Friday, March 14, 2025

Latest Posts

ಎಪಿಎಂಸಿ ಲೈಸೆನ್ಸ್ ದಾರರಿಗೆ ಬಿಸಿ ಮುಟ್ಟಿಸಲು ಮುಂದಾದ ಸರ್ಕಾರ: ನಿರ್ಧಾರದ ವಿರುದ್ಧ ತೀವ್ರ ಆಕ್ರೋಶ

- Advertisement -

ಹುಬ್ಬಳ್ಳಿ: ಎಪಿಎಂಸಿಯಲ್ಲಿ ಲೈಸೆನ್ಸ್ ಪಡೆದು ವ್ಯಾಪಾರ ವಹಿವಾಟು ನಡೆಸದೇ ಇರುವ ಎರಡು ಸಾವಿರ ಎಪಿಎಂಸಿ ವ್ಯಾಪಾರಸ್ಥರು, ದಲ್ಲಾಳಿಗಳ ಪರವಾನಗಿಗಳನ್ನು ನಿಯಮಾನುಸಾರ ರದ್ದು ಪಡಿಸಲು ಸರ್ಕಾರ ಮುಂದಾಗಿದೆ. ಇದಕ್ಕೆ ರಾಜ್ಯಾದ್ಯಂತ ವರ್ತಕರ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 

ಹೌದು.. ಕೃಷಿ ಮಾರಾಟ ಇಲಾಖೆ ನಿರ್ದೇಶಕರು ರಾಜ್ಯದ ಎಲ್ಲಾ ಎಪಿಎಂಸಿ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮೂರು ವರ್ಷ ವ್ಯಾಪಾರ ಮಾಡದ ವರ್ತಕರ ಲೈಸೆನ್ಸ್ ರದ್ದುಗೊಳಿಸಬೇಕೆಂದು ಸೂಚನೆ ನೀಡಿದ್ದಾರೆ. ಇದು ಎಪಿಎಂಸಿಗಳಲ್ಲಿ ತಲ್ಲಣಕ್ಕೆ ಕಾರಣವಾಗಿದೆ. 2020ರಿಂದ ಎರಡು ವರ್ಷ ಕೊರೋನಾದಿಂದಾಗಿ ಯಾವುದೇ ವ್ಯಾಪಾರ ವಹಿವಾಟು ನಡೆದಿಲ್ಲ. ಅಲ್ಲದೇ ನಾನಾ ಕಾರಣಗಳಿಗೆ ವಹಿವಾಟು ಅಷ್ಟಾಗಿ ನಡೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ರಾಜ್ಯದ 2 ಸಾವಿರ ಲೈಸೆನ್ಸ್ ನೋಟಿಸ್ ನೀಡಲಾಗಿದೆ ಎಂದು ಎಪಿಎಂಸಿ ವರ್ತಕರು ತಿಳಿಸಿದ್ದಾರೆ.

ಕಳೆದ ಮೂರು ವರ್ಷ ವ್ಯಾಪಾರ ವಹಿವಾಟು ಮಾಡದೇ ಇರುವ ಕರ್ನಾಟಕ ರಾಜ್ಯದ ಮಾರ್ಕೆಟ್ ಯಾರ್ಡ್‌ನಲ್ಲಿರುವ ವ್ಯಾಪಾರಸ್ಥರಿಗೆ ಅಕ್ಟೋಬರ್ 4ರಂದು ಈ ನೋಟಿಸ್‌ ನೀಡಲಾಗಿದೆ. ಇದಕ್ಕೆ ಏಳು ದಿನದಲ್ಲಿ ಪ್ರತಿಕ್ರಿಯಿಸಲು ತಿಳಿಸಲಾಗಿದೆ. ಹಾಗೆ ನೋಡಿದರೆ ಕಳೆದ ಮೂರು ವರ್ಷ ರಾಜ್ಯದಲ್ಲಿ ವ್ಯಾಪಾರ ನಡೆಯುತ್ತಿಲ್ಲ. ಕೊರೋನಾ, ಅತಿವೃಷ್ಟಿ ಹಾಗೂ ಬರಗಾಲದ ಕಾರಣದಿಂದ ಎಲ್ಲವೂ ತಲೆಕೆಳಗಾಗಿದೆ. ಇಂತಹ ಸಂದರ್ಭದಲ್ಲಿ ವ್ಯಾಪಾರಸ್ಥರು ಕೈಕಟ್ಟಿ ಕುಳಿತಿದ್ದಾರೆ. ಹೀಗಿದ್ದಾಗ ಲೈಸೆನ್ಸ್ ರದ್ದುಗೊಳಿಸುವುದು ಎಷ್ಟು ಸರಿ ಎಂದು ವರ್ತಕರು ಪ್ರಶ್ನಿಸಿದ್ದಾರೆ.

ಈ ವರ್ಷ ಬರಗಾಲದಿಂದಾಗಿ ಎಪಿಎಂಸಿಗೆ ಕೃಷಿ ಉತ್ಪನ್ನಗಳು ಬರುತ್ತಿಲ್ಲ. ಈ ಮಧ್ಯೆ ಎಪಿಎಂಸಿ ನೂತನ ಕಾಯ್ದೆ ಪ್ರಕಾರ ಎಪಿಎಂಸಿಯಾಚೆಗೂ ವಹಿವಾಟು ನಡೆಸಬಹುದಾಗಿದೆ. ಅನೇಕ ವರ್ತಕರು ರೈತರ ಹೊಲಕ್ಕೆ ಹೋಗಿ ವ್ಯಾಪಾರ ಮಾಡಿದ್ದಾರೆ. ಹಾಗಾಗಿ ಎಪಿಎಂಸಿ ಯಾರ್ಡ್‌ನಲ್ಲಿ ವಹಿವಾಟು ಕಡಿಮೆಯಾಗಿದೆ.

ಹುಬ್ಬಳ್ಳಿ ಎಪಿಎಂಸಿ ಆವರಣದಲ್ಲಿಯೂ ಹಲವು ಸಮಸ್ಯೆಗಳಿವೆ. ನೋಟಿಸ್‌ ಹೆಸರಲ್ಲಿ ಅನಗತ್ಯವಾಗಿ ಸರ್ಕಾರ ಕಿರಿಕಿರಿ ಉಂಟು ಮಾಡಿದರೆ ವ್ಯಾಪಾರಿಗಳ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎಂದು ಹೊಸ ನಿಯಮಕ್ಕೆ ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಕೃಷಿ ಮಾರುಕಟ್ಟೆ ಸಚಿವರು ಮಧ್ಯಪ್ರವೇಶ ಮಾಡಿ ಲೈಸೆನ್ಸ್ ರದ್ದು ಸೂಚನೆ ಹಿಂಪಡೆಯಬೇಕು ಎಂದು ಬೆಂಗಳೂರಿನ ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್‌ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷ ರಮೇಶಚಂದ್ರ ಲಹೋಟಿ ಕೋರಿದ್ದಾರೆ.

ಗಣತಿಯಲ್ಲಿ ಯಾವ ಜಾತಿ ಸಮೀಕ್ಷೆ ಅನ್ನೋ ಸ್ಟಷ್ಟತೆ ಇಲ್ಲ; ಬೊಮ್ಮಾಯಿ..!

ಆಂಗ್ಲ ಭಾಷೆಯಲ್ಲಿ ಏಳು ಸಾವಿರ ವ್ಯಾಕರಣ ಬರೆದ ಗ್ರಾಮೀಣ ಪ್ರತಿಭೆ .!

‘KMF ಅಡಾ ಇಡೋ ಕಾಲ ಬಂದಿದೆ. ಖಾಸಗಿಯವರಿಗೆ ಅದನ್ನು ಕೊಡುವ ಸನ್ನಿವೇಶ ಬರ್ತಾ ಇದೆ’

- Advertisement -

Latest Posts

Don't Miss