Saturday, July 12, 2025

Latest Posts

ಮಾನವೀಯತೆ ಮೆರೆದ ಕೇಂದ್ರ ಸಚಿವ ಜೋಶಿ: ಗಾಯಗೊಂಡ ಬೈಕ್ ಸವಾರನಿಗೆ ನೆರವು

- Advertisement -

Hubli News: ಹುಬ್ಬಳ್ಳಿ: ನಗರದ ಕುಮಾರ್ ಪಾರ್ಕ್ ಬಳಿ ನಿನ್ನೆ ರಾತ್ರಿ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ರಸ್ತೆ ಮಧ್ಯದಲ್ಲೇ ಬಿದ್ದು ಗಾಯಗೊಂಡು ನರಳಾಡುತ್ತಿದ್ದ ದೃಶ್ಯವನ್ನು ದೆಹಲಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಗಮನಿಸಿ ತಕ್ಷಣ ತಮ್ಮ ವಾಹನದಿಂದ ಕೆಳಗಿಳಿದು ಗಾಯಾಳುವನ್ನು ತಮ್ಮ ಬೆಂಗಾವಲು ವಾಹನದಲ್ಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲು ನೆರವಾಗಿ ಮಾನವೀಯತೆ ಮೆರೆದರು.

ಸ್ವತಃ ಸಚಿವ ಜೋಶಿಯವರೇ ಗಾಯಾಳುಗಳನ್ನು ಅಪಘಾತದ ಸ್ಥಳದಿಂದ ಮೇಲೆತ್ತಲು ಕೈಜೋಡಿಸಿದ್ದಲ್ಲದೆ, ಗಾಯಾಳುವಿಗೆ ಧೈರ್ಯ ತುಂಬುವ ಕೆಲಸ ಸಹ ಮಾಡಿದರು. ಬಳಿಕ ಗಾಯಾಳುವಿಗೆ ಯಾವುದೇ ಸಮಸ್ಯೆ ಆಗದಂತೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಕೀಯ ಸಿಬ್ಬಂದಿಗೆ ಸೂಚನೆ ನೀಡಿದರು.
ಸ್ಥಳದಲ್ಲಿದ್ದ ಜನರು ಸಚಿವರ ಸಮಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.

- Advertisement -

Latest Posts

Don't Miss