ಸಾರ್ವಜನಿಕ ಕಾರ್ಯಕ್ರಮದಲ್ಲಿ ನೃತ್ಯ ಮಾಡಿದಳೆಂದು ಹಿಗ್ಗಾಮುಗ್ಗಾ ಥಳಿಸಿದ ಪತಿ: Viral Video

National News: ಕಾರ್ಯಕ್ರಮಗಳಲ್ಲಿ ಡಾನ್ಸ್ ಮಾಡೋದು, ಎಂಜಾಯ್ ಮಾಡೋದು ಇತ್ತೀಚೆಗೆ ಕಾಮನ್ ಆಗಿದೆ. ವಯಸ್ಸಿನ ಮಿತಿ ಇಲ್ಲದೇ, ಎಲ್ಲರೂ ನೃತ್ಯ ಮಾಡಿ ಸಂಭ್ರಮಿಸುತ್ತಾರೆ. ಅದರಲ್ಲೂ ಸೋಶಿಯಲ್ ಮೀಡಿಯಾ ಜಮಾನಾದಲ್ಲಿ ನಾವು, ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಹಲವರು ಚಿತ್ರ ವಿಚಿತ್ರವಾಗಿ ನೃತ್ಯ ಮಾಡೋದನ್ನು ನೋಡಿರ್ತೀವಿ.

ಆದರೆ ತಮ್ಮ ಮನೆಯ ಹೆಣ್ಣು ಮಕ್ಕಳು ಕಾರ್ಯಕ್ರಮದಲ್ಲೆಲ್ಲಾ ಡಾನ್ಸ್ ಮಾಡೋದು ಹಲವು ಪುರುಷರಿಗೆ ಇಷ್ಟವಾಗುವುದಿಲ್ಲ. ಇತ್ತೀಚೆಗೆ ವಿವಾಹಿತೆಯರು ಕಾರ್ಯಕ್ರಮಗಳಲ್ಲಿ ಡಾನ್ಸ್ ಮಾಡಿ ಎಂಜಾಯ್ ಮಾಡುತ್ತಾರೆ. ಆದರೆ ಕೆಲವು ಮಹಿಳೆಯರಿಗೆ ಇಂದಿಗೂ ನೃತ್ಯ ನಿಷಿದ್ಧ.

ಅಂಥದ್ದೇ ಓರ್ವ ವಿವಾಹಿತೆ ಕಾರ್ಯಕ್ರಮದಲ್ಲಿ ಬಂದು ಜೋಶ್‌ನಲ್ಲಿ ಡಾನ್ಸ್ ಮಾಡಿದ್ದಾಳೆ. ಆದರೆ ಅಲ್ಲೇ ಇದ್ದ ಆಕೆಯ ಪತಿಗೆ ಇದು ಇಷ್ಟವಾಗಲಿಲ್ಲ. ಹಾಗಾಗಿ ಆತ ಕೂಡ ಸ್ಟೆಪ್ ಹಾಕುತ್ತ ಬಂದು, ಆಕೆಗೆ ಲತ್ತೆ ನೀಡಿದ್ದಾನೆ. ಆಕೆಯೂ ಅದೇ ರೀತಿ ಆತನ ಮೇಲೆ ಹಲ್ಲೆ ಮಾಡಿದ್ದಾಳೆ. ಇದಕ್ಕೆ ಕಾರಣವೇನೆಂದರೆ, ಆಕೆ ಮದುವೆ ಕಾರ್ಯಕ್ರಮದಲ್ಲಿ ಪುರುಷರ ಮಧ್ಯ ನಿಂತು, ಮನಸ್ಸಿಗೆ ಬಂದ ಹಾಗೆ ಕುಣಿದಿದ್ದಾಳೆ.

ಇದನ್ನು ಕಂಡು ಗಂಡನ ಪಿತ್ತ ನೆತ್ತಿಗೇರಿದೆ. ಹಾಗಾಗಿ ಆತ ಆಕೆಗೆ ಥಳಿಸಿ, ಅಲ್ಲಿಂದ ಕರೆದ“ಯ್ದಿದ್ದಾನೆ. ಈ ಘಟನೆ ನಡೆದಿದ್ದು ಎಲ್ಲಿ ಅನ್ನೋದು ತಿಳಿದಿಲ್ಲ. ಇದು ವೈರಲ್ ವೀಡಿಯೋವಾಗಿದ್ದು, ಎಕ್ಸ್ ಖಾತೆಯಲ್ಲಿ ವೈರಲ್ ಆಗಿದೆ.

About The Author