Saturday, November 23, 2024

Latest Posts

Humanities Department : ರಸ್ತೆ ಅಪಘಾತದಲ್ಲಿ ಹೆಚ್ಚಾಗಿ ಸಾವನ್ನಪ್ಪಿದವರು – ದ್ವಿಚಕ್ರ ವಾಹನ ಸವಾರರು..?!

- Advertisement -

Kasaragod News : “ರಸ್ತೆ ಅಪಘಾತದಲ್ಲಿ ಹೆಚ್ಚಾಗಿ ಸಾವನ್ನಪ್ಪಿದವರು ಬೈಕ್ ಸವಾರರು ,ಅತೀ ಹೆಚ್ಚಾಗಿ ಅಪಘಾತ ಸಂಭವಿಸುವ ಸಮಯ ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ”  ಎಂದು ‘ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹೈಯರ್ ಸೆಕೆಂಡರಿ ಶಾಲೆ,ಧರ್ಮತಡ್ಕ’ದ ಮಾನವಿಕ ವಿಭಾಗದ ವಿದ್ಯಾರ್ಥಿಗಳು ನಡೆಸಿದ ಸಮೀಕ್ಷೆಯಲ್ಲಿ ಈ ಅಭಿಪ್ರಾಯ ಮೂಡಿಬಂದಿದೆ.

ಶಾಲಾ ಪ್ರಾಂಶುಪಾಲರಾದ ಶ್ರೀ ರಾಮಚಂದ್ರ ಭಟ್ ಇವರ ಮೇಲ್ನೋಟದಲ್ಲಿ , ಸ್ಟಾಟಿಸ್ಟಿಕ್ಸ್ ಅಧ್ಯಾಪಕ ಉಣ್ಣಿಕೃಷ್ಣನ್ ಇವರ ನೇತೃತ್ವದಲ್ಲಿ ವಿದ್ಯಾರ್ಥಿಗಳು 2021-22ನೇ ವರ್ಷದಲ್ಲಿ ಕುಂಬಳೆ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ ಸಮೀಕ್ಷೆಯಾಗಿದೆ.

ಕುಂಬಳೆ ಪೊಲೀಸ್ ಠಾಣೆಯಿಂದ ವಿಷಯವನ್ನು ಸಂಗ್ರಹಿಸಿದ್ದು, ಅಪಘಾತದಲ್ಲಿ 9 ಜನರು ಮರಣವನ್ನಪ್ಪಿದ್ದು ಇದರಲ್ಲಿ 6 ಜನ ಬೈಕ್ ಸವಾರರಾಗಿದ್ದಾರೆ.2021ರಲ್ಲಿ 48 ಹಾಗೂ 2022ರಲ್ಲಿ 62 ಜನ ಗಾಯಗೊಂಡಿದ್ದಾರೆ.ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚು ಬೈಕ್ ಅಪಘಾತವಾಗಿದೆಯೆಂದು ಸಮೀಕ್ಷೆಯಿಂದ ತಿಳಿಯಲಾಗಿದೆ.

ಧರ್ಮತಡ್ಕ ಶಾಲಾ ವಿದ್ಯಾರ್ಥಿಗಳು ಕುಂಬಳೆ ಠಾಣಾ ಸಬ್ ಇನ್ಸ್ಪೆಕ್ಟರ್ ” ರಜಿತ್” ಇವರಿಗೆ ಅಧ್ಯಯನದ ದಾಖಲೆಯನ್ನು ನೀಡಿದರು. ಶಾಲಾ ವ್ಯವಸ್ಥಾಪಕರಾದ ಶ್ರೀ ಶಂಕರ ನಾರಾಯಣ ಭಟ್,ರಾಷ್ಟ್ರೀಯ ಸೇವಾ ಯೋಜನೆಯ ಧರ್ಮತಡ್ಕ ಶಾಲೆಯ ಸ0ಯೋಜನಾಧಿಕಾರಿ ಶ್ರೀ ಜಗದೀಶನ್ ಪಿ.ವಿ, ಸ್ಟಾಫ್ ಸೆಕ್ರೆಟರಿ ಸತೀಶ್ ಕುಮಾರ್ ಶೆಟ್ಟಿ ಹಾಗೂ ಅಧ್ಯಾಪಕ-ಅಧ್ಯಾಪಿಕೆಯರು ಈ ಸಮೀಕ್ಷೆಗೆ ಸಹಕರಿಸಿದರು.

Bjp : ಮಂಡ್ಯ : ಸರ್ಕಾರದ ವಿರುದ್ಧ ಬಿಜೆಪಿಗರ ಆಹೋರಾತ್ರಿ ಧರಣಿ ಸತ್ಯಾಗ್ರಹ

Madhu Bangarappa: ಹೊಸದಾಗಿ ಅನಧಿಕೃತ ಶಾಲೆಗಳು ಕಂಡುಬಂದಲ್ಲಿ ಅಧಿಕಾರಿಗಳೆ ಹೊಣೆ :

Jewellary exmination: ಹುಬ್ಬಳ್ಳಿಯಲ್ಲಿ ಆಭರಣ ಪ್ರದರ್ಶನ ಮತ್ತು ಮಾರಾಟ

- Advertisement -

Latest Posts

Don't Miss