Sunday, September 8, 2024

Latest Posts

ಆಂಧ್ರದಲ್ಲಿ ಕತ್ತೆ ಮಾಂಸಕ್ಕೆ ಭಾರಿ ಬೇಡಿಕೆ

- Advertisement -

ಸಾಮಾನ್ಯವಾಗಿ ನಾವು ಕೋಳಿ, ಮೇಕೆ, ಕುರಿ ಮತ್ತು ಹಂದಿಯ ಮಾಂಸವನ್ನು ತಿನ್ನುತ್ತೇವೆ. ಆದರೆ ಇಲ್ಲೊಂದು ರಾಜ್ಯದಲ್ಲಿ ‘ಕತ್ತೆ ಮಾಂಸ’ ಹೆಚ್ಚು ಜನ ಪ್ರಿಯವಾಗಿದೆ.

ಹೌದು ಇದು ವಿಚಿತ್ರವೆನಿಸಿದರೂ ನಿಜ. ಬುದ್ದಿ ಶಕ್ತಿ ಹೆಚ್ಚುತ್ತದೆ ಎಂಬ ಕಾರಣಕ್ಕೆ ಚಿಕ್ಕ ಮಕ್ಕಳಿಗೆ ಕತ್ತೆ ಹಾಲು ಕುಡಿಸಲಾಗುತ್ತದೆ. ಹಾಗೆಯೇ, ಕತ್ತೆ ಮಾಂಸ ತಿಂದರೆ ಬಲ ಹೆಚ್ಚುತ್ತದೆ ಹಾಗೂ ಪುರುಷತ್ವ ವೃದ್ಧಿಸುತ್ತದೆ ಎಂಬ ನಂಬಿಕೆಯಿಂದ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ, ಕೃಷ್ಣ, ಪ್ರಕಾಶಂ ಮತ್ತು ಗುಂಟೂರು ಜಿಲ್ಲೆಗಳಲ್ಲಿ ಸಾವಿರಾರು ರೂಪಾಯಿ ಕೊಟ್ಟು ಕತ್ತೆ ಮಾಂಸ ಖರೀದಿಸಿ ತಿನ್ನುತ್ತಿದ್ದರೆ ಎಂಬ ಸುದ್ದಿಯನ್ನು ಸರ್ಕಾರೇತರ ಸಂಸ್ಥೆಯೊಂದು ತಿಳಿಸಿದೆ.

ಕತ್ತೆ ಸಾಗಣೆ ಮತ್ತು ಮಾಂಸ ಸಾಗಣೆಯ ದೊಡ್ಡ ಕ್ರಿಮಿನಲ್ ಜಾಲವಿದ್ದು, ರಾಜಸ್ಥಾನ, ಉತ್ತರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕಗಳಿಂದ ಸಾವಿರಾರು ಕತ್ತೆಗಳು ನಾಪತ್ತೆಯಾಗಿ, ಕಸಾಯಿಖಾನೆ ಸೇರುತ್ತಿವೆ. ಅದೇ ರೀತಿ ಗ್ರಾಹಕರ ಜಾಲವು ದೊಡ್ಡದಿದೆ.

ಒಂದು ಕತ್ತೆಗೆ 10 ಸಾವಿರದಿಂದ 15 ಸಾವಿರದ ವರೆಗೂ ಬೆಲೆ ಇದ್ದು, ಕೆಜಿ ಮಾಂಸ 1 ಸಾವಿರದಿಂದ 1200 ರೂಪಾಯಿವರೆಗೂ ಮಾರಾಟವಾಗುತ್ತಿದೆ. ಈ ದಂಧೆ ಶುರುವಾದ ನಂತರ 2012 ರಿಂದೀಚೆಗೆ ಕತ್ತೆಗಳ ಸಂಖ್ಯೆಯಲ್ಲಿ ಶೇಕಡಾ 60 ರಷ್ಟು ಇಳಿಕೆಯಾಗಿದೆ.

2011 ರ ಆಹಾರ ಸುರಕ್ಷತೆ ಮತ್ತು ಮಾನದಂಡ ನಿಯಮದ ಪ್ರಕಾರ ಇಂತಹ ಪ್ರಾಣಿಯನ್ನು ಹತ್ಯೆ ಮಾಡುವುದು ಮತ್ತು ಮಾಂಸ ತಿನ್ನುವುದು ಕಾನೂನು ಬಾಹಿರ ಆದ್ದರಿಂದ ಈ ಸಂಬಂಧ ಅನಿಮಲ್ ರೇಸ್ಕ್ಯೂ ಆರ್ಗ್ ಎಂಬ ಸರ್ಕಾರೇತರ ಸಂಸ್ಥೆ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ದೂರು ದಾಖಲಿಸಿದೆ.

- Advertisement -

Latest Posts

Don't Miss