Sunday, December 22, 2024

Latest Posts

Hubli ಬಿಜೆಪಿ 9 ವರ್ಷಗಳಿಂದ ಸುಳ್ಳು ಹೇಳ್ತಾ ಬಂದಿದೆ…! ಸಲೀಂ ಅಹ್ಮದ್ ಹೇಳಿಕೆ‌.

- Advertisement -

ಹುಬ್ಬಳ್ಳಿ: ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪನ್ನ ಸ್ವಾಗತ ಮಾಡುತ್ತೆವೆ. ಬಿಜೆಪಿಗೆ ದೊಡ್ಡ ಮುಖಭಂಗ ಆಗಿದೆ. ಇದು ಸಂವಿಧಾನಕ್ಕೆ ಜಯವಾಗಿದೆ. ಕಾನೂನಿನ ಮೇಲೆ ನಮಗೆ ವಿಶ್ವಾಸ ಇತ್ತು, ಇವತ್ತು ನಮಗೆ ಜಯ ಸಿಕ್ಕಿದೆ. ರಾಹುಲ್ ಗಾಂಧಿಗೆ ಜನಪ್ರಿಯತೆ ಹೆಚ್ಚಿಗೆ ಆಗ್ತಾ ಇತ್ತು, ಆದ್ದರಿಂದ ಬಿಜೆಪಿ ಇಂತಹ ಷಡ್ಯಂತ್ರ ಮಾಡಿದೆ.ದೆಹಲಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಲೋಕಸಭಾ ರಣತಂತ್ರದ ಬಗ್ಗೆ ಚರ್ಚೆ ಆಗಿದೆ. ರಾಜ್ಯದಲ್ಲಿ 20 ಕ್ಷೇತ್ರದಲ್ಲಿ ಗೆಲ್ಲಬೇಕೆಂದು ಕಾಂಗ್ರೆಸ್ ಹೈಕಮಾಂಡ ನಮಗೆ ಟಾರ್ಗೆಟ್ ನೀಡಿದೆ.ನಾವು 20 ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆಲ್ಲುತ್ತೆವೆ.

ಬಿಜೆಪಿ 9 ವರ್ಷಗಳ ಸುಳ್ಳು ಹೇಳ್ತಾ ಬಂದಿದೆ.ಆ ಸುಳ್ಳು ಜನರಿಗೆ ಮನವರಿಕೆ ಮಾಡುವ ಕೆಲಸವನ್ನ ಮಾಡುತ್ತೆವೆ.ಯುವಕರಿಗೆ ಇಂದ್ರ ಚಂದ್ರ ತೋರಿಸಿದೆ,ಬಿಜೆಪಿ ಪ್ರಣಾಳಿಕೆ ಪ್ರಕಾರ 18 ಕೋಟಿ ಯುವಕರಿಗೆ ಉದ್ಯೋಗ ಸೀಗಬೇಕಿತ್ತು.18 ಲಕ್ಷ ಯುವಕರಿಗೆ ಉದ್ಯೋಗ ಸಿಕ್ಕಿಲ್ಲ.ನಮ್ಮ‌ ಪಕ್ಷ ರಾಜ್ಯದಲ್ಲಿ ಕೊಟ್ಟ ಮಾತನ್ನ ಉಳಿಸಿಕೊಳ್ಳಬೇಕಿದೆ.ಸುಳ್ಳಿಗೆ ಆಸ್ಕರ್ ಅವಾರ್ಡ್ ಕೊಡುವದಾದ್ರೆ ನರೇಂದ್ರ ಮೋದಿಯವರಿಗೆ ಕೊಡಬೇಕು.

ಯುವನಿಧಿಯನ್ನ ಡಿಸೆಂಬರ್‌ನಲ್ಲಿ ಕಾರ್ಯರೂಪಕ್ಕೆ ತರುತ್ತೆವೆ.ರಾಷ್ಟ್ರೀಯ ಪಕ್ಷಕ್ಕೆ ವಿರೋಧ ಪಕ್ಷದ ನಾಯಕನನ್ನ ಮಾಡಲು ಆಗಿಲ್ಲ.ಸದನದ ಸಮಯವನ್ನು ಹಾಳು ಮಾಡುವಂತ ಕೆಲಸ ಮಾಡಿದ್ದಾರೆ.ಜನರಿಗೆ ದಾರಿ ತಪ್ಪಿಸುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ.ರಾಹುಲ್ ಗಾಂಧಿ ದೇಶದ ಪ್ರಧಾನಿ ಆಗುತ್ತಾರೆ.ಬಿಜೆಪಿ ಏನೇ ಮಾಡಿದ್ರು ಇಂಡಿಯಾ ಅಧಿಕಾರಕ್ಕೆ ಬರುತ್ತದೆ.ಪಕ್ಷದ ಸಿದ್ದಾಂತಗಳ ಮೇಲೆ ಟಿಕೆಟ್ ಹಂಚಿಕೆ ಮಾಡುತ್ತೆವೆ.

ಈಗಾಗಲೇ ಪ್ರತಿಯೊಂದು ಲೋಕಸಭಾ ಕ್ಷೇತ್ರಕ್ಕೆ ಓರ್ವ ಸಚಿವ ಮತ್ತು ಹಿರಿಯರನ್ನ ನೇಮಕ ಮಾಡಲಾಗುತ್ತದೆ.ಅವರ ಮುಖಾಂತರ ವರದಿ ತರಿಸಿಕೊಂಡು ಟಿಕೆಟ್ ನೀಡಲಾಗುತ್ತದೆ.ಪಕ್ಷ ತೀರ್ಮಾನ ಮಾಡಿದ್ರೆ ನಾನೂ ಹಾವೇರಿಯಿಂದ ಸ್ಪರ್ಧೆ ಮಾಡುವೆ‌.ಐದು ತಿಂಗಳ ಮುಂಚೆಯೇ ಅಭ್ಯರ್ಥಿಗಳ ಘೋಷಣೆ ಮಾಡುತ್ತೆವೆ.ಹೆಚ್ಚಿನದಾಗಿ ಯುವಕರಿಗೆ ಮತ್ತು ಮಹಿಳೆಯರಿಗೆ ಟಿಕೆಟ್ ನೀಡಲಾಗುತ್ತದೆ.ನಿಗಮ‌ ಮಂಡಳಿಗಳ ನೇಮಕಾತಿ ಪ್ರಕ್ರಿಯೆ ಆರಂಭ ಆಗಿದೆ.ಜಿಲ್ಲಾವಾರು ಮಾಹಿತಿ ತರಿಸಿಕೊಂಡು ನೇಮಕ ಮಾಡಲಾಗುತ್ತದೆ.ಜಗದೀಶ್ ಶೆಟ್ಟರ್ ಪಕ್ಷಕ್ಕೆ ಬಂದಿದ್ದರಿಂದ ನಮಗೆ ಶಕ್ತಿ ಬಂದಿದೆ.ಉಡುಪಿ ಗಲಾಟೆ ಬಗ್ಗೆ ತನಿಖೆ ನಡೆಯುತ್ತಿದೆ, ಇಂತಹ ಸಮಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ.ಹುಬ್ಬಳ್ಳಿಯಲ್ಲೂ ಅಂತಹ ಘಟನೆ ನಡೆದಿದೆ, ಸೂಕ್ತ ತನಿಖೆ ನಡೆಸಬೇಕೆಂದು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ.ಕುಮಾರಸ್ವಾಮಿ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ.ಸದನದಲ್ಲಿ ಅವರಿಗೆ ಅವಕಾಶ ಇತ್ತು, ಏಕೆ ದಾಖಲೆ ಬಿಡುಗಡೆ ಮಾಡಲಿಲ್ಲ.ಕುಮಾರಸ್ವಾಮಿ ಹಿಟ್ ಆಂಡ್ ರನ್ ಮಾಡಿದ್ದಾರೆ.ಬಿಜೆಪಿಗೆ ನಾಯಕತ್ವದ ಕೊರತೆ ಇದೆ.ವಿಧಾನ ಪರಿಷತ್ ಮತ್ತು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನನ್ನ ಮಾಡಲು ಆಗಿಲ್ಲ‌.

Shivaraj Tangadagi: ಆರಗ‌ ಜ್ಞಾನೇಂದ್ರರನ್ನು ಜೈಲಿಗಟ್ಟಬೇಕು…!

Janaspandana yatre: ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ “ಜನಸ್ಪಂದನ ಕಾರ್ಯಕ್ರಮ”:

Laxmi hebbalkar ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

- Advertisement -

Latest Posts

Don't Miss