- Advertisement -
ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೋರ್ವನ ಮೇಲೆ ಇಬ್ಬರೂ ಮನಬಂದಂತೆ ಹಲ್ಲೆ ಮಾಡಿ ಅವಾಚ್ಯವಾಗಿ ನಿಂದಿಸಿದ ಘಟನೆ ನಗರದ ರೈಲ್ವೆ ವರ್ಕ್ ಶಾಪ್ ನಲ್ಲಿ ನಡೆದಿದೆ.
ರೈಲ್ವೆ ವರ್ಕ್ ಶಾಪ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಡಿ.ಬುಜ್ಜಿಗನ್ನಾ ಎಂಬಾತನ ಮೇಲೆ ಅದೇ ವರ್ಕ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ನರೇಂದ್ರ ಜಾದವ್ ಹಾಗೂ ಮಂಜುನಾಥ ನಾಲ್ವಾಡ ಎಂಬ ಇಬ್ಬರು ಸಿಬ್ಬಂದಿಗಳು ಕ್ಷುಲ್ಲಕ ಕಾರಣಕ್ಕಾಗಿ ರೈಲ್ವೆ ವರ್ಕ ಶಾಪ್ ನಲ್ಲಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಈ ಘಟನೆ ಸಪ್ಟಂಬರ್ 20ರಂದು ನಡೆದಿದ್ದು ಕರ್ತವ್ಯ ನಿರ್ವಹಿಸಿ ಮರಳಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬುಜ್ಜಿಗನ್ನ ಎಂಬಾತನ ಮೇಲೆ ಆ ಇಬ್ಬರು ಮನ ಬಂದಂತೆ ಹಲ್ಲೆ ಮಾಡಿ ಹಾಗೂ ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ. ಈ ಕುರಿತಂತೆ ಕೇಶವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಷ್ಟೇ ಅಲ್ಲದೆ ಆರೋಪಿಗಳನ್ನ ಕೇಶವಪುರ ಪೊಲೀಸರು ಇನ್ನುವರೆಗೂ ಕರೆಸಿ ವಿಚಾರಣೆ ಕೂಡ ಮಾಡಿಲ್ಲವಂತೆ. ಜೀವ ಬೆದರಿಕೆ ಕೂಡ ಹಾಕಿದ್ದಾರೆಂದು ಹಲ್ಲೆಗೊಳಗಾದ ವ್ಯಕ್ತಿ ಆರೋಪಿಸುತ್ತಿದ್ದಾರೆ.
Shakthi yojane century; ಶಕ್ತಿ ಯೋಜನೆಯ ಶತದಿನದ ಸಂಭ್ರಮ ಹಂಚಿಕೊಂಡ ಸಿಎಂ..!
ಪ್ರಚೋದನಕಾರಿ ಹೇಳಿಕೆ ನೀಡಿದ ಹಿನ್ನೆಲೆ ಮುತಾಲಿಕ್ ವಿರುದ್ದ ದೂರು ದಾಖಲು..!
- Advertisement -