Hubli News: ಹುಬ್ಬಳ್ಳಿ: ಶಿರಹಟ್ಟಿ ಭಾವೈಕ್ಯತೆ ಮಠದ ಫಕೀರ ದಿಂಗಾಲೇಶ್ವರ ಶ್ರೀ ಹಾಗೂ ವಿವಿಧ ಮಠಾಧೀಶರು ಇಂದು ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಮಾತನಾಡಿರುವ ದಿಂಗಾಲೇಶ್ವರ ಶ್ರೀಗಳು, ವೀರಶೈವ ಲಿಂಗಾಯತ ಒಂದೇ. ಇದಕ್ಕೆ ಪಂಚಪೀಠಾಧೀಶ್ವರರು ಬೆಂಬಲ ನೀಡಿದ್ದಾರೆ. ಸಚಿವ ಈಶ್ವರ್ ಖಂಡ್ರೆ,ಶಂಕರ್ ಬಿದರಿ ಸಹ ಬೆಂಬಲ ನೀಡಿದ್ದಾರೆ. ವೀರಶೈವ ಲಿಂಗಾಯತ ತುಂಡಾಗಬಾರದು ಎಂದಿದ್ದಾರೆ.
ಈ ತಿಂಗಳ11 ರಂದು ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಯಿಂದ ಮಹತ್ವ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಹುಬ್ಬಳ್ಳಿಯಲ್ಲಿ 19 ರಂದು ನಡೆಯುವ ಲಿಂಗಾಯತ ಏಕತಾ ಸಮಾವೇಶಕ್ಕೆ ಸ್ವಯಂ ಪ್ರೇರಿತವಾಗಿ ಮಠಾಧೀಶರು, ಭಕ್ತರು, ಚುನಾಯಿತ ಪ್ರತಿನಿಧಿಗಳು ಭಾಗವಹಿಸಬೇಕು. ಇದು ಯಾವುದೇ ಮಠ, ಪೀಠ, ವಯಕ್ತಿಕ ಕಾರ್ಯಕ್ರಮ ಅಲ್ಲಾ. ಹತಾಶೆಯಿಂದ ಬಸವ ಸಂಸ್ಕೃತಿ ಯಾತ್ರೆ ಮಾಡಲಾಗಿದೆ. ಹೆಸರು ಬಸವ ಸಂಸ್ಕೃತಿ ಆದರೆ ಬಸವಣ್ಣ ಸಿದ್ಧಾಂತಗಳಿಗೆ ವಿರುದ್ಧವಾಗಿದೆ ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.
ವೀರಶೈವ ಲಿಂಗಾಯತ ಮಹಾಸಭಾ ಅಡಿಯಲ್ಲಿ ಸೆಪ್ಟೆಂಬರ್ 11 ರಂದು ಸಭೆ ನಡೆಯಲಿದೆ. ಬೆಂಗಳೂರಿನ ಅಖಿಲ ಭಾರತ ವೀರಶೈವ ಮಹಾಸಭೆಯ ಕಚೇರಿಯಲ್ಲಿ ಸಭೆಯ ಪದಾಧಿಕಾರಿಗಳ ಜೊತೆ ಈ ಸಭೆ ನಡೆಯುತ್ತದೆ. ಜಾತಿ ಗಣತಿ ವಿಚಾರವಾಗಿ ಚರ್ಚೆಯಾಗಲಿದೆ ಎಂದು ಶ್ರೀಗಳು ಹೇಳಿದ್ದಾರೆ.
ಹುಬ್ಬಳ್ಳಿ ಯ ನೆಹರು ಮೈದಾನದಲ್ಲಿ ಸೆಪ್ಟೆಂಬರ್ 19 ರಂದು ವೀರಶೈವ ಲಿಂಗಾಯತ ಏಕತಾ ಸಮಾವೇಶ ನಡೆಯಲಿದ್ದು, ವೀರಶೈವ ಲಿಂಗಾಯತ ಅನ್ನೋ ಹೋರಾಟಕ್ಕೆ ಪಂಚಪೀಠಾದೀಶ್ವರರು ಬೆಂಬಲ ಸೂಚಿಸಿದ್ದಾರೆ. ಬಸವ ಸಂಸ್ಕ್ರತಿ ಉತ್ಸವದಲ್ಲಿ ಸಮಾಜ ಒಡೆಯೋ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಬಸವಣ್ಣನವರ ಸಿದ್ದಂತಾಕ್ಕೆ ವಿರುದ್ದವಾಗಿ ನಡೆಯುತ್ತಿದ್ದಾರೆ. ಅಖಂಡ ಸಮಾಜ ನಾಶ ಮಾಡಬೇಕು ಅನ್ನೋ ದುರುದ್ದೇಶ ಹೊಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದಾಗ ಮಾತ್ರ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ತೀವ್ರವಾಗುತ್ತದೆ ಎಂದು ಶ್ರೀಗಳು ಹೇಳಿದ್ದಾರೆ.
ಈಗಾಗಲೇ ಸಮಾಜ ಅಸ್ಥೀರವಾಗಿದೆ. ಇನ್ನು ಸಮಾಜವನ್ನು ಅಸ್ಥೀರ ಮಾಡಲು ಕೆಲವರು ಹೊರಟಿದ್ದಾರೆ. ಎಸ್ಸಿ, ಎಸ್ಟಿ ಸಮಾಜದ ಸ್ವಾಮಿಗಳು ಲಿಂಗಾಯತ ಅಂತ ಬರೆಸಿ ಅಂತ ಹೇಳ್ತಿದ್ದಾರೆ. ಹಾಗಾದ್ರೆ ನಿಮ್ಮ ಸಮಾಜದ ಜನರಿಗೆ ಲಿಂಗಾಯತ ಅಂತ ಬರೆಸಿ ಅಂತ ಹೇಳ್ತಿರಾ? ನಮ್ಮ ಸಮಾಜದ ಸಭೆಗಳಲ್ಲಿ ಬಂದು ಯಾಕೆ ನಮ್ಮ ಜನರ ದಾರಿ ತಪ್ಪಿಸೋ ಕೆಲಸ ಮಾಡುತ್ತಿದ್ದೀರಿ? ಮಠಗಳನ್ನು ಬಿಟ್ಟು ಬರಿ ಬಸವಾಧಿ ಶರಣರಂತೆ ನಡೆಯಲಿ. ಪ್ರತ್ಯೇಕ ಲಿಂಗಾಯತ ಧರ್ಮದ ಪರವಾಗಿ ಇರೋ ಸ್ವಾಮೀಜಿಗಳು ನಡೆಯಲಿ ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.




