Wednesday, February 5, 2025

Latest Posts

Family problem: ಹೆಂಡತಿಯನ್ನು ಕೊಲೆ  ಮಾಡಿ ನಂತರ ಅತ್ತೆಗೆ ತಿಳಿಸಿ ಮನೆಗೆ ಕರೆಸಿಕೊಂಡ ಅಳಿಯ

- Advertisement -

ಬೆಂಗಳೂರು: ನಗರದ ಮೂಡಲಪಾಳ್ಯದ  ಶಿವಾನಂದ ನಗರ ಶಂಕರ್ ಎನ್ನುವ ವ್ಯಕ್ತಿ  ತನ್ನ ಪತ್ನಿಯ ಶೀಲದ ಬಗ್ಗೆ ಅನುಮಾನ ಪಟ್ಟು  ಇನ್ನೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಅನುಮಾನಿಸಿ ಕೊಲೆ ಮಾಡಿದ್ದಾನೆ

ಹೌದು ಯಾಕೋ ಇತ್ತೀಚಿನ ದಿನಗಳಲ್ಲಿ ಗಂಡ ಹೆಂಡತಿ ಮದ್ಯೆ ಚಿಕ್ಕ ಚಿಕ್ಕ ವಿಷಯಕ್ಕೆ ಜಗಳಗಳಾಗಿ ಕೊನೆಗೆ ಒಬ್ಬರ ಪ್ರಾಣ ಪಕ್ಷಿ ಹಾರುವ ಮೂಲಕ ಕೌಟುಂಬಿಕ ಕಲಹಕ್ಕೆ ಅಂತ್ಯ ಹಾಡುತ್ತಾರೆ. ಬೆಂಗಳೂರಿನ ಮೂಡಲಪಾಳ್ಯದ ಶಿವಾನ0ದ ನಗರದಲ್ಲಿ ದಂಪತಿಗಳಾದ ಶಂಕರ್ ಮತ್ತು ಗೀತಾ ನಡುವೆ ಘಟನೆ ನಡೆದಿದ್ದು ಗಂಡ ಹೆಂಡತಿ ಮದ್ಯೆ ಅಕ್ರಮ ಸಂಬಂದದ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು ಆದರೆ ಬುದುವಾರ ಗೀತಾಳಿಗಾಗಿ ಯಮರಾಜ ಕಾದು ಕುಳಿತಿದ್ದ ಅಂತ ಕಾಣಿಸುತ್ತೆ ಶಂಕರ್ ಮತ್ತು ಗೀತಾ  ನಡುವೆ ಇದೆ ವಿಚಾರವಾಗಿ ಜಗಳ ನಡೆದಿದೆ ಆದರೆ ಇಂದು ಗೀತಾಳ ಪ್ರಾಣ ಪಕ್ಷಿ ಹಾರುವುದರ ಮೂಲಕ ಅಂತ್ಯಗೊಂಡಿದೆ.

ಶಂಕರ್  ಹೆಂಡತಿಯನ್ನು ಅನುಮಾನಿಸಿ ಇವಳನ್ನು ಹೀಗೆ ಬಿಟ್ಟರೆ ಅಕ್ರಮ ಸಂಬಂಧ ಹೊಂದಿ ಮನೆಯ ಮರ್ಯಾದೆ ಹಾಳು ಮಾಡುತ್ತಾಳೆ ಅಂತ ತಿಳಿದು ಕೊಲೆ ಮಾಡಿದ್ದಾನೆ ನಂತರ ಅತ್ತೆಗೆ ಫೋನ್ ಮಾಡಿ ನಿಮ್ಮ ಮಗಳನ್ನು ಕೊಲೆ ಮಾಡಿದ್ದೇನೆ ಎಂದು ಹೇಳಿ ಶವವನ್ನು ಸೋಫಾದ ಮೇಲೆ ತಂದು ಕೂರಿಸಿದ್ದಾನೆ.ಸದ್ಯ  ಚಂದ್ರಾ ಲೇಔಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ  ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.

Jawan: ಜವಾನ್ ಸಿನಿಮಾದ ಹಾಡಿನ ಚಿತ್ರೀಕರಣ್ಕಕ್ಕೆ ಸುರಿದ ದುಡ್ಡು ಎಷ್ಟು ಕೋಟಿ ಗೊತ್ತಾ?

School holiday: ರಾಯಚೂರು ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ

Leaopard : ಬಾಲಕನ ಮೇಲೆ ದಾಳಿ  ಮಾಡಿದ ಚಿರತೆ….!

- Advertisement -

Latest Posts

Don't Miss