Sunday, September 8, 2024

Latest Posts

ಹುಣಸೂರಿನ ಹುಲಿ ಯಾರು..?

- Advertisement -

ಹುಣಸೂರಿನಲ್ಲಿ ವಿಶ್ವನಾಥ್ ವಿಜಯ ಪತಾಕೆ ಹಾರಿಸ್ತಾರಾ..? ಕಾಂಗ್ರೆಸ್ಸಿನ ಮಂಜುನಾಥ್ ಮರಳಿ ಕ್ಷೇತ್ರ ಕೈ ವಶ ಮಾಡಿಕೊಳ್ತಾರಾ..? ತನ್ನ ಸ್ಥಾನವನ್ನ ಉಳಿಸಿಕೊಳ್ಳುತ್ತಾ ಕುಮಾರಸ್ವಾಮಿ ಪಕ್ಷ..? ಹುಣಸೂರಿನ ಹುಲಿ ಯಾರು..? ಕ್ಷೇತ್ರದ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ..

ಮೈಸೂರಿನಲ್ಲಿ ಈ ಹಿಂದೆ ಬೈ ಎಲೆಕ್ಷನ್ ಬೃಹತ್ ಕಾಳಗಕ್ಕೆ ಸಾಕ್ಷಿಯಾಗಿದ್ದು ಚಾಮುಂಡೇಶ್ವರಿ ಕ್ಷೇತ್ರ. ಕಳೆದ ವಿಧಾನಸಭಾ ಸಾರ್ವತ್ರಿಕಾ ಚುನಾವಣೆ ವೇಳೆ ಸಿದ್ದರಾಮಯ್ಯ, ಜಿ.ಟಿ ದೇವೇಗೌಡ ಕಾರಣದಿಂದ ಚಾಮುಂಡೇಶ್ವರಿ ಕ್ಷೇತ್ರ ರಾಜ್ಯದ ಜನರ ಗಮನ ಸೆಳೆದಿತ್ತು.. ಇದೀಗ ಮೈಸೂರು ಜಿಲ್ಲೆಯ ಮತ್ತೊಂದು ಕ್ಷೇತ್ರ ಹುಣಸೂರು ಉಪಚುನಾವಣೆಯ ಕಾರಣದಿಂದ ಭಾರೀ ಸೌಂಡ್ ಮಾಡ್ತಿದೆ.. ಯಾಕಂದ್ರೆ ಕಾಂಗ್ರೆಸ್ ನಲ್ಲಿ ಹುಟ್ಟಿ, ಜೆಡಿಎಸ್ ನಲ್ಲಿ ಹಾರಾಡಿ ಇದೀಗ ಹಳ್ಳಿ ಹಕ್ಕಿ ಖ್ಯಾತಿಯ ಹೆಚ್ . ವಿಶ್ವನಾಥ್  ಬಿಜೆಪಿಯಿಂದ ಉಪಚುನಾವಣೆಯ ಹುರಿಯಾಳಾಗಿದ್ದಾರೆ.. ಸತತ ರಡು ಬಾರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ನ ಹೆಚ್.ಪಿ ಮಂಜುನಾಥ್ ರನ್ನ ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ಧೇ ಮಾಡಿದ್ದ ಹೆಚ್. ವಿಶ್ವನಾಥ್ ಸೋಲಿಸಿದ್ರು.. ಆದ್ರೆ, ಕಳೆದ ಮೂರು ತಿಂಗಳ ಹಿಂದೆ ಕುಮಾರಸ್ವಾಮಿ ಸರ್ಕಾರ ಕೆಡವಲು ವಿಶ್ವನಾಥ್ ರಾಜೀನಾಮೆ ನೀಡಿದ್ರು.. 17 ಶಾಸಕರು ಸಹ ಸರ್ಕಾರ ಬಿದ್ದ ತಕ್ಷಣ ನಾವೆಲ್ಲಾ ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿಯಾಗ್ತಾವೇ ಅಂತ ಕನಸು ಕಂಡಿದ್ರು. ಆದ್ರೆ, ಅಂದಿನ ಸ್ಪೀಕರ್ ಕೊಟ್ಟ ಶಾಕ್ ನಿಂದಾಗಿ 17 ಶಾಸಕರು ಅನರ್ಹರಾಗಿದ್ರು. ಅಲ್ಲದೇ ಈ ವಿಧಾನಸಭೆಯಅವಧಿ ಮುಗಿಯೋ ವರೆಗೂ ಚುನಾವಣೆಯಲ್ಲಿ ಸ್ಪರ್ಧೇ ಮಾಡದಂತೆ ಸ್ಪೀಕರ್ ಕೊಟ್ಟ ಆದೇಶದಿಂದ ಕಂಗಾಲಾಗಿ ಹೋಗಿದ್ರು.. ಆದ್ರೆ, ಸುಪ್ರೀಂ ಕೋರ್ಟ್ ಅನರ್ಹತೆ ಎತ್ತಿ ಹಿಡಿದು ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅವಕಾಶ ಕೊಟ್ಟಿದೆ. ಮೊನ್ನೆ ವರೆಗೂ ಹುಣಸೂರಿನಲ್ಲಿ ಚನ್ನಪಟ್ಟಣ ಮಾಜಿ ಶಾಸಕ ಸಿ.ಪಿ ಯೋಗೀಶ್ವರ್ ಕಣಕ್ಕಿಳಿತಾರೆ ಅಂತನೇ ಮಾತನಾಡಿಕೊಳ್ಳಲಾಗ್ತಿತ್ತು.  ಆದ್ರೆ, ಕಡೇ ಗಳಿಗೆಯಲ್ಲಿ ಹಳ್ಳಿ ಹಕ್ಕಿಯೇ ಬಿಜೆಪಿಯ ಹುರಿಯಾಳಾಗಿದ್ದಾರೆ.. ಇನ್ನು ಕಾಂಗ್ರೆಸ್ ನಿಂದ ಈಗಾಗಲೇ ಸಿದ್ದರಾಮಯ್ಯ ಶಿಷ್ಯ, ಮಾಜಿ ಶಾಸಕ ಹೆಚ್.ಪಿ ಮಂಜುನಾಥ್ ನಾಮಪತ್ರ ಸಲ್ಲಿಸಿ ಪ್ರಚಾರ ಶೂರು ಮಾಡಿಕೊಂಡಿದ್ದಾರೆ.. ಜೆಡಿಎಸ್ ತನ್ನ ಕ್ಷೇತ್ರವನ್ನ ಮರಳಿ ಪಡೆಯುವ ದೃಷ್ಠಿಯಿಂದ ಪ್ರಬಲಅಭ್ಯರ್ಥಿ ಕಣಕಗಕಿಳಿಸ್ತಾರೆ ಅಂತ ಅಂದುಕೊಳ್ಳಲಾಗ್ತಿತ್ತು. ಆದ್ರೆ, ಸಿ ಸೋಮಶೇಖರ್ ಎಂಬುವವರಿಗೆ ಟಿಕೆಟ್ ಘೋಷಣೆ ಮಾಡಿದ್ದು ಇದೀಗ ಹುಣಸೂರಿನಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆಯಂತೆ ಕಂಡರೂ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತುರುಸಿನ ಸ್ಪರ್ಧೇ ಗೋಚರವಾಗ್ತಿದೆ..

ಹೆಚ್. ವಿಶ್ವನಾಥ್ ಪ್ಲಸ್, ಮೈನಸ್ ಪಾಯಿಂಟ್ ಏನು..?

ಹೆಚ್. ವಿಶ್ವನಾಥ್ ತವರು ಕ್ಷೇತ್ರ ಕೆ.ಆರ್ ನಗರ, ಆದ್ರೆ, 2018ರ ಚುನಾವಣೆ ವೇಳೆ ಸಾರಾ ಮಹೇಶ್ ಮೂಲಕ ಜೆಡಿಎಸ್ ಗೆ ಸೇರಿದ ವಿಶ್ವನಾಥ್ ಸ್ಪರ್ಧಿಸಲು ಆಯ್ಕೆ ಮಾಡಿಕೊಂಡಿದ್ದು ಹುಣಸೂರು ಕ್ಷೇತ್ರ.. ಹುಣಸೂರಿನಲ್ಲಿ ಜಿ.ಟಿ ದೇವೇಗೌಡರ ಕಾರಣದಿಂದಾಗಿ ಒಕ್ಕಲಿಗ ಮತಗಳು ವಿಶ್ವನಾಥ್ ಗೆ ಚಲಾವಣೆಯಾದವು, ಜೊತೆಗೆ ಕಳೆದ ಚುನಾವಣೆ ವೇಳೆ ಜೆಡಿಎಸ್-ಬಿಜೆಪಿ ಒಳ ಒಪ್ಪಂದದ ಕಾರಣದಿಂದಾಗಿ  ನಾಯಕ ಸಮುದಾಯದ ಮತಗಳು ಜೆಡಿಎಸ್ ಕೈ ಹಿಡಿದಿತ್ತು.. ಹೀಗಾಗಿ ಕಾಂಗ್ರೆಸ್ ನಿಂದ ಎರಡು ಅವಧಿಗೆ ಶಾಸಕರಾಗಿದ್ದ ಮಂಜುನಾಥ್ ಕಳೆದ ಚುನಾವಣೆಯಲ್ಲಿ ಸೋಲು ಕಂಡರು.. ಆದ್ರೀಗ ವಿಶ್ವನಾಥ್ ಗೆ ಜೆಡಿಎಸ್ ತೊರೆದಿರುವ ಕಾರಣ ಒಕ್ಕಲಿಗ ಮತಗಳು ಬೀಳೋದು ಡೌಟು, ಹಾಗೆಯೇ ಜೆಡಿಎಸ್ ಸಿ ಸೋಮಶೇಖರ್ ಎಂಬುವವರಿಗೆ ಟಿಕೆಟ್ ನೀಡಿದ್ದು ಬಿಜೆಪಿ ವಿಶ್ವನಾಥ್ ಗೆಲುವಿನ ಕನಸಿಗೆ ಕಲ್ಲು ಹಾಕಿದ್ದಾರೆ. ಪ್ರತಾಪ್ ಸಿಂಹ, ರಾಮದಾಸ್, ರಾಮುಲು ತಂತ್ರಗಾರಿಕೆ ವರ್ಕೌಟ್ ಮಾಡಿದ್ರೆ, ಜಿ.ಟಿ ದೇವೇಗೌಡ ಹಾಗೂ ಕ್ಷೇತ್ರದ ಒಕ್ಕಲಿಗರು ಬಿಜೆಪಿ ಕೈ ಹಿಡಿದರೆ ಮಾತ್ರ ಹೆಚ್. ವಿಶ್ವನಾಥ್ ವಿಧಾನಸೌಧದ ಮೆಟ್ಟಲು ಹತ್ತಬಹುದು ಜೊತೆಗೆ ಸಚಿವರಾಗಬಹುದು. ಆದ್ರೆ, ಸದ್ಯದ ವಾತಾವರಣ ಕ್ಷೇತ್ರದಲ್ಲಿ ವಿಶ್ವನಾಥ್ ಪರವಾಗಿಲ್ಲ..

ಕಾಂಗ್ರೆಸ್ ಮಂಜುನಾಥ್ ಪ್ಲಸ್, ಮೈನಸ್ ಪಾಯಿಂಟ್ ಏನು..?

2018 ರ ಚುನಾವಣೆ ವೇಳೆ ರಾಜ್ಯದ ಬಹುತೇಕ ಕಡೆ ಸಿದ್ದರಾಮಯ್ಯ ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆ ಕಾಡಿತ್ತು.. ಆದ್ರೆ ಹುಣಸೂರಿನಲ್ಲಿ ಕಾಂಗ್ರೆಸ್ ಸುಲಭವಾಗಿ ಗೆಲ್ಲಬಹುದಾಗಿತ್ತು ಆದ್ರೆ,  ಮಂಜುನಾಥ್ ಸಣ್ಣಪುಟ್ಟ ತಪ್ಪುಗಳಿಂದ ಸೋಲುವಂತಾಗಿತ್ತು..  ಜೊತೆಗೆ ಮಂಜುನಾಥ್ ಅವರ ಒರಟು ತನದ ಮಾತುಗಳು ಹುಣಸೂರಿನಲ್ಲಿ ಜೆಡಿಎಸ್ ಗೆಲುವಿಗೆ ಕಾರಣವಾಗಿತ್ತು.. ಈ ಬಾರಿ ಹಳೆಯ ತಪ್ಪುಗಳು ಮರುಕಳಿಸದಂತೆ ಮಂಜುನಾಥ್ ಎಚ್ಚರ ವಹಿಸಿದ್ದಾರೆ.. ಕಾಂಗ್ರೆಸ್ ಅಭ್ಯರ್ಥಿ ಸಹೋದರ ಅಮರ್ ನಾಥ್  ಹಾಗೂ ಅಮರನಾಥ್ ಪತ್ನಿ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಹುಣಸೂರಿನಲ್ಲಿ ಮತದಾರರ ಮನೆ ಬಾಗಿಲಿಗೆ ತೆರಳಿ ಕಾಂಗ್ರೆಸ್ ಗೆಲುವಿಗೆ ಶ್ರಮ ಹಾಕ್ತಿದ್ದಾರೆ.. ಇನ್ನು ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಬಹುತೇಕ ಜೆಡಿಎಸ್ ಮತಗಳನ್ನ ಪಡೆಯುವುದರಿಂದ ವಿಶ್ವನಾಥ್  ಗೆ ಹಿನ್ನಡೆಯಾಗಲಿದೆ.. ಜೊತೆಗೆ ಜಿ.ಟಿ ದೇವೇಗೌಡ ಜೆಡಿಎಸ್ ಪರ ಪ್ರಚಾರ ಮಾಡಲು ನಿರಾಕರಿಸಿರುವುದು ಕಾಂಗ್ರೆಸ್ ಗೆ ಅನುಕೂಲವಾಗಲಿದೆ.. ಆದ್ರೆ, ಕುಮಾರಸ್ವಾಮಿ ಕಡೇ ಗಳಿಗೆಯಲ್ಲಿ ಏನಾದ್ರೂ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಿದ್ರೆ ಕಾಂಗ್ರೆಸ್ ಹಾದಿ ಕಠಿಣವಾಗಬಹುದು.. ಅದರ ಹೊರತಾಗಿ ಹುಣಸೂರಿನಲ್ಲಿ ಸದ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿಯ ಹವಾ ಜೋರಾಗಿದೆ.. ಯಡಿಯೂರಪ್ಪ ಲೆಕ್ಕಾಚಾರದಂತೆ ಜಾತಿಸಮೀಕರಣ ವರ್ಕೌಟ್ ಆದ್ರೆ, ಹುಣಸೂರಿನಲ್ಲಿ ಕಮಲ ಅರಳುವ ಸಾಧ್ಯತೆ ಇದೆ.. ಇಲ್ಲವಾದಲ್ಲಿ ಈ ಬಾರಿ ಹೆಚ್.ಪಿ ಮಂಜುನಾಥ್ ಗೆಲುವು ಗ್ಯಾರಂಟಿ..

ಜೆಡಿಎಸ್ ನ ಸೋಮಶೇಖರ್ ಬಲಾಬಲ..!

ಜೆಡಿಎಸ್ ತನ್ನ ಸ್ಥಾನವ್ನ ಹೇಗಾದದರೂ ಮಾಡಿಉಳಿಸಿಕೊಳ್ಳಬೇಕು ಅಂತ ಟ್ರೈ ಮಾಡ್ತಿದೆ. ಆದ್ರೆ, ಸ್ವತಃ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ  ಹುಣಸೂರಿನಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಅಂತ ಭವಿಷ್ಯ ನುಡಿದಿದ್ದಾರೆ. ಆದ್ರೆ, ಕುಮಾರಸ್ವಾಮಿ, ದೇವೇಗೌಡರ ವರ್ಚಸ್ಸು ನಂಬಿಕೊಂಡಿರುವ ಅಭ್ಯರ್ಥಿ ಸೋಮಶೇಖರ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.. ಆದ್ರೆ, ಕ್ಷೇತ್ರದಲ್ಲಿ ಸದ್ಯಕ್ಕೆ ಜೆಡಿಎಸ್ ಉಳಿದ ಎರಡು ಪಕ್ಷಗಳಿಗಿಂತ ಎಲ್ಲಾ ವಿಚಾರದಲ್ಲಿ ತಟಸ್ಥವಾಗಿರುವುದು ಫಲಿತಾಂಶವನ್ನ ಇಂದೇ ಗೋಚರವಾಗುವಂತೆ ಮಾಡಿದೆ..

ಯಸ್ ವೀಕ್ಷಕರೇ ನಿಮ್ಮ ಪ್ರಕಾರ ಹುಣಸೂರಿನಲ್ಲಿ ಯಾರು ಗೆಲ್ತಾರೆ..? ಬಿಜೆಪಿಯ ವಿಶ್ವನಾಥ್, ಕಾಂಗ್ರೆಸ್ ನಿಂದ ಹೆಚ್.ಪಿ ಮಂಜುನಾಥ್ ಹಾಗೂ ಜೆಡಿಎಸ್ ನ ಸೋಮಶೇಖರ್..? ಇವರಲ್ಲಿ ಯಾರು..? ಈ ಬಗ್ಗೆ ಅಭಿಪ್ರಾಯವನ್ನ ಕಾಮೆಂಟ್ ಮಾಡಿ.. ಧನ್ಯವಾದಗಳು..

- Advertisement -

Latest Posts

Don't Miss