳ್ಳಿ: ಎರಡು ಪ್ರತ್ಯೇಕ ಮನೆಗಳವು ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ 9 ಲಕ್ಷ ಮೌಲ್ಯದ ಬಂಗಾರದ ಆಭರಣ ಹಾಗೂ ಎರಡು ಮೋಟಾರ್ ಸೈಕಲ್’ಗಳನ್ನು ಜಪ್ತಿ ಮಾಡಿದ್ದಾರೆ.

ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳತನ ಮಾಡುತ್ತಿದ್ದ, ಕುಂದಗೋಳ ತಾಲೂಕಿನ ಗುಡಗೇರಿ ಮೂಲದ ಶ್ರೀಧರ್ ಭೀಮಪ್ಪ ಬಿಂಜಡಗಿ (27), ಹೇಮಂತ ಮಲ್ಲಪ್ಪ ಧರೆಣ್ಣವರ (34) ಹಾಗೂ ಗೋವಾ ಮೂಲದ ಇಲ್ಲಿನ ಎಪಿಎಂಸಿ ಹತ್ತಿರದ ಈಶ್ವರ ನಗರದ ನಿವಾಸಿ ಗೆಬಿ ಫರ್ನಾಂಡೀಸ್ ಪಾವಲು (31) ಎಂಬಾತರನ್ನು ಬಂಧಿಸಿದ್ದಾರೆ.

ಕಳೆದ ಜೂನ್ 19 ರಂದು ತಾರಿಹಾಳ ಗ್ರಾಮದಲ್ಲಿ ಸೈದುಸಾಬ ದಾವಲಸಾಬ್ ನದಾಫ್ (50) ಎಂಬಾತರ ಮನೆಯ ಬಾಗಿಲು ಮುರಿದು ಟ್ರಜೂರಿಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದರು, ಅದೇ ತರಹ ಜೂನ್ 30 ರಂದು ಅಂಚಟಗೇರಿ ಗ್ರಾಮದ ಶಿವ ಗೋಡೌನ್ ಆಶ್ರಯ ಪ್ಲಾಟ್’ದಲ್ಲಿರುವ ಮನೆಯೊಂದರಲ್ಲಿನ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು, ಈ ಬಗ್ಗೆ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು.

ಬಳಿಕ ಧಾರವಾಡ ಜಿಲ್ಲಾ ಎಸ್ಪಿ ಗೋಪಾಲ ಬ್ಯಾಕೋಡ, ಧಾರವಾಡ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಾರಾಯಣ ಭರಮನಿ, ಡಿವೈಎಸ್ಪಿ ವಿನೋದ್ ಮುಕ್ತೆದಾರ ಅವರ ಮಾರ್ಗದರ್ಶನದಲ್ಲಿ ಕಳ್ಳತನ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ, ಬಿ.ಎ.ಕಾಮನಬೈಲ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಗಳನ್ನು ತಡಸ ಬಳಿಯಲ್ಲಿ ಬಂಧಿಸಿ ಆರೋಪಿಗಳಿಂದ 9 ಲಕ್ಷ ಮೌಲ್ಯದ ಬಂಗಾರದ ಆಭರಣ ಹಾಗೂ 2 ಬೈಕ್ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇನ್ನೂ ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಸಚಿನ್ ಅಲಮೇಲಕರ್, ಎಎಸ್ಐ ಎನ್.ಎಮ್.ಹೊನ್ನಪ್ಪವರ, ಸಿಬ್ಬಂದಿ ಎ.ಎ.ಕಾಕರ್, ಹೆಚ್.ಬಿ.ಐಹೊಳೆ, ಹೆಚ್.ಎಲ್.ಮಲ್ಲಿಗವಾಡ, ಸಂತೋಷ ಚೌಹಾನ್, ಚನ್ನಪ್ಪ ಬಳ್ಳೊಳ್ಳಿ, ಮಹಾಂತೇಶ ಮದ್ದೀನ್, ಗಿರೀಶ್ ತಿಪ್ಪಣ್ಣವರ, ವಿಶ್ವನಾಥ ಬಡಿಗೇರ, ವಿಶ್ವ ಶಿವಬಸಣ್ಣವರ, ಶಂಭುಲಿಂಗ ಹಿರೇಮಠ, ಪ್ರೇಮ ರಾಠೋಡ, ನಾಗರಾಜ್ ಮಾಣೀಕ್ ಹಾಗೂ ತಾಂತ್ರಿಕ ಸಿಬ್ಬಂದಿ ಆರೀಫ್ ಗೊಲಂದಾಜ್, ವಿಠ್ಠಲ್ ಡೊಂಗನವರ, ಚೇತನ ಮಾಳಗಿ ಇದ್ದರು.

- Advertisement -

Latest Posts

Don't Miss