ಕರ್ನಾಟಕ ಟಿವಿ : ಕೊರೊನಾ ಹಿನ್ನೆಲೆ ಮನೆ ಮಾಲೀಕರು ಬಾಡಿಗೆದಾರರು ಬೇರೆ ರಾಜ್ಯದಿಂದ ಬಂದ್ರೆ ಮನೆಗೆ ಸೇರಿಸಿಲ್ಲ.. ನಗರದಿಂದ ಬಂದ್ರೆ ಹಳ್ಳಿಗೆ ಜನ ಸೇರಿಸ್ತಿಲ್ಲ.. ಇದೀಗ ವ್ಯಕ್ತಿಯೊಬ್ಬ ಕೊರೊನಾಗೆ ಹೆದರಿ ತನ್ನ ಹೆಂಡತಿ ಮಗನನ್ನೇ ಮನೆಗೆ ಸೇರಿಸದ ಘಟನೆ ಬೆಂಗಳೂರಿನ ಸರ್ಜಾಪುರದ ಅಂಬೇಡ್ಕರ್ ನಗರದಲ್ಲಿ ನಡೆದಿದೆ. ಕೊರೊನಾ ಆರಂಭದ ಸಂದರ್ಭದಲ್ಲಿ ಮಹಿಳೆ ತನ್ನ ಪುತ್ರನ ಜೊತೆ ತವರಿಗೆ ತೆರಳಿದ್ರು.. ಲಾಕ್ ಡೌನ್ ಹಿನ್ನೆಲೆ ವಾಪಸ್ ಬರಲು ಸಾಧ್ಯವಾಗಿರಲಿಲ್ಲ.. ಇದೀಗ ರೈಲು, ಬಸ್ ಸಂಚಾರ ಆರಂಭವಾದ ಹಿನ್ನೆಲೆ ಪುತ್ರನ ಜೊತೆ ಮಹಿಳೆ ತನ್ನ ಗಂಡನ ಮನೆಗೆ ಬಂದಿದ್ದಾಳೆ. ಆದ್ರೆ, ಗಂಡ 14 ದಿನ ಕ್ವಾರಂಟೈನ್ ಮುಗಿಸಿ ಕೊರೊನಾ ಟೆಸ್ಟ್ ನೆಗೆಟಿವ್ ರಿಪೋರ್ಟ್ ತರದೆ ಮನೆಗೆ ಸೇರಿಸಲ್ಲ ಅಂತ ಪಟ್ಟು ಹಿಡಿದಿದ್ದಾನೆ. ನಂತರ ಗಂಡನ ಹುಚ್ಚಾಟಕ್ಕೆ ಬೇಸತ್ತು ಮಹಿಳೆ ವನಿತಾ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ವನಿತಾ ಸಹಾಯ ವಾಣಿ ಹಾಗೂ ಸ್ಥಳೀಯ ಪೊಲೀಸರು ವ್ಯಕ್ತಿಗೆ ಬುದ್ಧಿ ಹೇಳಿ ಹೆಂಡತಿ ಮಗನನ್ನ ಮನೆಗೆ ಸೇರುವಂತೆ ಮಾಡಿದ್ದಾರೆ..
ನಾಗೇಂದ್ರ, ಕರ್ನಾಟಕ ಟಿವಿ, ಬೆಂಗಳೂರು