- Advertisement -
ಮಂಡ್ಯ: ಮಂಡ್ಯದಲ್ಲಿ ಹುಚ್ಚಾ ವೆಂಕಟ್ ಪುಂಡಾಟ ಮುಂದುವರೆದಿದ್ದು, ಹುಚ್ಚಾ ವೆಂಕಟ್ ಕಿರಿಕಿರಿಗೆ ಬೇಸತ್ತು, ಯುವಕರು ಆತನನ್ನು ಕಾಲಿನಡಿ ಹಾಕಿ ತುಳಿದಿದ್ದಾರೆ.
ಮಂಡ್ಯ ತಾಲೂಕಿನ ಮೈ-ಬೆಂ ಹೆದ್ದಾರಿ ಸಮೀಪದ ಹುಮ್ಮಡಹಳ್ಳಿ ಬಳಿ ಈ ಘಟನೆ ನಡೆದಿದ್ದು, ಮಾತನಾಡಿಸಲು ಬಂದ ಯುವಕರ ಮೇಲೆ ಹುಚ್ಚಾವೆಂಕಟ್ ಹಲ್ಲೆಗೆ ಯತ್ನಿಸಿದ್ದಾರೆ.

ಹೀಯಾಳಿಸಿ ಹಲ್ಲೆಗೆ ಯತ್ನಿಸುತ್ತಿದ್ದಂತೆ ಯುವಕರು ಹಿಗ್ಗಾಮುಗ್ಗಾ ಗೂಸಾ ನೀಡಿದ್ದಾರೆ. ನೆಲಕ್ಕುರುಳಿಸಿ ಹೊಡೆದಿದ್ದಾರೆ. ಬಳಿಕ ಸ್ಥಳದಲ್ಲಿ ಜನರು ಯುವಕರಿಂದ ಹುಚ್ಚಾ ವೆಂಕಟ್‌ನನ್ನು ಬಿಡಿಸಿ ಸಮಾಧಾನ ಮಾಡಿದ್ದಾರೆ. ನಂತರ ಹುಚ್ಚ ವೆಂಕಟ್ ಬೆಂಗಳೂರಿನತ್ತ ತೆರಳಿದ್ದಾರೆ.
- Advertisement -