- Advertisement -
Hubli News: ಹುಬ್ಬಳ್ಳಿ: ಪಕ್ಕದ ಮನೆಯವರ ಅಂಗಳದಲ್ಲಿ ಆಟವಾಡುತ್ತಿದ್ದ ಐದು ವರ್ಷದ ವಿಕಲಚೇತನ ಹೆಣ್ಣು ಮಗುವನ್ನ ಅಪಹರಣ ಮಾಡಿರುವ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದು, ಆರೋಪಿಯನ್ನ ನಮ್ಮ ಕೈಗೆ ಕೊಡಿ ಎಂದು ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಆಟವಾಡುತ್ತಿದ್ದ ಮಗುವಿಗೆ ಮೊದಲು ಮಾತನಾಡುವ ಆರೋಪಿ, ನಂತರ ಅವಳನ್ನ ಎತ್ತಿಕೊಂಡು ಓಡಿ ಹೋಗುವುದು ಸಿಸಿಟಿವಿಯಲ್ಲಿ ಗೋಚರವಾಗಿದೆ. ಈ ಬಗ್ಗೆ ಹೋರಾಟ ನಡೆಸುತ್ತಿರುವ ಸ್ಥಳೀಯರು, ಆರೋಪಿಯನ್ನ ನಮ್ಮ ಕೈಗೆ ಕೊಡಿ ಎಂದು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.
ಈ ನಡುವೆ ಘಟನೆಯ ಕುರಿತು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು, ಆರೋಪಿಯನ್ನ ಬೇಗ ಬಂಧಿಸಿ ಮುಂದಿನ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದರು.
ಚಿಕ್ಕ ಮಗುವಿನ ಪ್ರಾಣ ಹೋಗಿದ್ದರಿಂದ ಸ್ಥಳೀಯರು ಜಾತಿ-ಮತ ಮರೆತು ಹೋರಾಟದಲ್ಲಿ ಭಾಗಿಯಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಆಗ್ರಹಿಸಿದರು.
- Advertisement -