Wednesday, April 16, 2025

Latest Posts

Police-ಯುವಕನನ್ನು ಬೆತ್ತಲೆ ಮಾಡಿದ ರೌಡಿಶೀಟರಗಳು

- Advertisement -

ಹುಬ್ಬಳ್ಳಿ:ಅವಳಿ ಜಿಲ್ಲೆಗಳಾದ  ಹುಬ್ಬಳ್ಳಿ ಧಾರವಾಡ ನಗರಗಳಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಕೆಲವು ರೌಡಿ ಶೀಟರ್ ಗಳು ಯುವಕನೊಬ್ಬನ್ನನ್ನು ಬೆತ್ತಲೆ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇದರ ಕುರಿತು ಪೋಲಿಸರು ಯಾವುದೇ ರೀತಿಯ ದೂರನ್ನು ದಾಖಲಿಸಿಕೊಂಡಿಲ್ಲ.

ಬೆಂಡಗೇರೆಯಲ್ಲಿ ಈ ಘಟನೆ ನಡೆದಿದ್ದು ಪೊಲೀಸರಿಗೆ ಈ ಪ್ರಕರಣ ದೊಡ್ಡ ತಲೆನೋವಾಗಿದೆ. ಬೆತ್ತಲೆ ಮಾಡಿರುವ ವಿಡಿಯೋ ಪೊಲೀಸರ ಕೈಗೆ ಸಿಕ್ಕರೂ ಇದರುವರೆಗೆ ದೂರನ್ನ ದಾಖಲಿಸದೆ ಆರೋಪಿಗಳ ರಕ್ಷಣೆಗೆ ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡುತಿದ್ದಾರೆ.

ಆರೋಪಿಗಳು ರೌಡಿಶೀಟರ್ ಗಳಾಗಿದ್ದು ರಾಜಕೀಯ ನಾಯಕರು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಪೋಲಿಸರು ಯಾವ ಕಾರಣಕ್ಕಾಗಿ ಆರೋಪಿಗಳನ್ನು ರಕ್ಷಣೆ ಮಾಡುತಿದ್ದಾರೆ. ಈ ಪ್ರಕರಣದ ವಿರುದ್ದ ಪೊಲೀಸರು ಬಾಯಿ ಯಬಿಚ್ಚದೆ ಮೌನ ವಹಿಸುತಿದ್ದಾರೆ.  ಈ ರೀತಿ ಮಾಡುತ್ತಿರುವ ಪೊಲೀಸರಿಗೆ ಯಾವ ಶಿಕ್ಷೆ ನೀಡಬೇಕು

 

ಒಂದೆಡೆ ಘಟನೆ ನಡೆದು ಮೂರ್ನಾಲ್ಕು ತಿಂಗಳು ಕಳೆದರೂ ಘಟನೆ ಬಗ್ಗೆ ತುಟಿಕ್ ಪಿಟಕ್ ಎನ್ನದ ಪೊಲೀಸರಿಗೆ ವಿಷಯವೇ ಗೊತ್ತಿರಲಿಲ್ಲವೇ.ಬೆಂಡಿಗೇರಿ ಪೊಲೀಸರಿಗೆ ಬೆತ್ತಲೆ ವಿಡಿಯೋ ಲಭ್ಯವಾದ್ರೂ ಪ್ರಕರಣವನ್ನೇ ಮುಚ್ಚಿ ಹಾಕಿದ್ರಾ..?ನಾಲ್ಕು ತಿಂಗಳ ಹಿಂದೆ ನಡೆದ ಪ್ರಕರಣವನ್ನ ಪೊಲೀಸರು ಏಕೆ ಮುಚ್ಚಿಟ್ಟರು ಎಂ ಹಲವಾರ ಅನುಮಾನಗಳು ಕಾಡುತ್ತಿವೆ.

ಆರೋಪಿಗಳಿಗೆ ರಕ್ಷಣೆ ನೀಡಿದ ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳುವವರು ಯಾರು..?ಪೊಲೀಸ್ ಆಯುಕ್ತರೇ ಆರೋಪಿಗಳಿಗೆ ಕುಮ್ಮಕ್ಕು ನೀಡಿದ ಪೊಲೀಸ್‌ರ ಮೇಲೆ ಕ್ರಮ ತೆಗೆದುಕೊಳ್ಳಿ ಎನ್ನುತ್ತಿದ್ದಾರೆ ಹುಬ್ಬಳ್ಳಿಯ ಜನ್ರು.ಇನ್ನೊಂದೆಡೆ ರಾಜಕೀಯ ನಾಯಕರ ಒತ್ತಡಕ್ಕೆ ಮಣಿಯುತ್ತಿರೋ ಪೊಲೀಸರು.

ಈಗಾಗಲೇ ಬೆತ್ತಲೆ ಪ್ರಕರಣದಲ್ಲಿ ಆರು ಜನರನ್ನ ಬಂಧಿಸಿರೋ ಬೆಂಡಿಗೇರಿ ಪೊಲೀಸರು . ಆರೂ ಜನ ಆರೋಪಿಗಳನ್ನ ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆಗೊಳಪಡಿಸುತ್ತಿದ್ದಂತೆಯೇ ಆರೋಪಿಗಳ ರಕ್ಷಣೆಗೆ ಸ್ಥಳೀಯ ಜನಪ್ರತಿನಿಧಿಗಳಿಂದ ಒತ್ತಡ  ಶುರುವಾಗಿದೆ .ಆರೋಪಿಗಳೆಲ್ಲರೂ ರೌಡಿಶೀಟರ್ ಹಿನ್ನೆಲೆ ಇರೋದ್ರಿಂದ ರಾಜಕೀಯ ನಾಯಕರಿಂದ ಒತ್ತಡ ಬರುತ್ತಿದೆ..ರಾಜಕೀಯ ಸ್ವರೂಪ ಪಡೆದುಕೊಂಡ ಯುವಕನ ಬೆತ್ತಲೆ ಪ್ರಕರಣ.

China Story : ಶಿಶು ವಿಹಾರದಲ್ಲಿ ಚೂರಿ ಇರಿತ…?!

GruhaLaxmi-ಕಾಂಗ್ರೆಸ್ ಗ್ಯಾರಂಟಿ ಅರ್ಜಿ ನಕಲಿ ಮಾಡಿ ಮಾರಾಟ

Tomato : ಟೊಮ್ಯಾಟೋ ಬೆಲೆ ಏರಿಕೆ ರಹಸ್ಯ ಬಿಚ್ಚಿಟ್ಟ ರೈತರು

- Advertisement -

Latest Posts

Don't Miss